Star Fashion 2026: ಜೆಮೆಟ್ರಿಕ್ ಸ್ಟ್ರೈಪ್ಸ್ ಮಿನಿ ಸ್ಕರ್ಟ್ನಲ್ಲಿ ರಕುಲ್ ಪ್ರೀತ್ ಸಿಂಗ್ ಬಿಂದಾಸ್ ಫ್ಯಾಷನ್
ಜೆಮೆಟ್ರಿಕ್ ಡಿಸೈನ್ ಕೆಟಗರಿಗೆ ಸೇರುವ ವೈಟ್ ಮತ್ತು ರೆಡ್ ಸ್ಟ್ರೈಪ್ಸ್ನ ಕೋ ಆರ್ಡ್ ಮಿನಿ ಸ್ಕರ್ಟ್ನಲ್ಲಿ ರಕುಲ್ ಪ್ರೀತ್ ಸಿಂಗ್ ಬಿಂದಾಸ್ ಫ್ಯಾಷನ್ಗೆ ಸೈ ಎಂದಿದ್ದಾರೆ. ಇದ್ಯಾವ ಬಗೆಯ ಔಟ್ಫಿಟ್? ಫ್ಯಾಷನಿಸ್ಟಾಗಳು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ರಕುಲ್ ಪ್ರೀತ್ ಸಿಂಗ್, ಬಾಲಿವುಡ್ ನಟಿ -
ಜೆಮೆಟ್ರಿಕ್ ಡಿಸೈನ್ನ ರೆಡ್ ಮತ್ತು ವೈಟ್ ಶೇಡ್ನ ಸ್ಟೈಪ್ಸ್ ಮಿನಿ ಸ್ಕರ್ಟ್ನಲ್ಲಿ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಸಿಂಗ್ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ.
ರಕುಲ್ ಫ್ಯಾಷನ್ ಲವ್
ಸಾಕಷ್ಟು ಸಿನಿಮಾಗಳ ನಡುವೆಯೂ ಆಗಾಗ್ಗೆ ಫ್ಯಾಷನ್ ಶೂಟ್ಗಳಲ್ಲಿಯೂ ಕಾಣಿಸಿಕೊಳ್ಳುವ ರಕುಲ್ ಪ್ರೀತ್ ಸಿಂಗ್, ಸದಾ ಡಿಫರೆಂಟ್ ಫ್ಯಾಷನ್ವೇರ್ ಪ್ರಿಫರ್ ಮಾಡುತ್ತಾರಂತೆ. ಅದರಲ್ಲೂ ಯೂನಿಕ್ ಡಿಸೈನ್ಸ್ ಹಾಗೂ ಅಪರೂಪದ ಡಿಸೈನರ್ವೇರ್ಗಳನ್ನೇ ಧರಿಸುತ್ತಾರಂತೆ. ಇತರರಿಗಿಂತ ಡಿಫರೆಂಟ್ ಆಗಿ ಕಾಣಿಸಲು ಬಯಸುತ್ತಾರಂತೆ. ಹಾಗೆನ್ನುತ್ತಾರೆ ಅವರ ಸ್ಟೈಲಿಸ್ಟ್ಗಳು.
ರಕುಲ್ ಧರಿಸಿರುವ ಔಟ್ಫಿಟ್ ಸ್ಪೆಷಾಲಿಟಿ
ಜೆಮೆಟ್ರಿಕ್ ಡಿಸೈನ್ ಕೆಟಗರಿಗೆ ಸೇರುವ ಈ ಉಡುಗೆ ಕೋ ಆರ್ಡ್ ಸೆಟ್ ಆಗಿದೆ. ಬಿಕಿನಿ ಬ್ಲೌಸ್ನಂತೆ ಕ್ಲಿವೇಜ್ ಕಾಣಿಸುವ ಕ್ರಾಪ್ ಟಾಪ್, ಅದರ ಮೇಲೊಂದು ಕ್ರಾಪ್ ವೇಸ್ಕೋಟ್, ಇವೆರಡರ ಜತೆಗೆ ಅದಕ್ಕೆ ಹೊಂದುವಂತಹ ಅಬ್ಸ್ಟ್ರಾಕ್ಟ್ ಸ್ಟ್ರೈಪ್ಸ್ನ ಮಿನಿ ಸ್ಕರ್ಟ್. ಒಟ್ಟಾರೆ, ಇವೆಲ್ಲವನ್ನು ವೈಟ್ ಮತ್ತು ರೆಡ್ ಶೇಡ್ನ ಕೋ ಆರ್ಡ್ ಸೆಟ್ ಎನ್ನಬಹುದು. ಇನ್ನು, ರಕುಲ್, ಈ ಔಟ್ಫಿಟ್ನಲ್ಲಿ ಪಕ್ಕಾ ಕಾಲೇಜು ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಫಂಕಿ ಯಂಗ್ ಲುಕ್ ನೀಡಿದ ರೆಡ್ & ವೈಟ್ ಕೋ ಆರ್ಡ್ ಸೆಟ್
ರಕುಲ್ ಧರಿಸಿರುವ ಜೆಮೆಟ್ರಿಕ್ ಡಿಸೈನ್ನ ಮಿನಿ ಸ್ಕರ್ಟ್ ಫಂಕಿ ಲುಕ್ಗೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್ಪರ್ಟ್ಸ್.
ಜೆಮೆಟ್ರಿಕ್ ಡಿಸೈನ್ ಕೆಟಗರಿಗೆ ಸೇರುವ ವೈಟ್ ಮತ್ತು ರೆಡ್ ಸ್ಟ್ರೈಪ್ಸ್ನ ಕೋ ಆರ್ಡ್ ಮಿನಿ ಸ್ಕರ್ಟ್ನಲ್ಲಿ ರಕುಲ್ ಪ್ರೀತ್ ಸಿಂಗ್ ಬಿಂದಾಸ್ ಫ್ಯಾಷನ್ಗೆ ಸೈ ಎಂದಿದ್ದಾರೆ.