Star Saree Fashion 2025: ಟ್ರೆಂಡಿಯಾಯ್ತು ನಟಿ ಸ್ನೇಹಾ ಉಟ್ಟ ಡಬ್ಬಲ್ ಸೀರೆ ಡ್ರೇಪಿಂಗ್ ಸ್ಟೈಲ್
Actress Sneha's Saree Look: ಬಹುಭಾಷಾ ತಾರೆ ನಟಿ ಸ್ನೇಹಾ ಉಟ್ಟಿರುವ ಡಬ್ಬಲ್ ಸೀರೆ ಡ್ರೇಪಿಂಗ್ ಸ್ಟೈಲ್ ಸದ್ಯ ಟ್ರೆಂಡಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಡ್ರೇಪಿಂಗ್ ಸ್ಟೈಲ್ ಟ್ರೈ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದ್ಯಾವ ಬಗೆಯ ಸ್ಟೈಲಿಂಗ್? ಇಲ್ಲಿದೆ ಮಾಹಿತಿ.
ನಟಿ ಸ್ನೇಹಾ (ಚಿತ್ರಕೃಪೆ: ಅಶೋಕಾರ್ಶ್), ಸೀರೆ ಡ್ರೇಪಿಂಗ್: ತಿವ್ಯಾನ್ ಜಯರೌಬೆನ್ ಸೀರೆ ಡ್ರೇಪಿಸ್ಟ್. -
ನಟಿ ಸ್ನೇಹಾರ ಡಬ್ಬಲ್ ಸೀರೆ ಡ್ರೇಪಿಂಗ್ ಸ್ಟೈಲ್ ಸದ್ಯ ಟ್ರೆಂಡಿಯಾಗಿದೆ.
ನಟಿ ಸ್ನೇಹಾ ಅವರು ಉಟ್ಟಿರುವ ಸ್ನೇಹಾಲಯ ಸಿಲ್ಕ್ಸ್ನ ಎರಡು ರೇಷ್ಮೆ ಸೀರೆಯ ಡಬ್ಬಲ್ ಡ್ರೇಪಿಂಗ್ ಸ್ಟೈಲ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹಿಟ್ ಆಗಿದ್ದು, ಅವರು ಉಟ್ಟಿರುವ ಸೀರೆಯ ಶೈಲಿಯಲ್ಲೆ ಡ್ರೇಪಿಂಗ್ ಸ್ಟೈಲ್ ಟ್ರೈ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
ಸ್ನೇಹಾ ಸೀರೆ ಲವ್
ಅಂದಹಾಗೆ, ನಟಿ ಸ್ನೇಹಾ ಈಗಾಗಲೇ ಸಾಕಷ್ಟು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆ ಹಾಗೂ ಮಗುವಾದ ನಂತರ ಚಿಕ್ಕ ಬ್ರೇಕ್ ತೆಗೆದುಕೊಂಡಿದ್ದ ಸ್ನೇಹಾ ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲಿಗಿಂತ ಸ್ಲಿಮ್ ಆಗಿದ್ದಾರೆ. ಅವರಿಗೆ ಸೀರೆ ಬಗ್ಗೆ ಯಾವ ಮಟ್ಟಿಗೆ ಒಲವಿದೆ ಎಂಬುದು ಅವರ ಸೋಷಿಯಲ್ ಮೀಡಿಯಾ ಅಕೌಂಟ್ನ ಫೋಟೋಗಳನ್ನು ನೋಡಿದರೇ ಅರಿವಾಗುತ್ತದೆ, ಆ ಮಟ್ಟಿಗೆ ಸೀರೆಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಏನಿದು ಡಬ್ಬಲ್ ಸೀರೆ ಡ್ರೇಪಿಂಗ್
ನಟಿ ಸ್ನೇಹಾ ಅವರು ಅಪ್ಲೋಡ್ ಮಾಡಿರುವ ಈ ಚಿತ್ರದಲ್ಲಿ ಡಬ್ಬಲ್ ಸೀರೆಯನ್ನು ಡ್ರೇಪ್ ಮಾಡಿಸಿಕೊಂಡಿದ್ದಾರೆ. ಎರಡು ಸೀರೆಗಳನ್ನು ಒಟ್ಟಿಗೆ ಉಡುವುದನ್ನು ಡಬ್ಬಲ್ ಡ್ರೇಪಿಂಗ್ ಎನ್ನುತ್ತಾರೆ.
ಡಬ್ಬಲ್ ಸೀರೆ ಡ್ರೇಪಿಂಗ್ ಮಾಡುವುದು ಹೇಗೆ?
ಸಿಂಪಲ್ ಆಗಿ ಹೇಳುವುದಾದಲ್ಲಿ ಮೊದಲಿಗೆ ಒಂದು ಸೀರೆಯನ್ನು ಟಕ್ ಮಾಡಿ ಲೆಹೆಂಗಾ ಶೈಲಿಯಲ್ಲಿ ನೆರಿಗೆಗಳನ್ನು ಸುತ್ತಲೂ ಸಿಕ್ಕಿಸುತ್ತಾ ಲಂಗದಂತೆ ರೂಪ ನೀಡಬೇಕು. ನಂತರ, ದಾವಣಿ-ಲಂಗ ಧರಿಸುವ ಶೈಲಿಯಲ್ಲಿ ಕಾಣಿಸುವಂತೆ ಇನ್ನೊಂದು ಸೀರೆಯನ್ನು ಸೊಂಟದ ಬಳಿ ಸಿಕ್ಕಿಸಿ, ನೆರಿಗೆಗಳನ್ನು ಮಾಡಿ ಸೀರೆ ಸೆರಗಿನಂತೆಯೇ ಹಾಕಬೇಕು. ಇನ್ನು, ಈ ಸೀರೆ ಡ್ರೇಪಿಂಗ್ಗೆ ಮತ್ತೊಬ್ಬರ ಸಹಾಯ ಬೇಕೇ ಬೇಕು ಎನ್ನುತ್ತಾರೆ ಡ್ರೇಪರ್ಸ್.