Star Fashion 2026: ಸಾನಿಯಾ ಮಲ್ಹೋತ್ರಾಗೆ ಡಲ್ ಲುಕ್ ನೀಡಿದ ಆಫ್‌ಸೆಟ್ ಡ್ರೆಸ್
Sanya Malhotra: ಆಫ್ ಸೆಟ್ ಡ್ರೆಸ್ ಬಾಲಿವುಡ್ ಬೆಡಗಿ ಸಾನಿಯಾ ಮಲ್ಹೋತ್ರಾ ಅವರನ್ನು ತೀರಾ ಡಲ್ ಆಗಿ ಬಿಂಬಿಸಿದೆ. ನೋಡಲು ಹಳೆಯ ಉಡುಗೆಯಂತೆ ಬಿಂಬಿಸಿದೆ ಎನ್ನುತ್ತಿದ್ದಾರೆ ಅವರ ಫಾಲೋವರ್‌ಗಳು. ಹಾಗಾದರೇ ಇದ್ಯಾವ ಬಗೆಯ ಡ್ರೆಸ್? ಇಲ್ಲಿದೆ ಡಿಟೇಲ್ಸ್.
ಸಾನಿಯಾ ಮಲ್ಹೋತ್ರಾ ಹೊಸ ಆಫ್‌ಸೆಟ್ ಸ್ಟ್ರೈಪ್ಸ್ ಡ್ರೆಸ್ ಫ್ಯಾಷನ್ ಪ್ರಿಯರ ಟೀಕೆಗೆ ಗುರಿಯಾಗಿದೆ. ಅವರ ಈ ಕಟೌಟ್ ಆಫ್‌ಸೆಟ್ ಸ್ಟ್ರೈಪ್ಸ್ ಡ್ರೆಸ್ ಅವರ ಲುಕ್ ಅನ್ನು ತೀರಾ ಡಲ್ ಆಗಿಸಿದೆ. ನೋಡಲು ಹಳೆಯ ಉಡುಗೆ ತೊಟ್ಟಂತೆ ಬಿಂಬಿಸಿದೆ ಎಂದಿದ್ದಾರೆ ಫ್ಯಾಷನ್ ಪ್ರಿಯರು.
ರೆಟ್ರೊ ಲುಕ್ ನೀಡಿದ ಡ್ರೆಸ್
ಸಾನಿಯಾಳ ಈ ಬ್ರಾಂಡೆಡ್ ಉಡುಗೆಯ ಬೆಲೆ ಹೆಚ್ಚಾಗಿದ್ದರೂ ಕೂಡ ಈ ಡ್ರೆಸ್ ಟ್ರೆಂಡಿಯಾಗುವುದಿರಲಿ, ಫ್ಯಾಷನ್ ಪ್ರಿಯರ ಗಮನವನ್ನು ಕೂಡ ಸೆಳೆದಿಲ್ಲ! ಅಲ್ಲದೇ ಹಳೆಯ ವಿನ್ಯಾಸವನ್ನೇ ಮತ್ತೇ ರಿಪೀಟ್ ಮಾಡಿದಂತಿದೆ. ಫ್ರೆಶ್ ಲುಕ್ ಬದಲು ರೆಟ್ರೊ ಲುಕ್ ನೀಡಿದೆ ಎಂದಿದ್ದಾರೆ ಫ್ಯಾಷನ್ ವಿಶ್ಲೇಷಕರಾದ ವಿದ್ಯಾ ವಿವೇಕ್.
ಇದ್ಯಾವ ಬಗೆಯ ಡ್ರೆಸ್?
ಈ ಫೋಟೋಗಳಲ್ಲಿ ಸಾನಿಯಾ ಧರಿಸಿರುವ ಡ್ರೆಸ್ ಡಾರ್ಕ್ ಕಲರ್‌ನದ್ದಾಗಿದ್ದು, ರೆಟ್ರೋ ಡಿಸೈನ್ ಹೊಂದಿದೆ. ಶರ್ಟ್ ಶೈಲಿಯ ಬಟನ್ ಕ್ರಾಪ್ ಟಾಪ್ ಹೊಂದಿದೆ. ಇದರ ಜತೆಗೆ ಸೈಡ್ ಡ್ರೇಪ್ ಹೊಂದಿರುವ ಸ್ಲಿಟ್ ಇರುವಂತಹ ಸ್ಕರ್ಟ್ ಹೊಂದಿದೆ. ಟಮ್ಮಿ ಭಾಗದಲ್ಲಿ ಈ ಡ್ರೆಸ್ ಕಟೌಟ್ ಆಗಿದೆ. ಗ್ಲಾಮರಸ್ ಲುಕ್ ನೀಡುವ ಸಲುವಾಗಿ ಒಂದು ಭುಜವನ್ನು ಎಕ್ಸ್‌ಪೋಸ್ ಮಾಡುವಂತೆ ಡಿಸೈನ್ ಮಾಡಲಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಸಾನಿಯಾ ಫ್ಯಾಷನ್ ಕ್ರೇಝ್
ಅಂದಹಾಗೆ, ಸಾನಿಯಾ ಮಲ್ಹೋತ್ರಾ ಇತ್ತೀಚೆಗೆ ಸಾಕಷ್ಟು ಸಿನಿಮಾಗಳ ಮೂಲಕ ಅದರಲ್ಲೂ ಡಿಸೆಂಟ್ ಲುಕ್‌ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯರಾಗಿದ್ದಾರೆ. ಸಿನಿಮಾ ಇವೆಂಟ್‌ಗಳಲ್ಲಿ ಮಾತ್ರ ಸಖತ್ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಜತೆಗೆ ಆಗಾಗ್ಗೆ ಪ್ರಯೋಗಾತ್ಮಕ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಬಾಲಿವುಡ್ ನಟಿ ಸಾನಿಯಾ ಮಲ್ಹೋತ್ರಾ ಅವರ ಆಫ್ ಸೆಟ್ ಡ್ರೆಸ್ ತೀರಾ ಡಲ್ ಆಗಿ ಬಿಂಬಿಸಿದೆ. ನೋಡಲು ಹಳೆಯ ಉಡುಗೆಯಂತೆ ಬಿಂಬಿಸಿದೆ ಎನ್ನುತ್ತಿದ್ದಾರೆ ಅವರ ಫಾಲೋವರ್‌ಗಳು.