ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Summer Season End Sale: ಸೀಸನ್‌ಗೂ ಮುನ್ನವೇ ಆರಂಭವಾಯ್ತು ಸಮ್ಮರ್‌ ಎಂಡ್‌ ಸೇಲ್‌

Summer Season End Sale: ಸೀಸನ್‌ ಮುಗಿಯುವ ಮುನ್ನವೇ ಸಮ್ಮರ್‌ ಎಂಡ್‌ ಸೇಲ್‌ ಎಲ್ಲೆಡೆ ಆರಂಭಗೊಂಡಿದೆ. ಬೇಸಿಗೆ ಸೀಸನ್‌ನಲ್ಲಿ ದಾಳಿ ಇಟ್ಟಿದ್ದ, ನಾನಾ ಬಗೆಯ ಫ್ಯಾಷನ್‌ವೇರ್‌ಗಳು ಈ ಸೇಲ್‌ನಲ್ಲಿ ಮಾರಾಟವಾಗುತ್ತಿವೆ. ಈ ಸೇಲ್‌ನ ಸದುಪಯೋಗ ಪಡೆದುಕೊಳ್ಳುವುದು ಹೇಗೆ? ಎಂಬುದರ ಕುರಿತಂತೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್‌ ನೀಡಿದ್ದಾರೆ.

ಚಿತ್ರಗಳು: ಮಿಂಚು
1/5

ಈ ಬಾರಿ ಬೇಸಿಗೆಯ ಸೀಸನ್‌ ಮುಗಿಯುವ ಮುನ್ನವೇ ಸಮ್ಮರ್‌ ಸೀಸನ್‌ ಎಂಡ್‌ ಸೇಲ್‌ ಎಲ್ಲೆಡೆ ಆರಂಭಗೊಂಡಿದೆ. ಹೌದು, ಬೇಸಿಗೆ ಸೀಸನ್‌ನಲ್ಲಿ ದಾಳಿ ಇಟ್ಟಿದ್ದ ನಾನಾ ಬಗೆಯ ಫ್ಯಾಷನ್‌ವೇರ್‌ಗಳು, ಉಡುಗೆ-ತೊಡುಗೆಗಳು ಮುಂಬರುವ ಸೀಸನ್‌ ಲಗ್ಗೆ ಇಡುವ ಮುನ್ನವೇ ಈ ಸೇಲ್‌ನಲ್ಲಿ ಮಾರಾಟವಾಗುತ್ತಿವೆ. ಅಂದಹಾಗೆ, ಬೇಸಿಗೆ ಇನ್ನೂ ಮುಗಿದಿಲ್ಲ! ಆಗಲೇ ಮಳೆಯಾರಂಭವಾಗಿದೆ. ಇದನ್ನು ಮನಗಂಡ ಸಾಕಷ್ಟು ಶಾಪಿಂಗ್‌ ಮಾಲ್‌ಗಳು ಹಾಗೂ ಶಾಪ್‌ಗಳು, ಈ ಸೀಸನ್‌ ಎಂಡ್‌ ಸೇಲ್‌ ಡಿಕ್ಲೇರ್‌ ಮಾಡಿದ್ದಾರೆ. ಮಳೆಯ ಅರ್ಭಟ ಫ್ಯಾಷನ್‌ ಲೋಕಕ್ಕೂ ತಗುಲಿದೆ. ಹಾಗಾಗಿ ಸೀಸನ್‌ಗೂ ಮುನ್ನವೇ ಬಹುತೇಕರು ಮುಂಬರುವ ಸೀಸನ್‌ಗೆ ಪೂರಕವಾಗುವಂತಹವನ್ನು ಕೊಳ್ಳಲಾರಂಭಿಸಿದ್ದಾರೆ. ಸೋ, ಮಾಲ್‌ಗಳಲ್ಲಿ, ಕಳೆದ ಸೀಸನ್‌ನಲ್ಲಿ ಆಗಮಿಸಿದ್ದ ಪ್ರಾಡಕ್ಟ್‌ಗಳ ಮೇಲೆ ಸೀಸನ್‌ ಸೇಲ್‌ ಬೋರ್ಡ್‌ ಹಾಕಲಾರಂಭಿಸಿದ್ದಾರೆ ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಪರ್ಟ್ಸ್.‌

