Tamannaah Bhatia: ತಮನ್ನಾ ಭಾಟಿಯಾ ಗ್ಲಾಮರ್ ಲುಕ್ಸ್‌ಗೆ ಮನಸೋತ ಫ್ಯಾನ್ಸ್
ದಕ್ಷಿಣ ಭಾರತ ಚಿತ್ರರಂಗದ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ ತನ್ನ ಗ್ಲಾಮರ್ ಲುಕ್‌ನಿಂದಲೇ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದಾರೆ. ಬೋಲ್ಡ್ ಉಡುಗೆ ಆಗಿರಲಿ ಅಥವಾ ಸಾಂಪ್ರದಾಯಿಕ ದೇಸಿ ಉಡುಗೆಯೇ ಆಇರಲಿ ತಮನ್ನಾ ತಮ್ಮ ಗ್ಲಾಮರ್ ಲುಕ್‌ನಲ್ಲಿ ಗಮನ ಸೆಳೆಯುತ್ತಾರೆ. ಅವರ ಕೆಲವು ಗ್ಲಾಮರಸ್ ಫೋಟೊ ಇಲ್ಲಿದೆ.
ʼಬಾಹುಬಲಿʼ, ʼಬಬ್ಲಿ ಬೌನ್ಸರ್ʼ, ʼಸೈರಾ ನರಸಿಂಹ ರೆಡ್ಡಿʼ, ʼಹ್ಯಾಪಿಡೇಸ್ʼ ಸಿನಿಮಾ ಮೂಲಕ ಗಮನ ಸೆಳೆದ ನಹುಭಾಷಾ ನಟಿ ತಮನ್ನಾ ಭಾಟಿಯಾ ಸೌಂದರ್ಯ, ಅಭಿನಯದಿಂದಲೇ ಗುರುತಿಸಿಕೊಂಡಿದ್ದಾರೆ.
ಹೂವಿನ ಕಸೂತಿ ಹೊಂದಿರುವ ಈ ಬಾಡಿ-ಕಾನ್ ಗೌನ್‌ನಲ್ಲಿ ತಮ್ನನಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಫ್ಲೋರಲ್ ಹೂವಿನ ಆಲಂಕರಣವಿರುವ ಬಾಡಿಕಾನ್ ಗೌನ್ ನಟಿಯ ಅಂದವನ್ನು ಹೆಚ್ಚಿಸಿದೆ.
ವೈಟ್ ಹಾಗೂ ಬ್ಲಾಕ್ ಕಲರ್ ಔಟ್ ಫಿಟ್ ಡ್ರೆಸ್‌ನಲ್ಲಿ ತಮನ್ನಾ ಹಾಟ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಈ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಲೀವ್ ಲೆಸ್ ಟಾಪ್ ಧರಿಸಿ ತನ್ನ ಸೌಂದರ್ಯ ಪ್ರದರ್ಶನದ ಮೂಲಕ ಪಡ್ಡೆ ಹುಡುಗರ ಮನ ಗೆಲ್ಲುತ್ತಿದ್ದಾರೆ.
ತಮನ್ನಾ ಭಾಟಿಯಾ ಮಾಡರ್ನ್ ಡ್ರೆಸ್‌ನಲ್ಲೂ ಹೆಚ್ಚು ಮುದ್ದಾಗಿ ಕಾಣುತ್ತಾರೆ. ಸದ್ಯ ಈ ಫೋಟೊಗಳಿಗೆ ಹೆಚ್ಚು ಲೈಕ್ಸ್ ವೀವ್ಸ್ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.
ಸದ್ಯ ನಟಿ ತಮನ್ನಾ ಅವರಿಗೆ ತಮಿಳು, ತೆಲುಗು ಹಾಗೂ ಬಾಲಿವುಡ್‌ನಲ್ಲಿ ಹೆಚ್ಚಿನ ಆಫರ್ಸ್ ಬರುತ್ತಿವೆ. ಆಂಡಳ್ ರಮೇಶ್ ನಿರ್ದೇಶನದ 'ಕಾತು ಕರುಪ್ಪು' ಸಿನಿಮಾದಲ್ಲಿ ಇದಾದ ಬಳಿಕ 'ದಟ್ ಇಸ್ ಮಹಾಲಕ್ಷ್ಮೀ', 'ಎನ್ ಎಂದರು ಕಾದಲ್ ಎನ್ ಬೇನ್' ಇತ್ಯಾದಿ ಸಿನಿಮಾಗಳಲ್ಲಿ ನಟಿಸಲಿದ್ದಾರೆ.