Star Fashion 2025: ಚೀತಾ ಪ್ರಿಂಟ್ಸ್ನ ಗ್ಲಾಮರಸ್ ಗೌನ್ನಲ್ಲಿ ಕಾಣಿಸಿಕೊಂಡ ಚಿತ್ರಾಂಗದಾ
ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ಶ್ವೇತ ವರ್ಣದ ಚೀತಾ ಪ್ರಿಂಟ್ಸ್ನ ಆಫ್ ಶೋಲ್ಡರ್ ಕಾರ್ಸೆಟ್ ಶೈಲಿಯ ಬಾಡಿಕಾನ್ ಗೌನ್ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿರುವ ಈ ಔಟ್ಫಿಟ್ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.
ಚಿತ್ರಾಂಗದ ಸಿಂಗ್, ಬಾಲಿವುಡ್ ನಟಿ -
ವೈಟ್ ಚೀತಾ ಪ್ರಿಂಟ್ಸ್ನ ಆಫ್ ಶೋಲ್ಡರ್ನ ಗ್ಲಾಮರಸ್ ಗೌನ್ನಲ್ಲಿ ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ಕಾಣಿಸಿಕೊಂಡಿದ್ದಾರೆ.
ಗ್ಲಾಮರಸ್ ಚೀತಾ ಗೌನ್
ಶ್ವೇತ ವರ್ಣದ ಕಾಂಬಿನೇಷನ್ನ ಚೀತಾ ಪ್ರಿಂಟ್ಸ್ ಇರುವಂತಹ ಸ್ಲೀವ್ ಡಿಸೈನ್ ಇಲ್ಲದ ಆಫ್ ಶೋಲ್ಡರ್ ಬಾಡಿಕಾನ್ ಗೌನ್ ಚಿತ್ರಾಂಗದಾ ಸಿಂಗ್ ಅವರನ್ನು ಸವಾರಿ ಮಾಡಿದ್ದು, ಅವರಿಗೆ ಗ್ಲಾಮರಸ್ ಲುಕ್ ನೀಡಿದೆ. ನೋಡಲು ಕಾರ್ಸೆಟ್ ವಿನ್ಯಾಸದಂತಿರುವ ಈ ಬಾಡಿಕಾನ್ ಗೌನ್ ಅವರ ಬಾಡಿ ಮಾಸ್ ಇಂಡೆಕ್ಸ್ಗೆ ಮ್ಯಾಚ್ ಆಗುವಂತಿದೆ. ಅವರಿಗೆ ಯಂಗ್ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.
ಚೀತಾ ಪ್ರಿಂಟೆಡ್ ಔಟ್ಫಿಟ್
ಅಂದಹಾಗೆ, ಈ ವಿಂಟರ್ ಸೀಸನ್ನಲ್ಲಿ ಈಗಾಗಲೇ ಫ್ಯಾಷನ್ ಲೋಕಕ್ಕೆ ನಾನಾ ಬಗೆಯ ಅನಿಮಲ್ ಪ್ರಿಂಟ್ಸ್ ಇರುವಂತಹ ಔಟ್ಫಿಟ್ಗಳು ಮರು ಎಂಟ್ರಿ ನೀಡಿವೆ. ಅದರಲ್ಲೂ ಪಾರ್ಟಿವೇರ್ಗಳಲ್ಲಿ ಇವು ಹೆಚ್ಚಾಗಿ ಕಾಣಿಸಿಕೊಂಡಿವೆ. ಅವುಗಳಲ್ಲಿ ಇದೀಗ ಚೀತಾ ಪ್ರಿಂಟ್ಸ್ನವು ಅತಿ ಹೆಚ್ಚು ಟ್ರೆಂಡಿಯಾಗಿವೆ. ಅದರಲ್ಲೂ ಚೀತಾ ಪ್ರಿಂಟ್ಸ್ ನ್ಯಾಚುರಲ್ ಶೇಡ್ನಲ್ಲಿ ಕಾಣಿಸಿಕೊಳ್ಳುವ ಬದಲು ಪ್ರಯೋಗಾತ್ಮಕವಾಗಿ ಲೈಟ್ ಕಲರ್ ಕಾಂಬಿನೇಷನ್ನಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ಸಾಕ್ಷಿ, ಚಿತ್ರಾಂಗದಾ ಧರಿಸಿರುವ ಶ್ವೇತ ವರ್ಣದ ಕಾಂಬಿನೇಷನ್ನಲ್ಲಿರುವ ಆಫ್ ಶೋಲ್ಡರ್ ಗೌನ್ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಚಿತ್ರಾಂಗದಾ ಫ್ಯಾಷನ್ ಜರ್ನಿ
ಚಿತ್ರಾಂಗದಾ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವಲ್ಲ, ಅನೇಕ ಫ್ಯಾಷನ್ ಶೋಗಳಲ್ಲೂ ಶೋ ಸ್ಟಾಪರ್ ಆಗಿ ವಾಕ್ ಮಾಡಿದ್ದಾರೆ. ಆಗಾಗ್ಗೆ ಒಂದಿಷ್ಟು ಫ್ಯಾಷನ್ ಫೋಟೋಶೂಟ್ಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ.
ಇದೀಗ ಈ ಸೀಸನ್ನಲ್ಲಿ ಟ್ರೆಂಡಿಯಾಗಿರುವ ಅನಿಮಲ್ ಪ್ರಿಂಟ್ಸ್ನ ಗ್ಲಾಮರಸ್ ಗೌನ್ನಲ್ಲಿ ಕಾಣಿಸಿಕೊಂಡಿರುವುದು ಫ್ಯಾಷನ್ ಪ್ರಿಯರ ಮೆಚ್ಚುಗೆ ಗಳಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.