ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ರಕುಲ್‌ ಉಟ್ಟ ಪ್ರಿಂಟೆಡ್‌ ಕ್ರೇಪ್‌ ಸೀರೆ ಲುಕ್‌ಗೆ ಇಲ್ಲಿವೆ 5 ಟಿಪ್ಸ್

Rakul Preet Singh: ಸಾಫ್ಟ್ ಫ್ಯಾಬ್ರಿಕ್‌ನ ಪ್ರಿಂಟೆಡ್‌ ಕ್ರೇಪ್‌ ಜಾರ್ಜೆಟ್‌ ಸೀರೆಯಲ್ಲಿ ಬಾಲಿವುಡ್‌ ನಟಿ ರಕುಲ್‌ ಪ್ರೀತ್‌ ಸಿಂಗ್‌ಳಂತೆ ನೀವೂ ಕಾಣಿಸಬಹುದು. ಅದಕ್ಕಾಗಿ ಒಂದೈದು ಟಿಪ್ಸ್ ಫಾಲೋ ಮಾಡಿದರೇ ಸಾಕು! ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳು. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ರಕುಲ್‌ ಪ್ರೀತ್‌ ಸಿಂಗ್‌, ಬಾಲಿವುಡ್‌ ನಟಿ
1/5

ಬಾಲಿವುಡ್‌ ನಟಿ ರಕುಲ್‌ ಪ್ರೀತ್‌ ಸಿಂಗ್ ಸೀರೆ ಲುಕ್‌ ನಿಮಗೂ ಬೇಕೇ! ಖಂಡಿತಾ ಸಾಧ್ಯ ! ಅದಕ್ಕಾಗಿ ನೀವು ಒಂದಿಷ್ಟು ಸಿಂಪಲ್‌ ಸೀರೆ ಸ್ಟೈಲಿಂಗ್‌ ಹಾಗೂ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡರೇ ಸಾಕು, ನೀವೂ ಕೂಡ ಥೇಟ್‌ ರಕುಲ್‌ಳಂತೆಯೇ ಕಾಣಿಸಬಹುದು ಹಾಗೆನ್ನುತ್ತಾರೆ ಸೀರೆ ಸ್ಟೈಲಿಸ್ಟ್ ಜೂಲಿ. ಅವರ ಪ್ರಕಾರ, ಸೀರೆ ಎಂಬುದು ಆಯ್ಕೆ ಹಾಗೂ ಅದನ್ನು ಡ್ರೇಪಿಂಗ್‌, ಮೇಕೋವರ್‌ನ ಮೇಲೆ ಪ್ರತಿ ಸೀರೆಯೂ ಅಂದವಾಗಿ ಕಾಣಿಸುತ್ತದೆ ಎನ್ನುತ್ತಾರೆ.

ಪ್ರಿಂಟೆಡ್‌ ಕ್ರೇಪ್‌ ಜಾರ್ಜೆಟ್‌ ಸೀರೆಯ ಆಯ್ಕೆ

ಈ ಚಿತ್ರದಲ್ಲಿ ರಕುಲ್‌ ಉಟ್ಟಿರುವುದು ಪ್ರಿಂಟೆಡ್‌ ಕ್ರೇಪ್‌ ಜಾರ್ಜೆಟ್‌ ಸೀರೆ. ಅದೇ ರೀತಿಯ ಸೀರೆಗಳನ್ನು ಆಯ್ಕೆ ಮಾಡಬಹುದು. ಆನ್‌ಲೈನ್‌ನಲ್ಲಿ ಈ ರೀತಿಯ ಸೀರೆಗಳು ಲಭ್ಯ.

2/5

ಫ್ಯಾಬ್ರಿಕ್‌ ಸೀರೆಯ ಲುಕ್‌ಗೆ ಸಾಥ್‌

ಸಾಫ್ಟ್ ಫ್ಯಾಬ್ರಿಕ್‌ನ ಈ ಪ್ರಿಂಟೆಡ್‌ ಕ್ರೇಪ್‌ ಜಾರ್ಜೆಟ್‌ ಸೀರೆ ಇಡೀ ಲುಕ್ಕನ್ನು ಬದಲಿಸುತ್ತದೆ. ಮೈಮೇಲೆ ಫ್ಲೋ ಆಗುವುದರಿಂದ ಹರಡಿಕೊಳ್ಳುವುದಿಲ್ಲ! ಬದಲಿಗೆ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.

3/5

ಸಿಂಗಲ್‌ ಪಿನ್‌ ಡ್ರೇಪಿಂಗ್‌

ಈ ಬಗೆಯ ಸೀರೆಯನ್ನು ರಕುಲ್‌ಳಂತೆ ಸಿಂಗಲ್‌ ಪಿನ್‌ ಮಾಡಿ ಸೆರಗು ಮಾಡಿದಲ್ಲಿ ಥೇಟ್‌ ಹಾಗೆಯೇ ಕಾಣಿಸುವುದು. ಇಳೆಬಿಟ್ಟಂತೆ ಕಾಣಿಸುವುದರಿಂದ ಉದ್ದನಾಗಿ ಕಾಣಿಸಬಹುದು.

4/5

ಮೆಕೋವರ್‌ ಸಿಂಪಲ್‌ ಆಗಿರಲಿ

ಆಕ್ಸಿಡೈಸ್ಡ್ ಮಾದರಿಯ ಫ್ಯಾಷನ್‌ ಜ್ಯುವೆಲರಿಗಳು ಈ ಪ್ರಿಂಟೆಡ್‌ ಸೀರೆಗೆ ಮ್ಯಾಚ್‌ ಆಗುತ್ತವೆ. ಇನ್ನು ತೀರಾ ಸಿಂಪಲ್‌ ಮೇಕಪ್‌ ಸೀರೆಯನ್ನು ಹೈಲೈಟ್‌ ಮಾಡುತ್ತದೆ.

5/5

ಸ್ಟೇಟ್‌ಮೆಂಟ್‌ ಬೆಲ್ಟ್

ಇಡೀ ಸೀರೆಯ ಲುಕ್ಕನ್ನು ಒಂದು ಸ್ಟೇಟ್‌ಮೆಂಟ್‌ ಬೆಲ್ಟ್‌ ನಿರ್ಧರಿಸುತ್ತದೆ. ನೋಡಲು ಇಂಡೋ-ವೆಸ್ಟರ್ನ್‌ ಲುಕ್‌ ನೀಡುತ್ತದೆ.

ಶೀಲಾ ಸಿ ಶೆಟ್ಟಿ

View all posts by this author