ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ಮಹಿಳೆಯರನ್ನು ಸೆಳೆದ ಅನುಪಮಾ ಖ್ಯಾತಿಯ ರೂಪಾಲಿಯ ಸೀರೆ ಗೌನ್‌

ಸೂಪರ್‌ ಡ್ಯೂಪರ್‌ ಹಿಟ್‌ ಸೀರಿಯಲ್‌ ಅನುಪಮಾ ಖ್ಯಾತಿಯ ರೂಪಾಲಿ ಗಂಗೂಲಿಯ ಪ್ರಿ ಡ್ರೇಪ್ಡ್‌ ಸೀರೆ ಗೌನ್‌ ಮಹಿಳೆಯರನ್ನು ಸೆಳೆದಿದೆ. ರೂಪಾಲಿ ಗಂಗೂಲಿ ಉಟ್ಟಿರುವ ಪಾರ್ಟಿವೇರ್‌ ಪ್ರಿ ಡ್ರೇಪ್ಡ್ ಸೀರೆ ಡಾರ್ಕ್‌ ಶೇಡ್‌ನದ್ದಾಗಿದ್ದು, ಕತ್ತಲೆಯಲ್ಲೂ ಮಿನುಗುವ ಸಿಕ್ವೀನ್ಸ್ ಡಿಸೈನ್‌ ಹೊಂದಿದೆ. ಇದ್ಯಾವ ಬಗೆಯ ವಿಶೇಷ ಸೀರೆ ಗೌನ್‌? ಇಲ್ಲಿದೆ ವಿವರ.

ಚಿತ್ರಗಳು: ರೂಪಾಲಿ ಗಂಗೊಲಿ, ನಟಿ
1/5

ಸೂಪರ್‌ ಡ್ಯೂಪರ್‌ ಹಿಟ್‌ ಸೀರಿಯಲ್‌ ಅನುಪಮಾ ಖ್ಯಾತಿಯ ರೂಪಾಲಿ ಗಂಗೂಲಿಯ ರೆಡಿಮೇಡ್‌ ಸೀರೆ ಗೌನ್‌ ಸೀರೆ ಪ್ರಿಯ ಮಹಿಳೆಯರನ್ನು ಸೆಳೆದಿದೆ.

2/5

ಅನುಪಮಾ ಸೀರೆಗಳಿಗೆ ಬಾರಿ ಬೇಡಿಕೆ

ಹೌದು, ಅನುಪಮಾ ಹಿಂದಿ ಸೀರಿಯಲ್‌ ಮೂಲಕವೇ ಜಾಗತೀಕ ಮಟ್ಟದಲ್ಲಿ ಸಾಕಷ್ಟು ಮಹಿಳಾ ಅಭಿಮಾನಿಗಳನ್ನು ಗಳಿಸಿರುವ ನಟಿ ರೂಪಾಲಿ ಗಂಗೂಲಿ ಇವೆಂಟ್‌ವೊಂದರಲ್ಲಿ, ಮಿನುಗುವ ಪ್ರೀ ಡ್ರೇಪ್ಡ್‌ ಸೀರೆ ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಈ ಸ್ಪೆಷಲ್‌ ಔಟ್‌ಫಿಟ್‌ ಇದೀಗ ಎಲ್ಲಾ ವಯಸ್ಸಿನ ಮಹಿಳೆಯರನ್ನು ಆಕರ್ಷಿಸಿದೆ.

3/5

ಟ್ರೆಂಡ್‌ ಸೆಟ್ಟರ್‌ ಆಗಿರುವ ರೂಪಾಲಿ ಗಂಗೂಲಿ

ಅಂದಹಾಗೆ, ರೂಪಾಲಿ ಗಂಗೂಲಿ ಯಾವ ಮಟ್ಟಿಗೆ ಜನಪ್ರಿಯಗೊಂಡಿದ್ದಾರೆ ಎಂದರೇ, ಅವರು ಧಾರಾವಾಹಿಯಲ್ಲಿ ಧರಿಸುವ ಒಂದೊಂದು ಸೀರೆಗಳು ಹಾಗೂ ಔಟ್‌ಫಿಟ್‌ಗಳು ಮಾರುಕಟ್ಟೆಯಲ್ಲಿ ಜನಪ್ರಿಯಗೊಂಡಿವೆ ಇನ್ನೂ ಟ್ರೆಂಡಿಯಾಗುತ್ತಲೇ ಇವೆ.

4/5

ಮಾರುಕಟ್ಟೆಯಲ್ಲಿ ರೂಪಾಲಿ ಪಾರ್ಟಿವೇರ್‌ ಸೀರೆಯ ರಿಪ್ಲಿಕಾ

ಇನ್ನು, ರೂಪಾಲಿ ಈ ಶೈಲಿಯ ಪಾರ್ಟಿವೇರ್‌ ಪ್ರೀ ಡ್ರೇಪ್ಡ್‌ ಸೀರೆ ಉಟ್ಟಿದ್ದನ್ನು ನೋಡಿದರೇ ಮಹಿಳೆಯರು ಸುಮ್ಮನಿರುತ್ತಾರೆಯೇ? ಕಸ್ಟಮೈಸ್ಡ್‌ ಡಿಸೈನ್‌ ಮಾಡಿಸಿ ಧರಿಸುತ್ತಾರೆ. ಪರಿಣಾಮ, ಇದನ್ನು ಮನಗಂಡ ಬ್ರ್ಯಾಂಡೆಡ್‌ ಹಾಗೂ ಲೋಕಲ್‌ ಡಿಸೈನರ್‌ಗಳು ಈಗಾಗಲೇ ಇದೇ ಡಿಸೈನ್‌ ಸೀರೆ ಗೌನನ್ನು ನಾನಾ ವರ್ಣಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಅಷ್ಟೇಕೆ? ಕೆಲವು ಮಾರಾಟಗಾರರಂತೂ ಕೈಗೆಟಕುವ ಬೆಲೆಯಲ್ಲೂ ಬಿಡುಗಡೆಗೊಳಿಸಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ ರಾಜ್‌.

5/5

ಪ್ರೀ ಡ್ರೇಪ್ಡ್ ಸೀರೆ ಗೌನ್‌ ವಿಶೇಷತೆ

ರೂಪಾಲಿ ಗಂಗೂಲಿ ಉಟ್ಟಿರುವ ಪಾರ್ಟಿವೇರ್‌ ಪ್ರಿ ಡ್ರೇಪ್ಡ್ ಸೀರೆ ಡಾರ್ಕ್‌ ಶೇಡ್‌ನದ್ದಾಗಿದ್ದು, ಕತ್ತಲೆಯಲ್ಲೂ ಮಿನುಗುವ ಸಿಕ್ವೀನ್ಸ್ ಡಿಸೈನ್‌ ಹೊಂದಿದೆ. ವೇಸ್ಟ್ ಲೈನ್‌ನ ಎರಡೂ ಕಡೆ ಕಟೌಟ್‌ ವಿನ್ಯಾಸ ಹೊಂದಿದೆ. ಫುಲ್‌ ಸ್ಲೀವ್‌ ಜತೆಗೆ ಫೆದರ್‌ ನೆಕ್‌ಲೈನ್‌ನಿಂದ ಅಲಂಕೃತಗೊಂಡಿದೆ. ರೂಪಾಲಿಯವರನ್ನು ಅತ್ಯಾಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರಾದ ಮಿಂಚು.

ಶೀಲಾ ಸಿ ಶೆಟ್ಟಿ

View all posts by this author