ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟಿಎಂಸಿಗೆ ಮತ್ತೊಂದು ಬಹುದೊಡ್ಡ ಹೊಡೆತ: ನಂಬಿಕೆ ಇಲ್ಲದಿರುವ ಸ್ಥಳದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದ ಚಂದ್ರಿಮಾ ಭಟ್ಟಾಚಾರ್ಯ

ಪಕ್ಷದ ಕಚೇರಿಯನ್ನು ಬಂಡುಕೋರರಿಗೆ ನೀಡಿರುವುದಾಗಿ ಮಮತಾ ಬ್ಯಾನರ್ಜಿಯವರು ಆರೋಪಿಸಿದ್ದರಿಂದ ತಾವು ಪಶ್ಚಿಮ ಬಂಗಾಳ ಘಟಕದ ಮುಖ್ಯಸ್ಥೆ ಸೇರಿದಂತೆ ಎಲ್ಲಾ ತೃಣಮೂಲ ಕಾಂಗ್ರೆಸ್ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದಾಗಿ ಮಾಜಿ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಹೇಳಿದ್ದಾರೆ. ನಂಬಿಕೆ ಇಲ್ಲದಿರುವ ಸ್ಥಳದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ಕೋಲ್ಕತ್ತಾ: ನಂಬಿಕೆ ಇಲ್ಲದಿರುವ ಸ್ಥಳದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನ ಮಾಜಿ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ (former minister Chandrima Bhattacharya) ಹೇಳಿದ್ದಾರೆ. ಪಶ್ಚಿಮ ಬಂಗಾಳದ (West bengal) ತೃಣಮೂಲ ಕಾಂಗ್ರೆಸ್ (Trinamool Congress) ಪಕ್ಷದ ಘಟಕದ ಮುಖ್ಯಸ್ಥೆ ಸೇರಿದಂತೆ ಎಲ್ಲಾ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ಅವರು ಮಮತಾ ಬ್ಯಾನರ್ಜಿ (Mamata Banerjee) ತಮ್ಮ ಮೇಲೆ ಮಾಡಿರುವ ಒಂದು ಆರೋಪದ ಕಾರಣದಿಂದ ನಾವು ಈ ರೀತಿ ಮಾಡಿದ್ದಾಗಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕರಲ್ಲಿ ಒಬ್ಬರಾದ ಚಂದ್ರಿಮಾ ಭಟ್ಟಾಚಾರ್ಯ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಮಮತಾ ಬ್ಯಾನರ್ಜಿ ಅವರಿಗೆ ನೀಡಿದ ಬಹುದೊಡ್ಡ ಹೊಡೆತವಾಗಿದೆ. ಮಮತಾ ಬ್ಯಾನರ್ಜಿ ಅವರು ತಾವು ಬಂಡುಕೋರರಿಗೆ ಕಚೇರಿಯನ್ನು ಹಸ್ತಾಂತರಿಸಿರುವುದಾಗಿ ಆರೋಪಿಸಿದ್ದಾರೆ ಎಂದು ಚಂದ್ರಿಮಾ ಭಟ್ಟಾಚಾರ್ಯ ಹೇಳಿದ್ದು, ಇದರಿಂದ ನೊಂದು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ರಾಮ ಮಂದಿರದ ಬಳಿಕ ಬದ್ರಿನಾಥ ದೇವಾಲಯದ ಕಾಣಿಕೆ ದುರುಪಯೋಗ ಆರೋಪ: ತನಿಖೆಗೆ BKTC ಆದೇಶ

ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಬಂಡಾಯ ಬಣವು ಶುಕ್ರವಾರ ಕೋಲ್ಕತ್ತಾದಲ್ಲಿರುವ ಪಕ್ಷದ ಪ್ರಧಾನ ಕಚೇರಿಯನ್ನು ತಾವು ಪಡೆದಿರುವುದಾಗಿ ಹೇಳಿದೆ. ತೃಣಮೂಲ ಭವನದ ಕಟ್ಟಡದ ಗೇಟ್‌ಗಳನ್ನು ಲಾಕ್ ಮಾಡಿ ಶಾಸಕ ಅರುಪ್ ರಾಯ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಘೋಷಿಸುವ ಪೋಸ್ಟರ್ ಅನ್ನು ಕೂಡ ಹಂಚಿಕೊಂಡಿತ್ತು. ಇದರ ಬಳಿಕ ಚಂದ್ರಿಮಾ ಭಟ್ಟಾಚಾರ್ಯ ಅವರು ಶನಿವಾರ ಪಕ್ಷಕ್ಕೆ ರಾಜೀನಾಮೆ ನೀಡಿದರು.

