Wedding Fashion 2025: ಮದುಮಗಳ ಸೌಂದರ್ಯಕ್ಕೆ ಡಿಸೈನರ್ ಮೂಗುತಿ ಸಾಥ್
Wedding Fashion: ಇಂದು ಮದುವೆಯಲ್ಲಿ ಮದುಮಗಳನ್ನು ಅಂದವಾಗಿಸುವ ನಾನಾ ಬಗೆಯ ಡಿಸೈನರ್ ಬಂಗಾರದ ಹಾಗೂ ಬಂಗಾರೇತರ ಮೂಗುತಿಗಳು ಬಂದಿವೆ. ಯಾವ್ಯಾವ ಡಿಸೈನ್ನವು ಚಾಲ್ತಿಯಲ್ಲಿವೆ? ಈ ಬಗ್ಗೆ ಜ್ಯುವೆಲ್ ಡಿಸೈನರ್ ರಾಕಿ ಒಂದಿಷ್ಟು ಮಾಹಿತಿ ನೀಡಿದ್ದಾರೆ.
                                ಚಿತ್ರಕೃಪೆ: ಪಿಕ್ಸೆಲ್ -
                                
                                ಶೀಲಾ ಸಿ ಶೆಟ್ಟಿ
                            
                                Nov 4, 2025 8:00 AM
                            
                    ಮದುಮಗಳ ಸೌಂದರ್ಯವನ್ನು ಹೆಚ್ಚಿಸುವ ಡಿಸೈನರ್ ಮೂಗುತಿಗಳು ಜ್ಯುವೆಲರಿ ಲೋಕದಲ್ಲಿ ಬಿಡುಗಡೆಗೊಂಡಿವೆ. ಹೌದು, ಇವು ಸದ್ಯ ವೆಡ್ಡಿಂಗ್ ಜ್ಯುವೆಲರಿ ಫ್ಯಾಷನ್ನಲ್ಲಿ ಇತರೆ ಆಭರಣಗಳೊಂದಿಗೆ ಪ್ರಮುಖ ಸ್ಥಾನವನ್ನು ಪಡೆದಿವೆ.
                    ವೈವಿಧ್ಯಮಯ ವಿನ್ಯಾಸದಲ್ಲಿ ಡಿಸೈನರ್ ಮೂಗುತಿಗಳು
ಅಗಲವಾದ ಸ್ಟಾರ್, ಫ್ಲವರ್ ಡಿಸೈನ್ನವು, ಸಿಂಗಲ್ ಹೂಪ್ ಡಬ್ಬಲ್ ಹೂಪ್, ಡೈಮಂಡ್ ಸ್ಟಾರ್, ಜೆಮ್ಸ್ಟೋನ್ಸ್, ಪರ್ಲ್, ಜರ್ಕೂನ್, ಟಕ್ರ್ಯೊಸ್, ವರ್ಮೈಲ್, ಕುಂದನ್, ಬೀಡ್ಸ್ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಡಿಸೈನರ್ ಮೂಗುತಿಗಳು ಈ ವೆಡ್ಡಿಂಗ್ ಸೀಸನ್ನಲ್ಲಿ ಎಂಟ್ರಿ ನೀಡಿವೆ.
                    ಮ್ಯಾಚಿಂಗ್ ಮೂಗುತಿಗಳು
ಕೆಲವು ಡಿಸೈನರ್ ಮೂಗುತಿಗಳು ಮದುಮಗಳ ಡಿಸೈನರ್ ಸೀರೆ ಅಥವಾ ಲೆಹೆಂಗಾ ವರ್ಣಕ್ಕೆ ಸೂಟ್ ಆಗುವಂತಹ ಡಿಸೈನ್ನಲ್ಲೂ ದೊರೆಯುತ್ತಿವೆ. ಅಷ್ಟೇಕೆ? ಕಸ್ಟಮೈಸ್ಡ್ ಡಿಸೈನ್ನ ಮೂಗುತಿಗಳು ಡಿಸೈನರ್ವೇರ್ಗೆ ತಕ್ಕಂತೆ ಮದುಮಗಳನ್ನು ಸಿಂಗರಿಸುತ್ತಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ಸಾಜನ್. ಅವರ ಪ್ರಕಾರ, ಈ ಹಿಂದೆ ಕೇವಲ ಡೈಮಂಡ್ ಹಾಗೂ ಸಿಂಗಲ್ ಹರಳಿನ ಸಿಂಪಲ್ ಮೂಗುತಿಗಳನ್ನು ಪ್ರಿಫರ್ ಮಾಡುತ್ತಿದ್ದರು. ಇದೀಗ ಟ್ರೆಂಡ್ ಬದಲಾಗಿದ್ದು, ಮೂಗನ್ನು ಎದ್ದು ಕಾಣುವಂತೆ ಮಾಡುವ ಡಿಸೈನರ್ ಮೂಗುತಿಗಳು ಪ್ರಚಲಿತದಲ್ಲಿವೆ ಎನ್ನುತ್ತಾರೆ.
                    ಹರಳಿನ ಕಲರ್ ಮೂಗುತಿ
ಇದೀಗ ಐದು ಹಾಗೂ ಏಳು ಕಲ್ಲಿನ ಬಂಗಾರದ ಹರಳಿನ ಹಾಗೂ ಡೈಮಂಡ್ನ ಮೂಗುತಿಗೂ ಬೇಡಿಕೆ ಹೆಚ್ಚಿದೆ. ಇನ್ನು ಅಮೆರಿಕನ್ ಡೈಮಂಡ್ನ ಬಣ್ಣಬಣ್ಣದ ಹರಳಿನ ಮೂಗುತಿಗಳನ್ನು ಕೂಡ ಖರೀದಿಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಮಣ.
ಬಂಗಾರೇತರ ಮೂಗುತಿಗಳು
ಡಿಸೈನರ್ವೇರ್ಗೆ ತಕ್ಕಂತೆ ಧರಿಸುವ ಮ್ಯಾಚಿಂಗ್ ಬಂಗಾರೇತರ ಡಿಸೈನರ್ ಮೂಗುತಿಗಳು ಚಾಲ್ತಿಯಲ್ಲಿವೆ. ಇವು ಕೂಡ ಇಂದು ಹೆಚ್ಚು ಟ್ರೆಂಡಿಯಾಗಿವೆ.
                    ಚುಚ್ಚದೇ ಧರಿಸಬಹುದಾದ ಪ್ರೆಸ್ಆನ್ ಮೂಗುತಿ
ಬಂಗಾರದಲ್ಲಿ ಇಂತವು ಕಡಿಮೆ. ಆರ್ಟಿಫಿಷಿಯಲ್ ಅಥವಾ ವನ್ ಗ್ರಾಮ್ ಗೋಲ್ಡ್ನಲ್ಲಿ ಪ್ರಸ್ಆನ್ ಮೂಗುತಿಗಳು ದೊರೆಯುತ್ತಿದ್ದು, ಮೂಗು ಚುಚ್ಚಲು ಬಯಸದವರು ಇದರತ್ತ ಆಕರ್ಷಿತರಾಗುತ್ತಿದ್ದಾರೆ ಎನ್ನುತ್ತಾರೆ ಡಿಸೈನರ್ಸ್.