ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Assembly Election: ಬಿಹಾರ ಎಕ್ಸಿಟ್‌ ಪೋಲ್‌ ರಿಸಲ್ಟ್‌ ಔಟ್‌; ಎನ್‌ಡಿಎಗೆ ಮತ್ತೆ ಅಧಿಕಾರ ಸಾಧ್ಯತೆ: ಮಹಾಘಟಬಂಧನ್‌ ಕಥೆ ಏನಾಗಲಿದೆ?

Exit Poll Result: ನವೆಂಬರ್‌ 6 ಮತ್ತು 11-ಹೀಗೆ 2 ಹಂತದಲ್ಲಿ ಮತದಾನ ನಡೆದ ಬಿಹಾರ ಇದೀಗ ರಾಜಕೀಯ ಕಾವಿನಿಂದ ಮುಕ್ತವಾಗಿದೆ. ನವೆಂಬರ್‌ 14ರಂದು ಫಲಿತಾಂಶ ಘೋಷಣೆಯಾಗಲಿದ್ದು, ಅದಕ್ಕೆ ಮುಂಚಿತವಾಗಿ ಇದೀಗ ಎಕ್ಸಿಟ್‌ ಪೋಲ್‌ ರಿಸಲ್ಟ್‌ ಹೊರ ಬಿದ್ದಿದೆ.

ಬಿಹಾರದಲ್ಲಿ ಚುನಾವಣೆ ಮುಕ್ತಾಯವಾಗಿದ್ದು, ಎಕ್ಸಿಟ್‌ ಪೋಲ್‌ ರಿಸಲ್ಟ್‌ ಹೊರ ಬಿದ್ದಿದೆ (ಸಾಂದರ್ಭಿಕ ಚಿತ್ರ).

ಪಾಟ್ನಾ, ನ. 11: ದೇಶದ ಗಮನ ಸೆಳೆದ ಬಿಹಾರ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ (Bihar Assembly Election). ನವೆಂಬರ್‌ 6 ಮತ್ತು 11-ಹೀಗೆ 2 ಹಂತದಲ್ಲಿ ಮತದಾನ ನಡೆದಿದ್ದು, 243 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ನವೆಂಬರ್‌ 14ರಂದು ಫಲಿತಾಂಶ ಪ್ರಕಟವಾಗಲಿದ್ದು, ಅದಕ್ಕೆ ಮುಂಚಿತವಾಗಿ ಇದೀಗ ಮತದಾನೋತ್ತರ ಸಮೀಕ್ಷೆಯ ರಿಸಲ್ಟ್‌ ಹೊರ ಬಿದ್ದಿದೆ (Exit Poll Result). ಅದರಂತೆ ಎನ್‌ಡಿಎ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಬಹುತೇಕ ಸಮೀಕ್ಷೆಗಳು ಎನ್‌ಡಿಎ ಅಧಿಕಾರಕ್ಕೆ ಬರುವ ಸೂಚನೆ ನೀಡಿವೆ. ಅದಾಗ್ಯೂ ವಿಪಕ್ಷಗಳ ಮಹಾಘಟಬಂಧನ್‌ ಮೈತ್ರಿಕೂಟ ತೀವ್ರ ಪೈಪೋಟಿ ಒಡ್ಡಲಿದೆ ಎಂದು ತಿಳಿಸಿದೆ. ಎನ್‌ಡಿಎಗೆ ಗರಿಷ್ಠ 167 ತನಕ ಸೀಟ್‌ ಸಿಗುವ ಸಾಧ್ಯತೆ ಇದೆ.

