ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Winter Sale 2026: ವಿಂಟರ್ ಸೀಸನ್ ಎಂಡ್ ಸೇಲ್‌ನ ಸದುಪಯೋಗ ಪಡಿಸಿಕೊಳ್ಳುವುದು ಹೇಗೆ?

Winter Season End Sale: ವಿಂಟರ್ ಸೀಸನ್ ಎಂಡ್ ಸೇಲ್‌ನಲ್ಲಿ ಏನೆಲ್ಲಾ ಲಭ್ಯ? ಹೇಗೆಲ್ಲಾ ಈ ಸೇಲ್‌ನ ಸದುಯೋಗಪಡಿಸಿಕೊಳ್ಳಬಹುದು? ಎಂಬುದರ ಬಗ್ಗೆ ಶಾಪಿಂಗ್ ಎಕ್ಸ್‌ಪರ್ಟ್ಸ್‌ ಒಂದಿಷ್ಟು ಐಡಿಯಾ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಚಿತ್ರಗಳು: ಮಿಂಚು
1/5

ಮಾಲ್‌ಗಳಲ್ಲಿ ವಿಂಟರ್ ಸೀಸನ್ ಸೇಲ್ ಈಗಾಗಲೇ ಆರಂಭಗೊಂಡಿದ್ದು, ಇನ್ನೇನು ಮುಗಿಯಲಿದೆ. ಈ ಸೀಸನ್‌ನಲ್ಲಿ ಎಂಟ್ರಿ ನೀಡಿದ್ದ ಸಾಕಷ್ಟು ಬಗೆಯ ಲೇಯರ್ ಲುಕ್ ನೀಡುವ ಔಟ್‌ಫಿಟ್ಸ್, ಜಾಕೆಟ್, ಬಗೆಬಗೆಯ ಕೋಟ್‌ಗಳು, ಲೆಕ್ಕವಿಲ್ಲದಷ್ಟು ಆಕ್ಸೆಸರೀಸ್‌ಗಳು ಈ ಸೇಲ್‌ನಲ್ಲಿ ಬಿಕರಿಗೊಳ್ಳುತ್ತಿವೆ.

ಸದುಪಯೋಗಪಡಿಸಿಕೊಳ್ಳಿ

ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ, ಈ ಸೇಲ್‌ನ ಸದುಪಯೋಗಪಡಿಸಿಕೊಳ್ಳಬಹುದು. ಒಂದಿಷ್ಟು ಹಣವನ್ನು ಉಳಿಸಬಹುದು ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್‌.

2/5

ಸೇಲ್‌ನಲ್ಲಿ ಎಲ್ಲವನ್ನೂ ಕೊಳ್ಳಬೇಡಿ

ಸೇಲ್‌ನಲ್ಲಿ ಏನೆಲ್ಲಾ ಇದೆ ಎಂಬುದನ್ನು ಮೊದಲು ತಿಳಿದುಕೊಳ್ಳಲು ವಿಂಡೋ ಶಾಪಿಂಗ್ ಮಾಡಿ. ಆಗಷ್ಟೇ ನಿಮಗೆ ಸೇಲ್ನಲ್ಲಿ ಏನೇನಿದೆ? ಯಾವುದು ಕೊಳ್ಳಲು ಸೂಕ್ತ? ಎಂಬುದು ತಿಳಿಯುವುದು.

ಖರೀದಿ ಯಾಕೆ? ಎಂಬುದು ತಿಳಿದಿರಲಿ

ವಿಂಟರ್ ಸೀಸನ್‌ನ ಉಡುಪುಗಳು ಮುಂಬರುವ ಸೀಸನ್‌ಗೆ ಹೊಂದುವುದಿಲ್ಲ! ಹಾಗಾಗಿ ಖರೀದಿಸುತ್ತಿರುವುದು ಯಾಕೆ? ಎಂಬುದು ತಿಳಿದಿರಲಿ.

3/5

ಬಿಡಿಯಾಗಿರುವ ಉಡುಪುಗಳನ್ನು ಆಯ್ಕೆ ಮಾಡಿ

ವಿಂಟರ್‌ನಲ್ಲಿ ಲೇಯರ್ ಲುಕ್‌ಗಾಗಿ ಧರಿಸುವ ಬಿಡಿಬಿಡಿಯಾಗಿರುವ ಉಡುಪುಗಳನ್ನು ಖರೀದಿಸಿ. ಅದರಲ್ಲೂ ಸ್ಟ್ರಾಪ್, ಸ್ಲೀವ್‌ಲೆಸ್, ತೆಳುವಾದ ಇನ್ನರ್ ಔಟ್‌ಫಿಟ್‌ಗಳು ಈ ಬೇಸಿಗೆಯ ಸೀಸನ್ಗೂ ಹೊಂದಬಲ್ಲದು.

4/5

ಫ್ಯಾಬ್ರಿಕ್ ನೋಡಿ ಖರೀದಿಸಿ

ಇದೀಗ ಬೇಸಿಗೆ ಆರಂಭವಾಗಿರುವುದರಿಂದ ದಪ್ಪನೆಯ ಫ್ಯಾಬ್ರಿಕ್‌ನ ಉಡುಪು ಖರೀದಿಸಬೇಡಿ. ಇದು ಸೆಕೆಯಾಗಬಹುದು. ಧರಿಸದೇ ಸುಮ್ಮನೆ ಮೂಲೆ ಸೇರಬಹುದು.

5/5

ಎಥ್ನಿಕ್‌ವೇರ್‌ಗಳನ್ನು ಖರೀದಿಸಿ

ಸಮಾರಂಭಗಳಲ್ಲಿ, ಹಬ್ಬಗಳಲ್ಲಿ ಎಥ್ನಿಕ್‌ವೇರ್‌ಗಳನ್ನು ಧರಿಸಬಹುದು. ಹಾಗಾಗಿ ಇವು ವಿಂಟರ್ ಸೇಲ್‌ನಲ್ಲಿ ಕಡಿಮೆ ಬೆಲೆಗೆ ದೊರಕಿದಾಗ ಖರೀದಿಸಿ. ಇವುಗಳ ಖರೀದಿ ಲಾಭವಾಗಬಹುದು.

ಶೀಲಾ ಸಿ ಶೆಟ್ಟಿ

View all posts by this author