ಬಂಡಾಯ ಬಣವು ತೃಣಮೂಲ ಭವನವನ್ನು ವಶಕ್ಕೆ ಪಡೆದ ಬಳಿಕ ಮಮತಾ ಬ್ಯಾನರ್ಜಿ ಅವರು ಏಳು ಅಥವಾ ಎಂಟು ಬಂಡಾಯ ಶಾಸಕರಿಗೆ ಪಕ್ಷದ ಕಚೇರಿಯನ್ನು ಹಸ್ತಾಂತರಿಸಿದ್ದೇನೆ ಎಂದು ಹೇಳಿದ್ದಾರೆ. ಇದರಿಂದ ನನಗೆ ಬೇಸರವಾಗಿದೆ. ಅದಕ್ಕಾಗಿಯೇ ರಾಜೀನಾಮೆ ನೀಡಿದೆ ಎಂದು ತಿಳಿಸಿದ ಚಂದ್ರಿಮಾ ಭಟ್ಟಾಚಾರ್ಯ, ಮಮತಾ ಬ್ಯಾನರ್ಜಿ ಅವರು ನನ್ನ ಮೇಲೆ ಎಷ್ಟು ವಿಶ್ವಾಸ ಹೊಂದಿದ್ದಾರೆ, ಅವರು ನನ್ನನ್ನು ಎಷ್ಟು ಅವಲಂಬಿಸಿದ್ದಾರೆ ಎಂಬುದು ಇದರಿಂದ ತಿಳಿಯಿತು. ನಂಬಿಕೆ ಇಲ್ಲದಿರುವಲ್ಲಿ, ವಿಶ್ವಾಸವಿಲ್ಲದಿರುವಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ರಾಜೀನಾಮೆ ನೀಡಿದ್ದೇನೆ ಎಡನು ತಿಳಿಸಿದ್ದಾರೆ.

ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ಜೂನ್ 3 ರಂದು ತೃಣಮೂಲ ಕಾಂಗ್ರೆಸ್‌ನ ಬಂಗಾಳ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇದಾದ ಒಂದು ತಿಂಗಳೊಳಗೆ ಅವರು ಪಕ್ಷದಿಂದ ಹೊರನಡೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಕುನಾಲ್ ಘೋಷ್, ಚಂದ್ರಿಮಾ ಭಟ್ಟಾಚಾರ್ಯ ಅವರು ದುರಹಂಕಾರಿ. ಯಾರು ಬೇಕಾದರೂ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿದ್ದಾಗ ಭಟ್ಟಾಚಾರ್ಯ ಅವರು ಪ್ರಮುಖ ಸಚಿವರಾಗಿದ್ದರು. ಈಗ ಅವರು ದುರಹಂಕಾರವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಬಂಗಾಳ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ರಾಜೀನಾಮೆ

ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ನಡೆದ ಬಂಡಾಯದ ಬಳಿಕ 80 ಶಾಸಕರಲ್ಲಿ 60ಕ್ಕೂ ಹೆಚ್ಚು ಮಂದಿ ರಿತಬ್ರತಾ ಬ್ಯಾನರ್ಜಿ ಅವರನ್ನೇ ತಮ್ಮ ಮುಖ್ಯಸ್ಥರು ಎಂದು ಹೇಳಿಕೊಂಡಿದ್ದಾರೆ. ಇದರೊಂದಿಗೆ ಮಮತಾ ಬ್ಯಾನರ್ಜಿಯವರ ಮತ್ತೊಬ್ಬ ಆಪ್ತರಲ್ಲಿ ಒಬ್ಬರಾದ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಮತ್ತೊಂದು ಬಣ ಹುಟ್ಟಿಕೊಂಡಿದೆ. ಇದು 20 ಸಂಸದರನ್ನು ಸೇರಿಸಿಕೊಂಡು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡಿದೆ.

ರಿತಬ್ರತಾ ಬ್ಯಾನರ್ಜಿ ಅವರ ಬಂಡಾಯ ಬಣ ತಮ್ಮದೇ ನಿಜವಾದ'ತೃಣಮೂಲ ಕಾಂಗ್ರೆಸ್ ಎಂದು ಸಾಬೀತುಪಡಿಸಲು ಹೋರಾಡುತ್ತಿದ್ದು, ಇದು ಈಗ ಮಮತಾ ಬ್ಯಾನರ್ಜಿ ಮತ್ತು ರಿತಬ್ರತಾ ಬ್ಯಾನರ್ಜಿ ಬೆಂಬಲಿಗರ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ವಿದ್ಯಾ ಇರ್ವತ್ತೂರು

View all posts by this author