ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wedding Fashion 2025: ಮದುವೆಯಲ್ಲಿ ಸೆಲೆಬ್ರೆಟಿ ಲುಕ್‌ಗಾಗಿ ಇಲ್ಲಿದೆ ಸಿಂಪಲ್ ಐಡಿಯಾ

Wedding Fashion: ಮದುವೆಯಲ್ಲಿ ನೀವು ಸೆಲೆಬ್ರೆಟಿ ಇಲ್ಲವೇ ನೋಡಲು ಸಿನಿಮಾ ತಾರೆಯಂತೆ ಕಾಣಿಸಿಕೊಳ್ಳಬೇಕೆ? ಖಂಡಿತಾ ಸಾಧ್ಯ! ಇದಕ್ಕಾಗಿ ನೀವು ಮಾಡಬೇಕಾದ್ದೀಷ್ಟೇ. ಈ ಸಿಂಪಲ್ ಐಡಿಯಾಗಳನ್ನು ಪಾಲಿಸಿ, ನೋಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ‌ಈ ಕುರಿತಂತೆ ಇಲ್ಲಿದೆ ವಿವರ.

ಚಿತ್ರಕೃಪೆ: ಪಿಕ್ಸೆಲ್
1/5

ಸೆಲೆಬ್ರೆಟಿ ಥರ ರೆಡಿಯಾಗಬೇಕೆ?

ಮದುವೆಯಲ್ಲಿ ನೀವು ಸೆಲೆಬ್ರೆಟಿ ಇಲ್ಲವೇ ನೋಡಲು ಸಿನಿಮಾ ತಾರೆಯಂತೆ ಕಾಣಿಸಿಕೊಳ್ಳಬೇಕೇ? ಖಂಡಿತಾ ಸಾಧ್ಯ! ಇದಕ್ಕಾಗಿ ನೀವು ಮಾಡಬೇಕಾದ್ದೀಷ್ಟೇ! ಒಂದಿಷ್ಟು ಐಡಿಯಾಗಳನ್ನು ಫಾಲೋ ಮಾಡಿ ಎನ್ನುತ್ತಾರೆ ವೆಡ್ಡಿಂಗ್ ಸ್ಟೈಲಿಸ್ಟ್‌ಗಳು.

2/5

ಟ್ರೆಡಿಷನಲ್ ಔಟ್‌ಫಿಟ್ಸ್ ಆಯ್ಕೆಗೆ ಆದ್ಯತೆ

ಮದುವೆಯಲ್ಲಿ ಧರಿಸಲು ಗ್ರ್ಯಾಂಡ್ ಲುಕ್ ನೀಡುವಂತಹ ಟ್ರೆಂಡಿ ಕಲರ್‌ ಹಾಗೂ ಡಿಸೈನ್ ಇರುವಂತಹ ಸೀರೆ ಆಯ್ಕೆ ಮಾಡಿ. ಮದುವೆಯ ಸೀರೆ ಗ್ರ್ಯಾಂಡ್ ಲುಕ್ ನೀಡುವಂತದ್ದಾಗಿರಬೇಕು. ಮಿನುಗುವ ಸೀರೆಗಳನ್ನು ಸೆಲೆಕ್ಟ್ ಮಾಡಿ.

3/5

ವೆಡ್ಡಿಂಗ್ ಸ್ಟೈಲಿಸ್ಟ್‌ಗಳ ಸಹಾಯ ಪಡೆದುಕೊಳ್ಳಿ

ಸೆಲೆಬ್ರೆಟಿ ಲುಕ್‌ಗಾಗಿ ಪ್ರೊಫೆಷನಲ್ ಸ್ಟೈಲಿಸ್ಟ್‌ಗಳ ಸಹಾಯವನ್ನು ಪಡೆದುಕೊಳ್ಳಬಹುದು. ಒಂದೆರೆಡು ಸಿಟ್ಟಿಂಗ್ನಲ್ಲಿ ಅಗತ್ಯ ಮಾಹಿತಿ ಪಡೆಯಬಹುದು. ಇಲ್ಲವಾದಲ್ಲಿ ಶಾಪಿಂಗ್ ಕೂಡ ಅವರೊಂದಿಗೆ ಮಾಡಬಹುದು. ನಿಮಗೆ ಹೊಂದುವಂತಹ ಔಟ್‌ಫಿಟ್, ಸೀರೆಗಳನ್ನು ಮ್ಯಾಚ್‌ ಮಾಡಿ ಕೊಡುವುದರೊಂದಿಗೆ ಮದುವೆ ಮುಗಿಯುವ ತನಕ ಗೈಡ್ ಮಾಡುತ್ತಾರೆ.

