ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election 2025: ಆರ್‌ಜೆಡಿ ಸೋಲಿನ ಬಳಿಕ ರಾಜಕೀಯ, ಕುಟುಂಬ ತೊರೆದ ಲಾಲು ಪ್ರಸಾದ್ ಯಾದವ್ ಪುತ್ರಿ

ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯವನ್ನು ತೊರೆದಿದ್ದು, ಬಳಿಕ ಇದೀಗ ಕುಟುಂಬವನ್ನು ಕೂಡ ತೊರೆಯುವುದಾಗಿ ಘೋಷಿಸಿದ್ದಾರೆ. ಪಕ್ಷದ ಸೋಲಿನ ಸಂಪೂರ್ಣ ಹೊಣೆಯನ್ನು ತಾವು ಹೊತ್ತುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ (ಸಂಗ್ರಹ ಚಿತ್ರ)

ಬಿಹಾರ: ವಿಧಾನ ಸಭಾ ಚುನಾವಣೆಯಲ್ಲಿ (Bihar Election 2025) ರಾಷ್ಟ್ರೀಯ ಜನತಾ ದಳ (Rashtriya Janata Dal) ಪಕ್ಷದ ಹೀನಾಯ ಸೋಲಿನ ಸಂಪೂರ್ಣ ಹೊಣೆ ಹೊತ್ತುಕೊಂಡಿರುವ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಪುತ್ರಿ ರೋಹಿಣಿ ಆಚಾರ್ಯ (Rohini Acharya) ಅವರು ರಾಜಕೀಯವನ್ನು ತೊರೆದಿದ್ದು, ಬಳಿಕ ಇದೀಗ ಕುಟುಂಬವನ್ನು ಕೂಡ ತೊರೆಯುವುದಾಗಿ ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಪಕ್ಷದ ಸೋಲಿನ ಎಲ್ಲಾ ಹೊಣೆಯನ್ನು ನಾನು ಹೊರುತ್ತಿದ್ದೇನೆ. ಹೀಗಾಗಿ ನಾನು ರಾಜಕೀಯವನ್ನು ಮತ್ತು ಕುಟುಂಬವನ್ನು ತ್ಯಜಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ ಪಕ್ಷವು ಕೇವಲ 25 ಸ್ಥಾನಗಳನ್ನು ಗಳಿಸುವಲ್ಲಿ ಮಾತ್ರ ಯಶಸ್ಸು ಕಂಡಿದೆ. ಆದರೆ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ಇದರಿಂದ ನೊಂದ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಶನಿವಾರ ತಾವು ರಾಜಕೀಯ ಮತ್ತು ಕುಟುಂಬವನ್ನು ತೊರೆಯುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: Road Accident: ಬಂಟ್ವಾಳದಲ್ಲಿ ಅಪಘಾತ, ಉಡುಪಿ ಶ್ರೀಕೃಷ್ಣ ಮಠಕ್ಕೆ ಹೊರಟಿದ್ದ ಮೂವರು ಸಾವು

ತೇಜಸ್ವಿ ಯಾದವ್ ಅವರ ಆಪ್ತರಾಗಿರುವ ಸಂಜಯ್ ಯಾದವ್ ಬಳಿ ಪಕ್ಷದ ಸೋಲಿನ ಎಲ್ಲಾ ಹೊಣೆಗಾರಿಕೆಯನ್ನು ತಾವು ಹೊತ್ತುಕೊಳ್ಳುವುದಾಗಿ ಹೇಳಿ ರಾಜಕೀಯ ಮತ್ತು ಕುಟುಂಬವನ್ನು ತ್ಯಜಿಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ಅವರು, ಸಂಜಯ್ ಯಾದವ್ ಮತ್ತು ರಮೀಜ್ ಈ ಬಗ್ಗೆ ನನ್ನನ್ನು ಕೇಳಿಕೊಂಡಿದ್ದು ಇದಕ್ಕಾಗಿ ನಾನು ಎಲ್ಲಾ ಹೊಣೆಯನ್ನು ಹೊರುತ್ತಿದ್ದೇನೆ ಎಂದು ಹೇಳಿದ್ದಾರೆ.

ರೋಹಿಣಿ ಅವರ ಈ ಪೋಸ್ಟ್ ಪಕ್ಷದಲ್ಲಿ ಸಂಚಲನ ಎಬ್ಬಿಸಿದೆ. ಅವರ ಮೇಲೆ ಸಂಜಯ್ ಯಾದವ್ ಮತ್ತು ಅವರ ಸಹಾಯಕ ರಮೀಜ್ ಆಲಂ ಒತ್ತಡ ಹೇರಿದ್ದಾರೆ. ಅವರ ವಿರುದ್ಧ ತಕ್ಷಣ ಕ್ರಮ ಕೊಳ್ಳುವಂತೆ ಕೆಲವರು ಒತ್ತಾಯಿಸಿದ್ದಾರೆ.

ಪಕ್ಷದ ಪ್ರಚಾರದ ವೇಳೆ ತೇಜಸ್ವಿ ಅವರ ಸ್ಥಾನವನ್ನು ಸಂಜಯ್ ಆಕ್ರಮಿಸಿಕೊಂಡಿದ್ದರು. ಇದನ್ನು ಆಕ್ಷೇಪಿಸಿದವರಲ್ಲಿ ರೋಹಿಣಿ ಒಬ್ಬರಾಗಿದ್ದಾರೆ. ತೇಜಸ್ವಿ ಅವರನ್ನು ಸಂಜಯ್ ಹೆಚ್ಚಾಗಿ ನಿಯಂತ್ರಿಸುತ್ತಿದ್ದಾರೆ ಎಂದೇ ಅವರು ಭಾವಿಸಿದ್ದಾರೆ ಎನ್ನುತ್ತಿದ್ದಾರೆ ಪಕ್ಷದ ಕೆಲವು ನಾಯಕರು.

ಲಾಲು ಪ್ರಸಾದ್, ರಾಬ್ರಿ ದೇವಿ, ತೇಜಸ್ವಿ ಯಾದವ್ ಮೇಲೆ ಸಂಜಯ್ ಯಾದವ್ ಯಾವ ರೀತಿ ಒತ್ತಡ ಹೇರಿದ್ದಾರೆ ಎನ್ನುವುದು ತಿಳಿದುಬಂದಿಲ್ಲ. ಕುಟುಂಬವನ್ನು ತ್ಯಜಿಸುವ ರೋಹಿಣಿ ಅವರ ಘೋಷಣೆಯಲ್ಲಿ ಆಂತರಿಕ ಕಲಹ ಉಂಟಾಗಿರುವುದು ಸ್ಪಷ್ಟವಾಗಿದೆ. ಇದು ಅವರ ಪೋಷಕರ ಮೇಲೆ ಒತ್ತಡ ಹೇರಿರುವುದನ್ನು ತೋರಿಸಿದೆ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: Bihar Election 2025: ಬಿಹಾರದಲ್ಲಿ ಗೆಲುವಿನ ಮರುದಿನವೇ ಬಿಜೆಪಿಯಿಂದ ಮೂವರು ಅಮಾನತು

ವೈದ್ಯಕೀಯ ಪದವೀಧರೆಯಾಗಿರುವ ರೋಹಿಣಿ ಯಾದವ್ ಮದುವೆಯಾದ ಬಳಿಕ ಪತಿ ಮತ್ತು ಮಕ್ಕಳೊಂದಿಗೆ ಸಿಂಗಾಪುರದಲ್ಲಿ ವಾಸವಾಗಿದ್ದರು. ತಂದೆಗೆ ಮೂತ್ರಪಿಂಡವನ್ನು ದಾನ ಮಾಡಿರುವ ಇವರು ಬಳಿಕ ಆರ್‌ಜೆಡಿಯಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ವರ್ಷ ಅವರು ತಮ್ಮ ತಂದೆಯ ಕ್ಷೇತ್ರವಾದ ಸರನ್ ನಲ್ಲಿ ಸ್ಪರ್ಧಿಸಿ ಸೋತಿದ್ದಾರೆ.

ಕುಟುಂಬದೊಳಗಿನ ಬಿಕ್ಕಟ್ಟಿನ ಬಳಿಕ ಈ ವರ್ಷದ ಆರಂಭದಲ್ಲಿ ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಬಳಿಕ ಅವರು ಹೊಸ ರಾಜಕೀಯ ಪಕ್ಷವನ್ನು ಕಟ್ಟಿದರು. ಜನಶಕ್ತಿ ಜನತಾದಳವನ್ನು ರಚಿಸಿದ ಅವರು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಸೋತರು.

ವಿದ್ಯಾ ಇರ್ವತ್ತೂರು

View all posts by this author