Star Fashion 2026: ಆರೆಂಜ್ ಬ್ಲೇಜರ್ ಸೂಟ್ನಲ್ಲಿ ಕಾರ್ತಿಕ್ ಜಯರಾಮ್ ನಯಾ ಲುಕ್
Karthik Jayaram New Look: ಸೆಲೆಬ್ರೆಟಿ ಅಪರ್ಣಾ ಅವರು ವಿನ್ಯಾಸಗೊಳಿಸಿದ ಆರೆಂಜ್ ಶೇಡ್ನ ಬ್ಲೇಜರ್ ಸೂಟ್ನಲ್ಲಿ ನಟ ಕಾರ್ತಿಕ್ ಜಯರಾಮ್ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ, ಅವರು ಧರಿಸಿದ್ಧ ಈ ಸೂಟ್ ವಿಶೇಷತೆಯೇನು? ಇಲ್ಲಿದೆ ವಿವರ.
ಚಿತ್ರಗಳು: ಕಾರ್ತಿಕ್ ಜಯರಾಮ್ (ಜೆಕೆ), ನಟ. -
ಸ್ಯಾಂಡಲ್ವುಡ್ ನಟ ಕಾರ್ತಿಕ್ ಜಯರಾಮ್ ಆರೆಂಜ್ ಬ್ಲೇಜರ್ನಲ್ಲಿ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಸ್ನೇಹಿತೆ ಹಾಗೂ ಸೆಲೆಬ್ರೆಟಿ ಡಿಸೈನರ್ ಅಪರ್ಣಾ ವಿನ್ಯಾಸಗೊಳಿಸಿರುವ ಈ ಆರೆಂಜ್ ಶೇಡ್ನ ಲೆನಿನ್ ಬ್ಲೇಜರ್ ಹಾಗೂ ವೈಟ್ ಬೆಲ್ ಬಾಟಮ್ ಪ್ಯಾಂಟ್ ಕಾಂಬಿನೇಷನ್ನ ಸೂಟ್ನಲ್ಲಿ ನಟ ಕಾರ್ತಿಕ್ ಜಯರಾಮ್ ಕಾಣಿಸಿಕೊಂಡಿದ್ದು, ಹೊಸ ಟ್ರೆಂಡ್ಗೆ ನಾಂದಿ ಹಾಡಿದೆ.
ಇದು ಅಪರ್ಣಾ ಸಮಂತಾ ಡಿಸೈನರ್ವೇರ್
ಅಂದಹಾಗೆ, ಡಿಸೈನರ್ ಅಪರ್ಣಾ ಅವರ ಸಮಂತಾ ಬ್ರಾಂಡ್ ಅಂಬಾಸಡರ್ ಕೂಡ ಆಗಿರುವ ಜೆಕೆ, ಈಗಾಗಲೇ ಇವರ ಡಿಸೈನರ್ವೇರನ್ನು ಸಾಕಷ್ಟು ಬಾರಿ ಧರಿಸಿದ್ದಾರೆ. ಇವರು ಮಾತ್ರವಲ್ಲ, ಕಾವ್ಯಾ ಶೆಟ್ಟಿ, ಪ್ರಿಯಾ ಸುದೀಪ್ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು ಕೂಡ ಅಪರ್ಣಾ ಡಿಸೈನರ್ವೇರ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಆರೆಂಜ್ ಸೂಟ್ ವಿಶೇಷತೆ
ಅಂದಹಾಗೆ, ಕಾರ್ತಿಕ್ ಜಯರಾಮ್ ಧರಿಸಿರುವ ಈ ಬ್ಲೇಜರ್ ಲೆನಿನ್ ಫ್ಯಾಬ್ರಿಕ್ನಿಂದ ಸಿದ್ಧಪಡಿಸಲಾಗಿದ್ದು,ಇದಕ್ಕೆ ವೈಟ್ ಬೆಲ್ ಬಾಟಮ್ ಪ್ಯಾಂಟ್ ಮ್ಯಾಚ್ ಮಾಡಲಾಗಿದೆ.
ನಟ ಕಾರ್ತಿಕ್ ಜಯರಾಮ್ ಅಭಿಪ್ರಾಯ
ಶ್ವೇತ ವರ್ಣದ ಜತೆ ಯಾವುದೇ ಬ್ರೈಟ್ ಕಲರ್ ಕಾಂಬಿನೇಷನ್ ಮಾಡಿದಾಗ ಅದರ ಲುಕ್ಗೆ ಸರಿಸಾಟಿಯಿರುವುದಿಲ್ಲ! ಇದು ಕೂಡ ಹಾಗೆಯೇ, ಹೈ ಕಾಲರ್ ಹಾಗೂ ಪಾಕೆಟ್ ಇರುವಂತಹ ಬ್ಲೇಜರನ್ನು ಬೂಟ್ ಕಟ್ ಪ್ಯಾಂಟ್ ಜತೆ ಮ್ಯಾಚ್ ಮಾಡಿರುವುದರಿಂದ ನನ್ನ ಲುಕ್ ಕ್ಲಾಸಿಯಾಗಿದೆ. ಇನ್ನು, ಸಮಂತಾ ಬ್ರಾಂಡ್ ಡಿಸೈನರ್ವೇರ್ ಎಂದಿನಂತೆ ಧರಿಸಿದವರನ್ನು ಹೈಲೈಟ್ ಮಾಡುತ್ತದೆ, ಆಕರ್ಷಕವಾಗಿ ಬಿಂಬಿಸುತ್ತದೆ ಎಂದು ಕಾರ್ತಿಕ್ ಜಯರಾಮ್ ವಿಶ್ವವಾಣಿ ನ್ಯೂಸ್ ಜತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಬ್ಲೇಜರ್ ಪ್ರಿಯ ಯುವಕರನ್ನು ಸೆಳೆದ ಬ್ಲೇಜರ್
ಒಟ್ಟಾರೆ, ಈ ವೈಬ್ರೆಂಟ್ ಬಣ್ಣದ ಬ್ಲೇಜರ್, ಫ್ಯಾಷನ್ ಪ್ರಿಯರನ್ನು ಮಾತ್ರವಲ್ಲ, ಯುವಕರನ್ನು ಆಕರ್ಷಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.