ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ನಟಿ ಪಲಕ್‌ ತಿವಾರಿಯ ದುಬಾರಿ ವೆಲ್ವೆಟ್‌ ಮೆರ್ಮೈಡ್‌ ಗೌನ್‌

Palak Tiwari: ಬಾಲಿವುಡ್‌ನ ನಟಿ ಪಲಕ್‌ ತಿವಾರಿ ಧರಿಸಿದ ಸಿಂಪಲ್‌ ವೆಲ್ವೆಟ್‌ ಮೆರ್ಮೈಡ್‌ ಗೌನ್‌ ಇದೀಗ ಗೌನ್‌ ಪ್ರಿಯರ ಗಮನ ಸೆಳೆದಿದೆ. ಸರಿ ಸುಮಾರು 2,45 ಲಕ್ಷ ರೂ. ಬೆಲೆಬಾಳುವ ಈ ಸಿಂಪಲ್‌ ಗೌನ್‌ನ ವಿಶೇಷತೆಯಾದರೂ ಏನು? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಪಲಕ್‌ ತಿವಾರಿ, ಬಾಲಿವುಡ್‌ ನಟಿ
1/5

ಬಾಲಿವುಡ್‌ನ ನಟಿ ಪಲಕ್‌ ತಿವಾರಿ ಧರಿಸಿದ್ದ ವೆಲ್ವೆಟ್‌ ಮೆರ್ಮೈಡ್‌ ಗೌನ್‌ ಇದೀಗ ಗೌನ್‌ ಪ್ರಿಯರ ಗಮನ ಸೆಳೆದಿದೆ.

2/5

2.45 ಲಕ್ಷ ರೂ. ಗಳ ವೆಲ್ವೆಟ್‌ ಗೌನ್‌

ಹೌದು, ಬಾಲಿವುಡ್‌ನ ಯುವನಟಿ ಪಲಕ್‌ ತಿವಾರಿ ಇವೆಂಟ್‌ವೊಂದರಲ್ಲಿ ಧರಿಸಿದ್ದ, ಬ್ಲ್ಯಾಕ್‌ ಶೇಡ್‌ನ ಸಿಂಪಲ್‌ ಮೆರ್ಮೈಡ್ ಗೌನ್‌, ಇತರೇ ತಾರೆಯರ ಡಿಸೈನರ್‌ವೇರನ್ನು ಸೆಡ್ಡು ಹೊಡೆಯುವಂತಿತ್ತು. ಸರಿ ಸುಮಾರು ಅಂದಾಜು 2.45 ಲಕ್ಷ ರೂ. ಬೆಲೆಬಾಳುವ ಈ ಗೌನ್‌ ನೋಡಲು ತೀರಾ ಸಿಂಪಲ್‌ ಆಗಿದ್ದರೂ ಜೆನ್‌ ಜಿ ಯುವತಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಫ್ಯಾಷನಿಸ್ಟಾ ಜೆನ್‌.

3/5

ಪಲಕ್‌ ತಿವಾರಿಯ ಫ್ಯಾಷನ್‌ ಲವ್‌

ಅಂದಹಾಗೆ, ಪಲಕ್‌ ತಿವಾರಿ ಜೆನ್‌ ಜಿ ತಾರೆ ಎನ್ನಬಹುದು. ಯಾವುದೇ ಇವೆಂಟ್‌ ಆಗಲಿ ಅಥವಾ ಔಟಿಂಗ್‌ ಆಗಲಿ ಕಂಪ್ಲೀಟ್‌ ಈ ಜನರೇಷನ್‌ ಹುಡುಗಿಯರು ಧರಿಸುವಂತಹ ಫ್ಯಾಷನ್‌ವೇರ್‌ಗಳನ್ನೇ ಚೂಸ್‌ ಮಾಡುತ್ತಾರೆ. ಹೆವ್ವಿ ಎಂದೆನಿಸುವ ಡಿಸೈನರ್‌ವೇರ್‌ಗಳಿಂದ ದೂರವೇ ಉಳಿದಿದ್ದಾರೆ. ತನ್ನ ತಾಯಿ ನಟಿ ಶ್ವೇತಾ ತಿವಾರಿಯ ಗೈಡ್‌ಲೈನ್ಸ್‌ನಲ್ಲೆ ಇಂದಿಗೂ ಸಿನಿಮಾ ಹಾಗೂ ಫ್ಯಾಷನ್‌ ಕ್ಷೇತ್ರದಲ್ಲಿ ಮುಂದುವರಿದಿದ್ದಾರೆ. ಅಲ್ಲದೇ, ಪಲಕ್‌ ಫ್ಯಾಷನ್‌ ಲವ್ವನ್ನು ಅವರು ಧರಿಸುವ ಪ್ರತಿ ಔಟ್‌ಫಿಟ್‌ನಲ್ಲೆ ಕಾಣಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

4/5

ಜೆನ್‌ ಜಿ ಯುವತಿಯರನ್ನು ಪ್ರತಿಬಿಂಬಿಸುವ ಫ್ಯಾಷನ್‌

ಗೌನ್‌ ವಿಷಯಕ್ಕೆ ಬಂದಲ್ಲಿ, ಪಲಕ್‌ ಆಯ್ಕೆ ಮಾಡಿಕೊಂಡಿರುವ ಈ ವೆಲ್ವೆಟ್‌ ಗೌನ್‌ ತೀರಾ ಸಿಂಪಲ್‌ ಆಗಿದೆ. ಫಿಶ್‌ ಕಟ್‌ನಂತಿರುವ ಮೆರ್ಮೈಡ್‌ ಗೌನ್‌ ಶೋಲ್ಡರ್‌ಲೆಸ್‌ ಆಗಿದ್ದು, ಗೌರಿ ಹಾಗೂ ನಯಾನಿಕಾ ಡಿಸೈನ್‌ ಮಾಡಿರುವ ಕಸ್ಟಮೈಸ್ಡ್‌ ಡಿಸೈನ್‌ನದ್ದಾಗಿದೆ.

5/5

ಈ ಬಾಡಿ ಹಗ್ಗಿಂಗ್‌ ಗೌನ್‌ನ ಮುಂಭಾಗದಲ್ಲಿ ಕ್ರಿಸ್ಟಲ್‌ ಎಂಬ್ರಾಯ್ಡರಿ ಇಡೀ ಔಟ್‌ಫಿಟ್ಟನ್ನು ಅತ್ಯಾಕರ್ಷಕವಾಗಿಸಿದೆ. ಜತೆಗೆ ಇಂದಿನ ಯುವತಿಯರ ಗೌನ್‌ ಫ್ಯಾಷನ್‌ ಪ್ರತಿಬಿಂಬಿಸುವಂತಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author