Tara Sutaria: ಬಾಲಿವುಡ್ ನಟಿಯ ಸೆಕ್ಸಿ ಫೋಟೋಶೂಟ್ಗೆ ಫ್ಯಾನ್ಸ್ ಫಿದಾ!
ಬಾಲಿವುಡ್ ನ ಖ್ಯಾತ ನಟಿ ತಾರಾ ಸುತಾರಿಯಾ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ.. ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿರುವ ಇವರು ಆಗಾಗ ಫೋಟೊ ವಿಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಕೂಡ ನಟಿ ತಾರಾ ಸುತಾರಿಯಾ ಅವರು ಸಖತ್ ಬೋಲ್ಡ್ ಆಗಿ ಫೋಟೊಗೆ ಪೋಸ್ ನೀಡಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

-


2019 ರಲ್ಲಿ ತೆರೆಕಂಡ ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ ನಟಿ ತಾರಾ ಸುತಾರಿಯಾ ಅವರು ತಮ್ಮ ನಟನೆ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ಮೂಲಕ ಸಿನಿಮಾ, ಫ್ಯಾಷನ್ ಇವೆಂಟ್, ಮಾಡಲಿಂಗ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಇವರಿಗೆ ಸೋಶಿಯಲ್ ಮಿಡಿಯಾದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಇದ್ದಾರೆ. ಇವರ ಹಾಟ್ ಲುಕ್ ಫೋಟೋಗಳೂ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ..

ಮರ್ಜಾವಾನ್, ಏಕ್ ವಿಲನ್ ರಿಟರ್ನ್ಸ್, ತಡಪ್, ಹೀರೋಪಂತಿ 2 ಮತ್ತು ಅಪೂರ್ವ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಈ ಸುಂದರಿ ಇತ್ತೀಚೆಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಅದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನಟಿ ತಾರಾ ಸುತಾರಿಯಾ ಅವರು ಟಾಪ್ ಲೆಸ್ ಆಗಿ ಫೋಟೊಗೆ ಪೋಸ್ ನೀಡಿದ್ದಾರೆ. ಟ್ರಾನ್ ಫರೆಂಟ್ ಉದ್ದನೆಯ ಶಾಲು ಧರಿಸಿ ಸಖತ್ ಹಾಟ್ ಮತ್ತು ಬೋಲ್ಡ್ ಲುಕ್ನಲ್ಲಿ ಪೋಸ್ ಕೊಟ್ಟಿದ್ದಾರೆ.

ಛಾಯಾಗ್ರಾಹಕ ರೋಹನ್ ಶ್ರೇಷ್ಠಾ ಅವರು ಈ ಫೋಟೋ ತೆಗೆದಿದ್ದು ಒಂದೊಂದು ಫೋಟೊದಲ್ಲಿ ಕೂಡ ನಟಿ ತಾರ ಅದ್ಭುತವಾಗಿ ಕಂಡಿದ್ದಾರೆ. ಇತ್ತೀಚೆಗೆ ತನ್ನ ಲಾಂಗ್ ಹೇರ್ ಅನ್ನು ಶಾರ್ಟ್ ಮಾಡಿಕೊಂಡ ನಟಿ ತಾರಾ ಅವರು ಬಾಬ್ ಕಟ್ನಲ್ಲಿ ಬಹಳ ಪ್ರಿಟಿಯಾಗಿ ಕಂಡಿದ್ದಾರೆ. ನಟಿ ತಾರಾ ಅವರ ಬೋಲ್ಡ್ ಫೋಟೊಗಳು ಸೋಷಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಇವರ ಎಕ್ಸ್ ಪ್ರೆಶನ್ ಪಡ್ಡೆ ಹುಡುಗರನ್ನು ಮೋಡಿ ಮಾಡುವಂತಿದೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ತಾರಾ ಅವರು ತಮ್ಮ ಹೇರ್ ಸ್ಟೈಲ್ ಮೂಲಕ ಹೆಚ್ಚು ಗಮನ ಸೆಳೆದಿದ್ದಾರೆ. ಲೂಸ್ ಶೋಲ್ಡರ್ ಟಾಪ್ ಧರಿಸಿ ಮಾದಕ ನಗೆ ಬೀರಿದ್ದಾರೆ. ಇವರ ಈ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ತಾರಾ ಅವರ ಮಾಜಿ ಗೆಳೆಯ ಆದರ್ ಜೈನ್ ಜೊತೆಗಿನ ಸಂಬಂಧದ ಬಗ್ಗೆ ಇತ್ತೀಚೆಗಷ್ಟೇ ಅನೇಕ ಗಾಸಿಪ್ ಹರಿದಾಡಿತ್ತು.

ತಾರಾ ಸುತಾರಿಯಾ ಕೊನೆಯ ಬಾರಿಗೆ ಅಪೂರ್ವ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ನಟಿ ತಾರಾ ಅವರು ಟಾಕ್ಸಿಕ್ ಚಿತ್ರದಲ್ಲಿ ನಟಿಸಲಿದ್ದು ರಾಕಿಂಗ್ ಸ್ಟಾರ್ ಯಶ್, ಕಿಯಾರಾ ಅಡ್ವಾಣಿ ಮತ್ತು ನಯನತಾರಾ ಅವರು ಕೂಡ ಇದೇ ಟಾಕ್ಸಿಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2026 ರಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಇದೆ.