ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ಚಳಿಗಾಲದಲ್ಲಿ ಹುಡುಗಿಯರಿಗೆ ಗ್ಲಾಮರಸ್ ಲುಕ್ ನೀಡಲು ಬಂತು ಕ್ರಾಪ್ ಸ್ವೆಟರ್ಸ್

Crop Sweaters: ಚಳಿಗಾಲದಲ್ಲಿ ಹುಡುಗಿಯರಿಗೆ ಗ್ಲಾಮರಸ್ ಲುಕ್ ನೀಡಲು ನಾನಾ ಬಗೆಯ ಕ್ರಾಪ್ ಆದ ಸ್ವೆಟರ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಟೀನೇಜ್ ಹುಡುಗಿಯರನ್ನು ಬರಸೆಳೆದಿವೆ. ನಾರ್ಮಲ್ ಪ್ಯಾಂಟ್, ಪಲಾಜೊ, ಕೇಪ್ರಿಸ್‌ಗಳಿಗೂ ಕ್ರಾಪ್ ಆದ ಸ್ವೆಟರ್ ಪರ್ಫೆಕ್ಟ್ ಸೂಟ್ ಆಗುತ್ತವೆ. ಆದರೆ, ಧರಿಸಿದಾಗ ಪ್ಯಾಂಟ್‌ಗಳ ಕಟ್ಸ್ ಹಾಗೂ ಸ್ಟಿಚ್ಚಿಂಗ್ ಕ್ರಾಪ್ ಟಾಪ್‌ಗಳಿಗೆ ಮ್ಯಾಚ್ ಆಗಬೇಕು. ಕ್ರಾಪ್ ಆದ ಸ್ವೆಟರ್‌ಗಳನ್ನು ಸೆಮಿ ಫಾರ್ಮಲ್ ಉಡುಪುಗಳಿಗೂ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ ಇಲ್ಲಿದೆ ವಿವರ.

ಚಿತ್ರಕೃಪೆ: ಪಿಕ್ಸೆಲ್
1/5

ಕ್ರಾಪ್‌ ಸ್ವೆಟರ್‌ಗಳು ಈ ಚಳಿಗಾಲದ ಫ್ಯಾಷನ್‌ಗೆ ಬಿಡುಗಡೆಗೊಂಡಿವೆ. ಹೌದು, ಈ ಮೊದಲು ಟಾಪ್ ಹಾಗೂ ಟೀ ಶರ್ಟ್‌ಗೆ ಸೀಮಿತವಾಗಿದ್ದ ಕ್ರಾಪ್ ಡಿಸೈನ್ ಇದೀಗ ಸ್ವೆಟರ್‌ಗೂ ಕಾಲಿಟ್ಟಿದೆ.

2/5

ಏನಿದು ಕ್ರಾಪ್ಡ್ ಸ್ವೆಟರ್?

ನೋಡಲು ಗಿಡ್ಡವಾದಂತೆ ಕಾಣುವ, ಸರಿಯಾಗಿ ಕಟ್ ಮಾಡಿದಂತೆ ಇರುವ ಕ್ರಾಪ್ ಸ್ವೆಟರ್, ಹೊಟ್ಟೆಯಿಂದ ಮೇಲೆ, ಸೈಡಲ್ಲಿ ಕೊಂಚ ಬಾಗಿದಂತಿರುತ್ತವೆ. ಇವೇ ಕ್ರಾಪ್ಡ್ ಸ್ವೆಟರ್‌ಗಳು.

ಇನ್ನು, ಇತ್ತೀಚೆಗೆ ಹಾಲಿವುಡ್-ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಕ್ರಾಪ್ಡ್ ಸ್ವೆಟರ್‌ಗಳ ಫ್ಯಾಷನ್‌ನ ಮೋಹ ಪಾಶಕ್ಕೆ ಒಳಗಾಗಿದ್ದಾರೆ.

