ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion Review 2026: ಅನಾರ್ಕಲಿ ಸೂಟ್‌ನಲ್ಲಿ ತೀರಾ ಡಿಸೆಂಟ್‌ ಆಗಿ ಕಾಣಿಸಿಕೊಂಡ ತೃಪ್ತಿ ದಿಮ್ರಿ

ಸದಾ ಬಿಚ್ಚಮ್ಮಳಾಗಿ ಕಾಣಿಸಿಕೊಳ್ಳುವ ಅನಿಮಲ್‌ ಖ್ಯಾತಿಯ ಬಾಲಿವುಡ್‌ ನಟಿ ತೃಪ್ತಿ ದಿಮ್ರಿ ಇದೀಗ ವೈಟ್‌ ಅನಾರ್ಕಲಿ ಸೂಟ್‌ನಲ್ಲಿ ತೀರಾ ಡಿಸೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ತೃಪ್ತಿ ದಿಮ್ರಿ, ಬಾಲಿವುಡ್‌ ನಟಿ
1/5

ಸದಾ ಹಾಟ್‌ ಆಗಿ ಕಾಣಿಸಿಕೊಳ್ಳುವ ಬಾಲಿವುಡ್‌ ನಟಿ ತೃಪ್ತಿ ದಿಮ್ರಿ ಇದೀಗ ಕುರ್ತಾ ಸೂಟ್‌ನಲ್ಲಿ ಕಂಪ್ಲೀಟ್‌ ಡಿಸೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ.

2/5

ತೃಪ್ತಿ ದಿಮ್ರಿ ಬದಲಾದ ಈ ಲುಕ್‌

ಅರರೆ., ಇದೇನಿದು! ಸದಾ ಬಿಚ್ಚಮ್ಮಳಾಗಿ ಕಾಣಿಸಿಕೊಳ್ಳುವ ಅನಿಮಲ್‌ ಸಿನಿಮಾ ಖ್ಯಾತಿಯ ಬಾಲಿವುಡ್‌ ನಟಿ ತೃಪ್ತಿ ದಿಮ್ರಿಗೆ ಇದ್ದಕ್ಕಿದ್ದಂತೆ ಏನಾಗಿದೆ? ಮೈ ತುಂಬಾ ಹೊದ್ದುಕೊಂಡಂತೆ ಇರುವ ಅನಾರ್ಕಲಿ ಸೂಟ್‌ನಲ್ಲಿ ಇಷ್ಟೊಂದು ಡಿಸೆಂಟ್‌ ಆಗಿ ಯಾಕೆ ಕಾಣಿಸಿಕೊಂಡಿದ್ದಾರೆ? ಎಂದು ನೀವು ಯೋಚಿಸುತ್ತಿದ್ದೀರಾ? ಇದಕ್ಕೂ ಕಾರಣವಿದೆ. ಸದ್ಯ ಆಕೆ ಮುಂದಿನ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದು, ಅದಕ್ಕೆ ತಕ್ಕಂತೆ ಹೀಗೆ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

3/5

ತೃಪ್ತಿ ದಿಮ್ರಿಯ ಫ್ಯಾಷನ್‌

ಅಂದಹಾಗೆ, ತೃಪ್ತಿ ದಿಮ್ರಿ ಹಿಂದಿ ಸಿನಿಮಾ ಅನಿಮಲ್‌ನಲ್ಲಿ ನಟಿಸಿದ ನಂತರ ಆಕೆಯ ಕೆರಿಯರ್‌ ಮಾತ್ರವಲ್ಲ, ಜನರು ಆಕೆಯನ್ನು ನೋಡುವ ಇಮೇಜ್‌ ಕೂಡ ಬದಲಾಯಿತು. ತೃಪ್ತಿಯ ಪ್ರತಿ ಹಾಟ್‌ ಫೋಟೋಗಳು ಪಡ್ಡೆ ಹುಡುಗರ ಪೋಸ್ಟರ್‌ಗಳಾದವು. ಆ ಮಟ್ಟಿಗೆ ತೃಪ್ತಿ ಇಮೇಜ್‌ ಬದಲಾಗಿತ್ತು. ಆದರೆ, ಇದೀಗ ಆಕೆಯ ಹೊಸ ಸಿನಿಮಾ ಓ ರೋಮಿಯಾ ರಿಲೀಸ್‌ ಆಗುತ್ತಿದೆ. ಹಾಗಾಗಿ ಈ ಸಿನಿಮಾ ಕ್ಯಾರೆಕ್ಟರ್‌ಗೆ ತಕ್ಕಂತೆ ತೃಪ್ತಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಫ್ಯಾಷನ್‌ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.

4/5

ಗೌನ್‌ನಂತಿರುವ ತೃಪ್ತಿಯ ಅನಾರ್ಕಲಿ ಸೂಟ್‌

ತೃಪ್ತಿ ಧರಿಸಿರುವ ವೈಟ್‌ ಶೇಡ್‌ನ ಅನಾರ್ಕಲಿ ಸೂಟ್‌ ಲಾಂಗ್‌ ಗೌನ್‌ನಂತಿದೆ. ಅಷ್ಟು ಮಾತ್ರವಲ್ಲದೇ ದುಪಟ್ಟಾ ಕೂಡ ಹೊಂದಿದೆ. ಹಾಫ್‌ ವೈಟ್‌ನ ಈ ಔಟ್‌ಫಿಟ್‌ ತೃಪ್ತಿಗೆ ಕಂಪ್ಲೀಟ್‌ ಎಥ್ನಿಕ್‌ ಲುಕ್‌ ನೀಡಿದೆ.

5/5

ಸದಾ ಹಾಟ್‌ ಲುಕ್‌ನಲ್ಲೆ ಕಾಣಿಸಿಕೊಳ್ಳುತ್ತಿದ್ದ ತೃಪ್ತಿ ದಿಮ್ರಿ ಅವರನ್ನು ಗೌನ್‌ನಂತಿರುವ ಅನಾರ್ಕಲಿ ಸೂಟ್‌ ಸಂಪೂರ್ಣ ಡಿಸೆಂಟ್‌ ಆಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author