ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Elections 2025: 2 ರಾಜ್ಯಗಳಲ್ಲಿ ಮತದಾರನಾಗಿ ನೋಂದಣಿ: ಪ್ರಶಾಂತ್ ಕಿಶೋರ್‌ಗೆ ನೋಟಿಸ್‌

ಮತದಾರನಾಗಿ ಎರಡು ರಾಜ್ಯಗಳಲ್ಲಿ ಹೆಸರು ನೋಂದಣಿ ಮಾಡಿರುವ ಜನ ಸುರಾಜ್ ಪಕ್ಷದ ಮುಖ್ಯಸ್ಥ, ತೃಣಮೂಲ ಕಾಂಗ್ರೆಸ್‌ನ ಮಾಜಿ ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್‌ ಜಾರಿ ಮಾಡಲಾಗಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಂಡುಬಂದಿದೆ.

ಪಾಟ್ನಾ: ಜನ ಸುರಾಜ್ ಪಕ್ಷದ ಮುಖ್ಯಸ್ಥ (Jan Suraaj chief), ತೃಣಮೂಲ ಕಾಂಗ್ರೆಸ್‌ನ (TMC) ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್‌ಗೆ (Prashant Kishor) ಚುನಾವಣಾ ಆಯೋಗದಿಂದ (Election Commission) ನೋಟಿಸ್‌ ಜಾರಿ ಮಾಡಲಾಗಿದೆ. ಬಿಹಾರ ವಿಧಾನಸಭಾ ಚುನಾವಣೆಗೆ (Bihar Elections 2025) ಮುನ್ನ ಬಿಹಾರ ಮತ್ತು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಂಡುಬಂದಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಂಗಳವಾರ ನೋಟಿಸ್‌ ನೀಡಿದೆ. ಈ ಕುರಿತು ಮೂರು ದಿನಗಳಲ್ಲಿ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ದಾಖಲೆಗಳ ಪ್ರಕಾರ ಕಿಶೋರ್ ಪಶ್ಚಿಮ ಬಂಗಾಳದಲ್ಲಿ ವಿಳಾಸವನ್ನು 121, ಕಾಲಿಘಾಟ್ ರಸ್ತೆ ಎಂದು ನಮೂದಿಸಲಾಗಿದೆ. ಇದು ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಬಾನಿಪುರ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಪ್ರಧಾನ ಕಚೇರಿಯ ವಿಳಾಸ ಅವರ ಮತಗಟ್ಟೆಯನ್ನು ಬಿ. ರಾಣಿಶಂಕರಿ ಲೇನ್‌ನಲ್ಲಿರುವ ಸೇಂಟ್ ಹೆಲೆನ್ ಶಾಲೆ ಎಂದು ಉಲ್ಲೇಖಿಸಲಾಗಿದೆ. 2021ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಿಶೋರ್ ಟಿಎಂಸಿಯ ರಾಜಕೀಯ ಸಲಹೆಗಾರರಾಗಿದ್ದರು.

ವಿವಾದದ ಬಗ್ಗೆ ಪ್ರಶಾಂತ್ ಕಿಶೋರ್‌ ಪ್ರತಿಕ್ರಿಯೆ:



ಇನ್ನೊಂದು ದಾಖಲೆಯಲ್ಲಿ ಕಿಶೋರ್ ಬಿಹಾರದ ರೋಹ್ತಾಸ್ ಜಿಲ್ಲೆಯ ಸಸಾರಾಮ್ ಸಂಸದೀಯ ಕ್ಷೇತ್ರದ ಕಾರ್ಗಹರ್ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಸ್ವಂತ ಊರು ಎಂದು ನಮೂದಿಸಿದ್ದು, ಇದು ಅವರ ಮತಗಟ್ಟೆ ಕೋನಾರ್‌ನ ಮಧ್ಯ ವಿದ್ಯಾಲಯದಲ್ಲಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 17 ಅನ್ನು ಉಲ್ಲೇಖಿಸಿ ನೋಟಿಸ್‌ ನೀಡಿರುವ ಚುನಾವಣಾ ಆಯೋಗವು ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳುವುದು ಕಾನೂನು ಬಾಹಿರ ಎಂದು ಹೇಳುತ್ತದೆ. ಕಾನೂನು ಪ್ರಕಾರ ನಿವಾಸ ಬದಲಾಯಿಸುವಾಗ ವ್ಯಕ್ತಿಯು ಫಾರ್ಮ್ 8 ಮೂಲಕ ಹೊಸ ಕ್ಷೇತ್ರದಲ್ಲಿ ಸೇರ್ಪಡೆಗಾಗಿ ಅರ್ಜಿ ಸಲ್ಲಿಸಬೇಕು. ಹಿಂದಿನ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಅಳಿಸಲು ಘೋಷಿಸಬೇಕು ಎಂದು ಚುನಾವಣಾ ಅಧಿಕಾರಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಾನ್ ಸುರಾಜ್ ಪಕ್ಷದ ವಕ್ತಾರ ಕುಮಾರ್ ಸೌರಭ್ ಸಿಂಗ್, ಇದು ಚುನಾವಣಾ ಆಯೋಗದ ಕಡೆಯಿಂದ ಆಗಿರುವ ಲೋಪ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುವಾಗ ಪ್ರಶಾಂತ್ ಕಿಶೋರ್ ಅವರಂತಹ ಪ್ರಸಿದ್ಧ ವ್ಯಕ್ತಿಯ ಹೆಸರು ಅವರ ಗಮನಕ್ಕೆ ಹೇಗೆ ಬಂದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಶಾಂತ್ ಕಿಶೋರ್ ಒಬ್ಬ ವಿದ್ಯಾವಂತ ವ್ಯಕ್ತಿ. ಅವರು ತಮ್ಮ ಜವಾಬ್ದಾರಿಗಳನ್ನು ಅರಿತಿದ್ದಾರೆ. ನಮ್ಮ ಕಡೆಯಿಂದ ತಪ್ಪು ನಡೆದಿದೆ ಎಂದು ಚುನಾವಣಾ ಆಯೋಗ ಭಾವಿಸಿದರೆ ನಮ್ಮನ್ನು ಸಂಪರ್ಕಿಸಲಿ. ನಮ್ಮ ಕಾನೂನು ತಂಡವು ಪ್ರತಿಕ್ರಿಯಿಸುತ್ತದೆ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿ(ಯು) ವಕ್ತಾರ ನೀರಜ್ ಕುಮಾರ್, ಪಶ್ಚಿಮ ಬಂಗಾಳದಲ್ಲಿ ಕಿಶೋರ್ ಯಾಕೆ ನೋಂದಾಯಿಸಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಬಿಹಾರದಿಂದ ಬಂದವರು ಮತ್ತು ದೆಹಲಿಯಲ್ಲಿ ಕಚೇರಿ ಹೊಂದಿರುವವರು ಬಂಗಾಳದಲ್ಲಿ ಮತದಾರರಾಗಲು ಆಯ್ಕೆ ಮಾಡಿಕೊಂಡಿರುವುದು ತಮಾಷೆಯಾಗಿದೆ. 2021ರಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಸಹಾಯ ಮಾಡಿದ ಅನಂತರ ರಾಜ್ಯಸಭಾ ಸ್ಥಾನವನ್ನು ಪಡೆಯುವ ಆಶಯ ಅವರದ್ದಾಗಿತ್ತೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕ ನೀರಜ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, ಇದು ಘೋರ ಅಪರಾಧ. ಈ ಬಗ್ಗೆ ಚುನಾವಣಾ ಆಯೋಗದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Bihar Elections 2025: ಎಲ್ಲ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಕ್ಫ್ ಕಾಯ್ದೆಗೆ ತಡೆ...; ಮಹಾಘಟಬಂಧನ್ ಪ್ರಣಾಳಿಕೆಯಲ್ಲಿ ಏನೇನಿದೆ?

ಆರ್‌ಜೆಡಿ ನಾಯಕ ಮೃತ್ಯುಂಜಯ್ ತಿವಾರಿ, ಈ ವಿವಾದವು ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ನ್ಯೂನತೆಗಳನ್ನು ಬಹಿರಂಗಪಡಿಸಿದೆ ಎಂದು ಹೇಳಿದರು. ಇದು ಎಸ್‌ಐಆರ್‌ನ ಪ್ರಹಸನದಂತೆ ಕಾಣುತ್ತಿದೆ. ಅನೇಕ ಎನ್‌ಡಿಎ ನಾಯಕರು ಬಹು ಮತದಾರರ ನೋಂದಣಿಗಳನ್ನು ಹೊಂದಿರುವುದು ಕಂಡುಬಂದಿದೆ. ಕಿಶೋರ್ ಬಿಜೆಪಿಗಾಗಿ ರಹಸ್ಯವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಸಂದೇಹವಿದೆ ಎಂದು ಆರೋಪಿಸಿದರು.

ವಿದ್ಯಾ ಇರ್ವತ್ತೂರು

View all posts by this author