SL vs ZIM: ಜಿಂಬಾಬ್ವೆ ವಿರುದ್ಧ ಮೊದಲನೇ ಒಡಿಐನಲ್ಲಿ ಶ್ರೀಲಂಕಾ ತಂಡಕ್ಕೆ ದಂಡ!
ಶ್ರೀಲಂಕಾ ತಂಡ ಮೊದಲನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 7 ರನ್ ಗೆಲುವು ಪಡೆಯಿತು. ಆ ಮೂಲಕ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡ 1-0 ಮುನ್ನಡೆ ಅನುಭವಿಸಿದೆ. ಅಂದ ಹಾಗೆ ಈ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಕಾರಣ ಶ್ರೀಲಕಾ ತಂಡಕ್ಕೆ ಪಂದ್ಯದ ಸಂಭಾವನೆಯಲ್ಲಿ ಶೇ 5 ರಷ್ಟು ದಂಡವನ್ನು ವಿಧಿಸಲಾಗಿದೆ.

ಶ್ರೀಲಂಕಾ ತಂಡಕ್ಕೆ ಪಂದ್ಯದ ಸಂಭಾವನೆಯಲ್ಲಿ ಶೇ 5 ರಷ್ಟು ದಂಡ ವಿಧಿಸಲಾಗಿದೆ. -

ಹರಾರೆ: ಜಿಂಬಾಬ್ವೆ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ(SL vs ZIM) ನಿಧಾನಗತಿಯ ಬೌಲಿಂಗ್ ಕಾರಣ ಪ್ರವಾಸಿ ಶ್ರೀಲಂಕಾ ತಂಡಕ್ಕೆ ಪಂದ್ಯದ ಸಂಭಾವನೆಯಲ್ಲಿ ಶೇ 5 ರಷ್ಟು ದಂಡವನ್ನು ಐಸಿಸಿ ವಿಧಿಸಿದೆ. ವೇಗದ ಬೌಲರ್ ದಿಲ್ಷಾನ್ ಮಧುಶನಕ (Dilshan MadhuShanka) ಅವರ ಅವರ ಹ್ಯಾಟ್ರಿಕ್ ಸಾಧನೆಯ ನೆರವಿನಿಂದ ಶ್ರೀಲಂಕಾ ತಂಡ 7 ರನ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಏಕದಿನ ಸರಣಿಯಲ್ಲಿ ಪ್ರವಾಸಿ ತಂಡ 1-0 ಮುನ್ನಡೆಯನ್ನು ಪಡೆದಿದೆ.
ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ನೀಡಿದ್ದ 299 ರನ್‌ಗಳನ್ನು ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡದ ಪರ ಬೆನ್ ಕರನ್ (70 ರನ್), ಸೀನ್ ವಿಲಿಯಮ್ಸನ್ (57 ರನ್) ಹಾಗೂ ಸಿಕಂದರ್ ರಾಜಾ (92 ರನ್) ಅವರ ಅರ್ಧಶತಕಗಳನ್ನು ಸಿಡಿಸಿದರು. ಆದರೂ ದಿಲ್ಷಾನ್ ಮಧುಶನಕ ಅವರ ವೇಗದ ಬೌಲಿಂಗ್ ದಾಳಿಗೆ ಕೇವಲ 7 ರನ್ ಅಂತರದಲ್ಲಿ ಸೋಲು ಒಪ್ಪಿಕೊಂಡಿತು. ಜಿಂಬಾಬ್ವೆ 50 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 291 ರನ್‌ಗಳಿಗೆ ಸೀಮಿತವಾಯಿತು.
