Star Fashion 2026: ಟ್ರೆಂಡಿಯಾಯ್ತು ಅಮೈರಾ ಧರಿಸಿದ ತ್ರೀ ಪೀಸ್ ರಸ್ಟ್ ಆರೆಂಜ್ ಕೋ ಆರ್ಡ್ ಸೆಟ್
Amyra Dastur: ಬಾಲಿವುಡ್‌ನ ಸುಂದರ ನಟಿ ಅಮೈರಾ ದಸ್ತೂರ್ ಧರಿಸಿದ್ದ ತ್ರೀ ಪೀಸ್ ರಸ್ಟ್ ಆರೆಂಜ್ ಕೋ ಆರ್ಡ್ ಸೆಟ್ ಇದೀಗ ಟ್ರೆಂಡಿಯಾಗಿದೆ. ಜೆನ್ ಜಿ ಫ್ಯಾಷನ್‌ಗೆ ಸೇರಿಕೊಂಡಿದೆ. ಇದ್ಯಾವ ಬಗೆಯ ಔಟ್‌ಫಿಟ್? ಇಲ್ಲಿದೆ ಡಿಟೇಲ್ಸ್.
ಬಾಲಿವುಡ್ ನಟಿ ಧರಿಸಿದ್ದ ರಸ್ಟ್ ಆರೆಂಜ್ ಅಥವಾ ಕೋರಲ್ ಶೇಡ್‌ನ ತ್ರೀ ಪೀಸ್ ಕೋ ಆರ್ಡ್ ಸೆಟ್, ಸದ್ಯ ಜೆನ್ ಜಿ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿದೆ.
ಜೆನ್ ಜಿ ಯುವತಿಯರನ್ನು ಸೆಳೆದ ಔಟ್‌ಫಿಟ್
ಹಾಗೆಂದು ಈ ಔಟ್‌ಫಿಟ್ ಹೊಸ ಡಿಸೈನ್‌ದ್ದೇನಲ್ಲ! ಆದರೆ, ಇದನ್ನು 2 ಇನ್ 1 ಬಗೆಯಲ್ಲಿ ಧರಿಸಬಹುದಾಗಿದ್ದು, ಗ್ಲಾಮರಸ್ ಲುಕ್ ಜತೆ ರಿಲ್ಯಾಕ್ಸಿಂಗ್ ಔಟ್‌ಫಿಟ್‌ನಂತೆ ಸಿದ್ಧಗೊಂಡಿದೆ. ಹಾಗಾಗಿ ಈ ಶೈಲಿಯ ಕೋ ಆರ್ಡ್ ಸೆಟ್ ಇಂದಿನ ಜನರೇಷನ್ ಯುವತಿಯರ ಮನಗೆದ್ದಿರುವುದು ಮಾತ್ರವಲ್ಲ, ಈಗಾಗಲೇ ವೀಕೆಂಡ್ ಡ್ರೆಸ್‌ಕೋಡ್‌ನೊಳಗೆ ಸೇರಿಕೊಂಡಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಟ್ರೆಂಡಿಯಾಗಿರುವ ರಸ್ಟ್ ಆರೆಂಜ್ ಕೋ ಆರ್ಡ್
ಇತ್ತೀಚೆಗೆ ರಸ್ಟ್ ಆರೆಂಜ್ ಕಲರ್ ಯಾವ ಮಟ್ಟಿಗೆ ಟ್ರೆಂಡಿಯಾಗಿದೆ ಎಂದರೇ ಇದೀಗ ಕೋ ಆರ್ಡ್ ಸೆಟ್‌ನಲ್ಲೂ ಇದರ ನೆರಳು ಕಾಣಿಸತೊಡಗಿದೆ. ಅಲ್ಲದೇ, ಈ ಜನರೇಷನ್‌ನ ಯುವತಿಯರು ಕೂಡ ಈ ತ್ರೀ ಪೀಸ್ ಕೋ ಆರ್ಡ್ ಸೆಟ್‌ನತ್ತ ಈಗಾಗಲೇ ವಾಲಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಟ್ರೆಂಡ್ ಸೆಟ್ಟರ್ ಆದ ಅಮೈರಾ
ಇನ್ನು, ಈ ಔಟ್‌ಫಿಟ್‌ನ ವಿಶೇಷತೆ ಎಂದರೇ, ಇದು ನೋಡಲು ಟ್ರೆಂಡಿಯಾಗಿರುವುದರೊಂದಿಗೆ ವೀಕೆಂಡ್ ಔಟ್‌ಫಿಟ್ ಕೆಟಗರಿಗೂ ಸೇರುತ್ತದೆ. ಜತೆಗೆ ರಿಲ್ಯಾಕ್ಸೆಷನ್ ನೀಡುವಂತಹ ರೆಸಾರ್ಟ್‌ವೇರ್ ಕೆಟಗರಿಗೂ ಸೇರುತ್ತದೆ. ಒಟ್ಟಿನಲ್ಲಿ, ಅಮೈರಾ ದಸ್ತೂರ್, ಈ ಸೀಸನ್‌ನಲ್ಲಿ ಟ್ರೆಂಡ್ ಸೆಟ್ಟರ್ ಆಗಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಗ್ಲಾಮರಸ್ ಬಾಲಿವುಡ್ ಬೆಡಗಿ ಅಮೈರಾ
ಎಲ್ಲರಿಗೂ ತಿಳಿದಿರುವಂತೆ, ಅಮೈರಾ ಬಾಲಿವುಡ್‌ನ ಸಖತ್ ಗ್ಲಾಮರಸ್ ಹುಡುಗಿ ಮಾತ್ರವಲ್ಲ, ಹಾಟ್ ನಟಿ ಎಂದೇ ಗುರುತಿಸಿಕೊಂಡವರು. ಆಗಾಗ್ಗೆ, ಬಗೆಬಗೆಯ ಫ್ಯಾಷನ್ ಫೋಟೋಶೂಟ್‌ಗಳ ಮುಖಾಂತರ ಸೋಷಿಯಲ್ ಮೀಡಿಯಾದಲ್ಲೂ ಕಾಣಿಸಿಕೊಂಡು ಸಾಕಷ್ಟು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.