4/5

ಬೋಟಿಕ್‌ಗಳಲ್ಲಿ ಪ್ಯಾಕೇಜ್ ಸೌಲಭ್ಯ

ಬೋಟಿಕ್‌ಗಳಲ್ಲೂ ಮದುಮಗಳ ಡಿಸೈನರ್‌ವೇರ್ ಹಾಗೂ ಮದುವೆ ಸೀರೆ ಬ್ಲೌಸ್ ಡಿಸೈನ್‌ ಮಾಡುವ ತಲುಪಿಸುವ ಪ್ಯಾಕೇಜ್‌ಗಳನ್ನು ತೆಗೆದುಕೊಳ್ಳುತ್ತಾರೆ. ಮೆಹಂದಿ ಕಾರ್ಯಕ್ರಮದಿಂದ ಹಿಡಿದು ಮದುವೆಯ ದಿನದವರೆಗೂ ಹುಡುಗಿ ಯಾವ ಬಗೆಯ ಉಡುಪು ಹಾಗೂ ಸೀರೆ ಧರಿಸಬೇಕೆಂಬುದರ ಬಗ್ಗೆ ಪಕ್ಕಾ ಪ್ಲಾನ್‌ ಮಾಡಿ ಎಲ್ಲವನ್ನೂ ಪ್ಯಾಕೇಜ್‌ನಲ್ಲಿ ಒದಗಿಸುತ್ತಾರೆ. ಸಮಯದ ಅಭಾವವಿರುವವರು ಬೋಟಿಕ್‌ಗಳಿಗೆ ತಮ್ಮ ಕಂಪ್ಲೀಟ್ ಬ್ರೈಡಲ್ ಔಟ್‌ಫಿಟ್ಸ್ ಪ್ಯಾಕೇಜ್ ಕೊಟ್ಟುಬಿಡಬಹುದು. ಟ್ರೆಂಡಿ ಹಾಗೂ ಸೆಲೆಬ್ರೆಟಿ ಲುಕ್‌ ನೀಡುವಂತಹ ಮೇಕಪ್‌ ತಜ್ಞರನ್ನು ಹುಡುಕಿ, ಆಯ್ಕೆ ಮಾಡಿ. ಉಡುಪು ಹಾಗೂ ಸೀರೆಯ ಲುಕ್‌ಗೆ ಸಾಥ್‌ ನೀಡುವಂತಹ ಮೇಕಪ್ ಸೆಲೆಬ್ರಿಟಿ ಲುಕ್‌ಗೆ ಕಾರಣವಾಗಬಲ್ಲದು. ಇಡೀ ಲುಕ್ಕನ್ನೇ ಬದಲಿಸಬಲ್ಲದು. ಅಂತಹ ಜಾದೂ ಮೇಕಪ್‌ನಲ್ಲಿದೆ.

5/5

ಆಕರ್ಷಕ ಗ್ರ್ಯಾಂಡ್ ಲುಕ್‌ಗೆ ಜ್ಯುವೆಲರಿ ಧರಿಸಿ

ಆಯಾ ಸೀರೆ ಹಾಗೂ ಔಟ್‌ಫಿಟ್‌ಗೆ ಮ್ಯಾಚ್ ಆಗುವಂತಹ ಗ್ರ್ಯಾಂಡ್ ಜ್ಯುವೆಲರಿಗಳನ್ನು ಧರಿಸಿ. ಎಲ್ಲ ಉಡುಪು ಹಾಗೂ ಸೀರೆಗೆ ಒಂದೇ ಬಗೆಯ ಆಭರಣಗಳನ್ನು ಧರಿಸುವುದು ಸೆಲೆಬ್ರಿಟಿ ಲುಕ್‌ಗೆ ಸಾಥ್‌ ನೀಡುವುದಿಲ್ಲ. ಇವು ಬಂಗಾರದ್ದೇ ಆಗಬೇಕೆಂದಿಲ್ಲ, ಇಮಿಟೇಷನ್ ಜ್ಯುವೆಲರಿಗಳು ಗ್ರ್ಯಾಂಡ್ ಲುಕ್ ನೀಡಬಲ್ಲವು.

ಶೀಲಾ ಸಿ ಶೆಟ್ಟಿ

View all posts by this author