ಬಿಹಾರದಲ್ಲಿ ಸರಳ ಬಹುಮತಕ್ಕೆ 122 ಸೀಟ್‌ ಅಗತ್ಯವಾಗಿದ್ದು, 2020ರಲ್ಲಿ ಎನ್‌ಡಿಎ 125 ಕಡೆಗಳಲ್ಲಿ ಜಯಗಳಿಸಿತ್ತು. ಈ ಬಾರಿ ಭಾರಿ ನಿರೀಕ್ಷೆಯೊಂದಿಗೆ ಚುನಾವಣಾ ಕಣಕ್ಕಿಳಿದಿದ್ದ ಪ್ರಶಾಂತ್‌ ಕಿಶೋರ್‌ ಅವರ ಜನ ಸುರಾಜ್‌ ಪಾರ್ಟಿ ಯಾವುದೇ ಮ್ಯಾಜಿಕ್‌ ಮಾಡುವಲ್ಲಿ ವಿಫಲವಾಗಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಯಾರು ಏನಂದ್ರು?

ಜೆವಿಸಿ-ಟೈಮ್ಸ್‌ ನೌ

ಎನ್‌ಡಿಎ: 135-150

ಮಹಾಘಟಬಂಧನ್‌ : 88-103

ಇತರ: 3-6

ಮ್ಯಾಟ್ರಿಝ್‌-ಐಎಎನ್‌ಎಸ್‌

ಎನ್‌ಡಿಎ: 147-167

ಮಹಾಘಟಬಂಧನ್‌ : 70-90

ಇತರ: 0-5

ಪೀಪಲ್ಸ್‌ ಇನ್‌ಸೈಟ್‌

ಎನ್‌ಡಿಎ: 135-140

ಮಹಾಘಟಬಂಧನ್‌ : 87-102

ಇತರ: 0-5

ಚಾಣಕ್ಯ

ಎನ್‌ಡಿಎ: 130-138

ಮಹಾಘಟಬಂಧನ್‌ : 100-108

ಇತರ: 3-5

ದೈನಿಕ್‌ ಭಾಸ್ಕರ್‌

ಎನ್‌ಡಿಎ: 145-160

ಮಹಾಘಟಬಂಧನ್‌ : 73-91

ಇತರ: 8

ಈ ಸುದ್ದಿಯನ್ನೂ ಓದಿ: Bihar Exit Poll 2025: ಬಿಹಾರ ಚುನಾವಣೆಯ ಎಕ್ಸಿಟ್‌ ಪೋಲ್‌ ಹೇಗೆ ನಡೆಯುತ್ತದೆ? ಎಲ್ಲಿ ವೀಕ್ಷಿಸಿಬಹುದು.. ಇಲ್ಲಿದೆ ಸಂಪೂರ್ಣ ಮಾಹಿತಿ

ಒಟ್ಟಿನಲ್ಲಿ ಬಹುತೇಕ ಎಲ್ಲ ಸಮೀಕ್ಷೆಗಳು ಮತ್ತೆ ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದು, ಆರ್‌ಜೆಡಿ, ಕಾಂಗ್ರೆಸ್‌ ಒಳಗೊಂಡ ಮಹಾಘಟಬಂಧನ್‌ ಮೈತ್ರಿಕೂಟಕ್ಕೆ ಮುಖಭಂಗವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಷ್ಠೆಯ ಕಣವಾಗಿದ್ದ ಬಿಹಾರದಲ್ಲಿ ಮತ್ತೊಮ್ಮೆ ಮ್ಯಾಜಿಕ್‌ ಮಾಡುವಲ್ಲಿ ಅವರು ಸಫಲರಾಗಲಿದ್ದಾರೆ.

ಈ ಬಾರಿ ಬಿಜೆಪಿ ಜತೆಗೆ ನಿತೀಶ್‌ ಕುಮಾರ್‌ ಅವರ ಜೆಡಿಯು, ಚಿರಾಗ್‌ ಪಾಸ್ವಾನ್‌ ಅವರ ಎಲ್‌ಜೆಪಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದವು. ಇನ್ನು ಪ್ರಶಾಂತ್‌ ಕಿಶೋರ್‌ ಅವರ ಜನ ಸುರಾಜ್‌ ಪಾರ್ಟಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿತ್ತು.