3/5

ಟ್ರೆಂಡಿಯಾಗಿರುವ ಕ್ರಾಪ್‌ ಸ್ವೆಟರ್ಸ್

ಈ ಸೀಸನ್‌ನಲ್ಲಿ ಡೀಸೆಂಟ್ ಲುಕ್ ನೀಡುವ ಪಾಸ್ಟೆಲ್ ಶೇಡ್‌ನ ಸ್ವೆಟರ್‌ಗಳು ಚಾಲ್ತಿಯಲ್ಲಿವೆ. ಕೊಂಚ ಕಲರ್‌ಫುಲ್ ವಿನ್ಯಾಸ ಬಯಸುವವರಿಗೆ ವೈಬ್ರೆಂಟ್ ಶೇಡ್‌ನವು ಫ್ಲೋರಲ್ ಪ್ರಿಂಟ್ಸ್‌ನವು ಬಂದಿವೆ ಎನ್ನುತ್ತಾರೆ ಮಾರಾಟಗಾರರು.

4/5

ಕ್ರಾಪ್ ಆದ ಸ್ವೆಟರ್ ಮಿಕ್ಸ್ ಮ್ಯಾಚ್

ನಾರ್ಮಲ್ ಪ್ಯಾಂಟ್, ಪಲಾಜೊ, ಕೇಪ್ರಿಸ್‌ಗಳಿಗೂ ಕ್ರಾಪ್ ಆದ ಸ್ವೆಟರ್ ಪರ್ಫೆಕ್ಟ್ ಸೂಟ್ ಆಗುತ್ತವೆ. ಆದರೆ, ಧರಿಸಿದಾಗ ಪ್ಯಾಂಟ್‌ಗಳ ಕಟ್ಸ್ ಹಾಗೂ ಸ್ಟಿಚ್ಚಿಂಗ್ ಕ್ರಾಪ್ ಟಾಪ್‌ಗಳಿಗೆ ಮ್ಯಾಚ್ ಆಗಬೇಕು. ಕ್ರಾಪ್ ಆದ ಸ್ವೆಟರ್‌ಗಳನ್ನು ಸೆಮಿ ಫಾರ್ಮಲ್ ಉಡುಪುಗಳಿಗೂ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಕ್ರಾಪ್ಡ್ ಸ್ವೆಟರ್ ಸ್ಟೈಲಿಂಗ್

ಕ್ರಾಪ್ಡ್ ಸ್ವೆಟರ್ ಡಿಸಿಪ್ಲೀನ್ ಲುಕ್ ನೀಡುವುದಿಲ್ಲ. ಈ ಸ್ವೆಟರ್‌ಗೆ ಪ್ರಿಂಟ್ಸ್ ಅಥವಾ ಚೆಕ್ಸ್ ವಿನ್ಯಾಸದ ಪ್ಯಾಂಟ್‌ಗಳು ಮಾತ್ರ ಸೂಟ್ ಆಗುತ್ತವೆ. ಜತೆಗೆ ಕಲರ್ ಫ್ರೇಮ್ ಇರುವ ಕೂಲ್ ಸನ್ ಗ್ಲಾಸ್ ಇಲ್ಲವೇ ಸಾದಾ ಫ್ಯಾಷನಬಲ್ ಕನ್ನಡಕ ಧರಿಸಿದರೇ ಸಾಕು, ಪರ್ಫೆಕ್ಟ್ ಫಂಕಿ ಲುಕ್ ದೊರೆಯುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಕ್ರಾಪ್ ಸ್ವೆಟರ್ ಪ್ರಿಯರಿಗೆ ಸಿಂಪಲ್ ಟಿಪ್ಸ್

  • ಉದ್ದನಾಗಿರುವವರು ಆದಷ್ಟೂ ಪ್ರಿಂಟ್ಸ್‌ನದ್ದು ಸೆಲೆಕ್ಟ್ ಮಾಡಿ.
  • ಆದಷ್ಟೂ ಮಿನಿಮಲ್ ಆಕ್ಸೆಸರೀಸ್ ಇರಲಿ.
  • ಹೈ ಪೋನಿ, ಫಿಶ್ಟೇಲ್, ಸೈಡ್‌ ಪೋನಿ, ಲಾಂಗ್ ಸೈಡ್ ಚೋಟಿಯಂತಹ ಹೇರ್‌ಸ್ಟೈಲ್‌ಗಳು ಈ ಔಟ್‌ಫಿಟ್‌ಗೆ ಪರ್ಫೆಕ್ಟ್ ಸೂಟ್ ಆಗುತ್ತವೆ.

ಶೀಲಾ ಸಿ ಶೆಟ್ಟಿ

View all posts by this author