ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Winter Fashion 2026: ಯುವತಿಯರನ್ನು ಅಪ್ಪಿಕೊಂಡ ಸಿಂಪಲ್ ಸ್ಲಿಮ್ ಸ್ಕರ್ಟ್ಸ್

Simple Slim Skirts: ಯುವತಿಯರಲ್ಲಿ ಸ್ಲಿಮ್ ಸ್ಕರ್ಟ್ ಕ್ರೇಝ್ ಹೆಚ್ಚಾಗಿದೆ. ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣಿಸುವ ಇವು ನಾನಾ ವಿನ್ಯಾಸದಲ್ಲಿ ಆಗಮಿಸಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಸ್ಟೈಲಿಂಗ್ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್
1/5

ಮಾಡರ್ನ್ ಟಚ್

ಸಿಂಪಲ್ ಸ್ಲಿಮ್ ಸ್ಕರ್ಟ್‌ಗಳು ಈ ಸೀಸನ್‌ನ ಟ್ರೆಂಡ್‌ನಲ್ಲಿವೆ. ಯುವತಿಯರು ಧರಿಸಿದಾಗ ಗ್ಲಾಮರಸ್ ಲುಕ್‌ನೊಂದಿಗೆ ಮಾಡರ್ನ್ ಟಚ್ ನೀಡುವ ಈ ಸ್ಲಿಮ್ ಸ್ಕರ್ಟ್‌ಗಳು ಸೀಸನ್ ಫ್ಯಾಷನ್‌ನಲ್ಲಿ ಮಾಡರ್ನ್ ಹುಡುಗಿಯರನ್ನು ಅಪ್ಪಿಕೊಂಡಿವೆ.

2/5

ಟ್ರೆಂಡಿಯಾಗಿರುವ ಸ್ಲಿಮ್ ಸ್ಕರ್ಟ್ಸ್

ಎ ಲೈನ್ ಸ್ಕರ್ಟ್ಸ್, ಲಾಂಗ್ ಮಿಡಿ ಸ್ಕರ್ಟ್ಸ್, ಶಾರ್ಟ್ಸ್ , ಮಿನಿ ಸ್ಲಿಮ್ ಸ್ಕರ್ಟ್ಸ್, ಬಗೆಬಗೆಯ ಪೆನ್ಸಿಲ್ ಸ್ಲಿಮ್ ಸ್ಕರ್ಟ್ಸ್, ಹೈ ವೇಸ್ಟ್ ಡೆನಿಮ್ ಸ್ಲಿಮ್ ಸ್ಕರ್ಟ್ಸ್ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯವು ಈ ಸೀಸನ್‌ನಲ್ಲಿ ಮರುಕಳಿಸಿವೆ. ಸದಾ ಗ್ಲಾಮರಸ್ ಆಗಿ ಕಾಣಲು ಬಯಸುವವರನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಡಿಸೈನರ್ ರಾಜ್. ಅವರ ಪ್ರಕಾರ, ಇಂದು ಯುವತಿಯರು ಮಾತ್ರವಲ್ಲ, ಮಧ್ಯ ವಯಸ್ಸಿನ ಮಹಿಳೆಯರು ಕೂಡ ಅದರಲ್ಲೂ ಫಿಟ್ನೆಸ್ ಫ್ರೀಕ್ ಇರುವಂತಹ ಮಾನಿನಿಯರು ಸ್ಲಿಮ್ ಸ್ಕರ್ಟ್ಸ್ ಧರಿಸತೊಡಗಿದ್ದಾರೆ.

3/5

ಸ್ಲಿಮ್ ಸ್ಕರ್ಟ್ಸ್ ಜತೆ ಮಿಕ್ಸ್ ಮ್ಯಾಚ್

ಸ್ಲಿಮ್ ಸ್ಕರ್ಟ್ಸ್ ಧರಿಸುವುದು ದೊಡ್ಡ ವಿಷಯವಲ್ಲ, ಆಯಾ ಪರ್ಸನಾಲಿಟಿಗೆ ತಕ್ಕಂತೆ ಈ ಸ್ಕರ್ಟನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ಲಂಪಿಯಾಗಿದ್ದಲ್ಲಿ ಆದಷ್ಟೂ ಲಾಂಗ್ ಸ್ಲಿಮ್ ಸ್ಕರ್ಟ್ ಧರಿಸುವುದು ಉತ್ತಮ. ಇನ್ನು, ತೆಳ್ಳಗಿದ್ದಲ್ಲಿ ಯಾವುದಾದರೂ ಸರಿಯೇ ಹೊಂದಿಕೊಳ್ಳುತ್ತವೆ. ಡೆನಿಮ್ ಸ್ಲಿಮ್ ಸ್ಕರ್ಟ್‌ಗಳಲ್ಲಿ ಲೆಕ್ಕವಿಲ್ಲದಷ್ಟು ಬಗೆಯವು ದೊರೆಯುತ್ತವೆ. ಇವು ಯಾವ ಸೀಸನ್‌ನಲ್ಲಿಯೂ ಬೇಕಾದರೂ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.

4/5

ಸಿಂಪಲ್ ಸ್ಲಿಮ್ ಸ್ಕರ್ಟ್ಸ್ ವಿಶೇಷತೆ‌

ಸ್ಲಿಮ್ ಸ್ಕರ್ಟ್ಸ್ ಎಂದಾಕ್ಷಣ ಸ್ಲಿಮ್‌ ಆಗಿ ಕಾಣಿಸುತ್ತಾರೆ ಎಂದರ್ಥವಲ್ಲ, ಸಿಂಪಲ್ ಆಗಿ ಹೇಳುವುದಾದಲ್ಲಿ, ಇವು ಹೆಚ್ಚು ವಿನ್ಯಾಸ ಹೊಂದಿರುವುದಿಲ್ಲ. ಬದಲಿಗೆ ಎ ಲೈನ್ ಸ್ಟಿಚ್ಚಿಂಗ್ ಹೊಂದಿರುತ್ತವೆ. ನೆರಿಗೆಗಳಿರುವುದಿಲ್ಲ, ಹೆವ್ವಿ ಡಿಸೈನ್ ಹೊಂದಿರುವುದುದಿಲ್ಲ. ಬದಲಿಗೆ ತೀರಾ ಸಿಂಪಲ್ ಆಗಿ ಕಾಣಿಸುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

5/5

ಸ್ಲಿಮ್ ಸ್ಕರ್ಟ್ಸ್ ಸ್ಟೈಲಿಂಗ್‌ಗೆ 5 ಟಿಪ್ಸ್

  • ನಿಮ್ಮ ಬಾಡಿ ಮಾಸ್ ಇಂಡೆಕ್ಸ್‌ಗೆ ಹೊಂದುವಂತದ್ದನ್ನು ಧರಿಸಿ.
  • ಮಾಡರ್ನ್ ಲುಕ್ ನೀಡುತ್ತದೆ.
  • ಯಾವ ಟಾಪ್ ಬೇಕಾದರೂ ಮಿಕ್ಸ್ ಮ್ಯಾಚ್ ಮಾಡಬಹುದು.
  • ಸಿಂಪಲ್ ಲುಕ್ ಕೂಡ ನೀಡಬಹುದು.
  • ಹಾಫ್ ಶೂ ಚೆನ್ನಾಗಿ ಒಪ್ಪುತ್ತದೆ.

ಶೀಲಾ ಸಿ ಶೆಟ್ಟಿ

View all posts by this author