2/5

ಸೀಸನ್‌ ಎಂಡ್‌ ಸೇಲ್‌ನ ಸದುಪಯೋಗಪಡಿಸಿಕೊಳ್ಳಿ

ಇನ್ನು, ಸ್ಟೈಲಿಸ್ಟ್‌ ರಿಯಾ ಹೇಳುವಂತೆ, ಸಮ್ಮರ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಫ್ಯಾಷನ್‌ವೇರ್‌ಗಳು ಹಾಗೂ ಆಕ್ಸೆಸರೀಸ್‌ಗಳು ಮುಂಬರುವ ಸೀಸನ್‌ವರೆಗೂ ಮುಂದುವರಿಯುತ್ತವೆ. ಅಲ್ಲದೇ, ಕೆಲವು ಮಳೆಗಾಳ ಬಂದರೂ ಟ್ರೆಂಡ್‌ನಲ್ಲೆ ಇರುತ್ತವೆ. ಹಾಗಾಗಿ ಈ ಸೇಲ್‌ನಲ್ಲಿ ಕೊಳ್ಳುವವರು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಈ ಸೇಲ್‌ನ ಸದುಪಯೋಗಪಡಿಸಿಕೊಳ್ಳಬಹುದು ಎನ್ನುತ್ತಾರೆ. ಇದಕ್ಕಾಗಿ ಒಂದಿಷ್ಟು ಐಡಿಯಾ ಹಾಗೂ ಟಿಪ್ಸ್‌ ನೀಡಿದ್ದಾರೆ.

3/5

ಮೊದಲು ವಿಂಡೋ ಶಾಪಿಂಗ್‌ ಮಾಡಿ ನೋಡಿ

ಸೀಸನ್‌ ಸೇಲ್‌ನಲ್ಲಿ, ಮೊದಲು ವಿಂಡೋ ಶಾಪಿಂಗ್‌ ಮಾಡಿ ನೋಡಿ. ಇದರಿಂದ ನಿಮಗೆ ಮಾರುಕಟ್ಟೆಯಲ್ಲಿ ಯಾವುದನ್ನು ಕೊಂಡರೇ ಲಾಭ, ಇಲ್ಲವೇ ನಷ್ಟ ಎಂಬುದು ಅರಿವಾಗುತ್ತದೆ.

4/5

ಲೇಯರ್‌ ಲುಕ್‌ ನೀಡುವಂತಹ ಔಟ್‌ಫಿಟ್‌ ಆಯ್ಕೆ ಮಾಡಿ‌

ಸಮ್ಮರ್‌ನಲ್ಲಿ ಸ್ಲೀವ್‌ಲೆಸ್‌ ಹಾಗೂ ಹಾಲ್ಟರ್‌ನೆಕ್‌ಲೈನ್‌ ಇರುವಂತಹ ಔಟ್‌ಫಿಟ್‌ಗಳು ಟ್ರೆಂಡಿಯಾಗಿರುತ್ತವೆ. ಇಂತವನ್ನು ಕೊಂಡಲ್ಲಿ ಅದರ ಮೇಲೆ ಜಾಕೆಟ್‌ ಕೋಟ್‌ ಇಲ್ಲವೇ ಕೇಪ್‌ ಧರಿಸಿ ಲೇಯರ್‌ ಲುಕ್‌ ನೀಡಬಹುದು. ಕೆಲವು ಔಟ್‌ಫಿಟ್‌ಗಳನ್ನು ಇತರೆ ಫ್ಯಾಷನ್‌ವೇರ್‌ಗಳೊಂದಿಗೆ ಮಿಕ್ಸ್‌ ಮ್ಯಾಚ್‌ ಮಾಡಬಹುದು. ಅಂತಹ ಉಡುಗೆಗಳನ್ನು ಸೆಲೆಕ್ಟ್‌ ಮಾಡಿ. ಕಡಿಮೆ ಹಣದಲ್ಲಿ ಒಂದಿಷ್ಟು ಉಡುಗೆಗಳನ್ನು ಕೊಳ್ಳಬಹುದು.

5/5

ಎಥ್ನಿಕ್‌ವೇರ್ಸ್‌ ಖರೀದಿ ಉತ್ತಮ

ಎಥ್ನಿಕ್‌ವೇರ್ಸ್‌ ಯಾವುದೇ ಸೀಸನ್‌ನಲ್ಲೂ ಧರಿಸಬಹುದು. ಹಾಗಾಗಿ ಈ ಸೇಲ್‌ನಲ್ಲಿ ಇವನ್ನು ಕೊಂಡಲ್ಲಿ ಮುಂಬರುವ ಹಬ್ಬ-ಸಮಾರಂಭಗಳಿಗೆ ಧರಿಸಬಹುದು. ಸೀಸನ್‌ ಎಂಡ್‌ ಸೇಲ್‌ನಲ್ಲಿ ಸಾಕಷ್ಟು ಡಿಸ್ಕೌಂಟ್ಸ್‌ ಹಾಗೂ ಆಫರ್‌ ದೊರೆಯುತ್ತದೆ. ಇಂತಹ ಸಮಯದಲ್ಲಿ ಅಗತ್ಯವಿರುವಂತದ್ದನ್ನು ಶಾಪಿಂಗ್‌ ಮಾಡಿ ಹಣ ಉಳಿಸಬಹುದು.

ಶೀಲಾ ಸಿ ಶೆಟ್ಟಿ

View all posts by this author