Asia Cup 2025: ಬಿಸಿಲಿನ ತಾಪ ಹೆಚ್ಚಳ; ಏಷ್ಯಾಕಪ್ ಪಂದ್ಯಗಳ ಸಮಯದಲ್ಲಿ ಬದಲಾವಣೆ
ಜಿಂಬಾಬ್ವೆ ತಂಡದ ಇನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡ ನಿಗದಿತ ಸಮಯದಲ್ಲಿ 50 ಓವರ್‌ಗಳನ್ನು ಮುಗಿಸಲು ಸಾಧ್ಯವಾಗಿರಲಿಲ್ಲ. ಇವರು ಹೆಚ್ಚಿನ ಸಮಯವನ್ನು ತೆಗೆದುಕೊಂಡಿದ್ದರು. ಇದರ ಪರಿಣಾಮ ಶ್ರೀಲಂಕಾ ತಂಡಕ್ಕೆ ಪಂದ್ಯದ ಸಂಭಾವನೆಯಲ್ಲಿ ಶೇ 5 ರಷ್ಟು ದಂಡವನ್ನು ವಿಧಿಸಲಾಗಿದೆ. ಐಸಿಸಿ ಕೋಡ್ ಆಫ್ ಕಂಡಕ್ಟ್ 2.22 ನಿಯಮವನ್ನು ಶ್ರೀಲಂಕಾ ತಂಡ ಉಲ್ಲಂಘಿಸಿದೆ. ಶ್ರೀಲಂಕಾ ನಾಯಕ ಚರಿತಾ ಅಸಲಂಕಾ ಪ್ರಮಾದವನ್ನು ಒಪ್ಪಿಕೊಂಡರು, ಹಾಗಾಗಿ ಯಾವುದೇ ವಿಚಾರಣೆ ಇಲ್ಲ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಜಿಂಬಾಬ್ವೆ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹಾಗಾಗಿ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡುವಂತಾಯಿತು. ಪಥುಮ್ ನಿಸಾಂಕ (76 ರನ್), ಜನಿತ್ ಲಿಯಾನಗೆ (70*) ಹಾಗೂ ಕಮಿಂದು ಮೆಂಡಿಸ್ (57*) ಅವರ ಅರ್ಧಶತಕಗಳ ಬಲದಿಂದ ಶ್ರೀಲಂಕಾ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 298 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಜಿಂಬಾಬ್ವೆ ತಂಡಕ್ಕೆ 299 ರನ್‌ಗಳ ಗುರಿಯನ್ನು ನೀಡಿದೆ.
Asia Cup 2025: ಏಷ್ಯಾಕಪ್‌ಗೆ ಪ್ರತ್ಯೇಕವಾಗಿ ಪ್ರಯಾಣ ಬೇಳೆಸಲಿರುವ ಭಾರತೀಯ ಆಟಗಾರರು
ಜಿಂಬಾಬ್ವೆ ತಂಡದ ರನ್ ಚೇಸ್‌ನಲ್ಲಿ ಆರಂಭದಲ್ಲಿಯೇ ಆಘಾತ ಅನುಭವಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್ ಬ್ರಿಯಾನ್ ಬೆನೆಟ್ ಹಾಗೂ ಬ್ರೆಂಡನ್ ಟೇಲರ್ ಆಸಿತಾ ಫೆರ್ನಾಂಡೊ ಅವರಿಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಖಾತೆ ತೆರೆಯದೆ ಜಿಂಬಾಬ್ವೆ ತಂಡ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಮೂರನೇ ವಿಕೆಟ್‌ಗೆ ಸೀನ್ ವಿಲಿಯಮ್ಸನ್ ಹಾಗೂ ಬೆನ್ ಕರನ್ 118 ರನ್‌ಗಳನ್ನು ಕಲೆ ಹಾಕಿದರು. ಅದ್ಭುತವಾಗಿ ಬ್ಯಾಟ್ ಮಾಡಿದ ಸೀನ್ ವಿಲಿಯಮ್ಸನ್ 54 ಎಸೆತಗಳಲ್ಲಿ 57 ರನ್‌ಗಳನ್ನು ಕಲೆ ಹಾಕಿದರು. ಸಿಕಂದರ್ ರಾಜಾ ಕೂಡ ಉತ್ತಮವಾಗಿ ಬ್ಯಾಟ್ ಮಾಡಿದರು. ಅವರು ಆಡಿದ 87 ಎಸೆತಗಳಲ್ಲಿ 92 ರನ್‌ಗಳನ್ನು ಕಲೆ ಹಾಕಿದರು.
ಈ ಮೂವರು ಬ್ಯಾಟ್ಸ್‌ಮನ್‌ಗಳ ತಲಾ ಅರ್ಧಶತಕಗಳ ಬಲದಿಂದ ಜಿಂಬಾಬ್ವೆ ತಂಡ 200ರ ಗಡಿಯನ್ನು ದಾಟಿತ್ತು. ಕೊನೆಯಲ್ಲಿ ಟೋನಿ ಮುನ್ಯಾಂಗ್ ಅಜೇಯ 43 ರನ್‌ಗಳನ್ನು ಕಲೆ ಹಾಕಿ ತಂಡವನ್ನು ಬಹುತೇಕ ಗೆಲುವಿನ ಸನಿಹ ಬಂದಿದ್ದರು. ಆದರೆ, ಅಂತಿಮವಾಗಿ ಆತಿಥೇಯ ತಂಡ ಕೇವಲ 7 ರನ್ ಸೋಲು ಅನುಭವಿಸಿತು.