ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Amendment Bill: ಯಾವುದೇ ಮಸೀದಿ ಟಚ್‌ ಮಾಡಲ್ಲ... ವಕ್ಫ್‌ ಮಸೂದೆ ಬಗ್ಗೆ ರವಿ ಶಂಕರ್‌ ಪ್ರಸಾದ್‌ ಸ್ಪಷ್ಟನೆ

Ravi Shankar Prasad:ಭಾರೀ ವಿವಾದಗಳ ನಡುವೆಯೇ ವಕ್ಫ್‌ ಮಸೂದೆ ಸಂಸತ್‌ನಲ್ಲಿ ನಿನ್ನೆ ಅಂಗೀಕಾರಗೊಂಡಿದೆ. ಇದರ ಬೆನ್ನಲ್ಲೇ ಪ್ರತಿಪಕ್ಷಗಳು ಇದನ್ನು ಮುಸ್ಲಿಂ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ಈ ಬಗ್ಗೆ ಮಾಜಿ ಕೇಂದ್ರ ಸಚಿವ ರವಿ ಶಂಕರ್‌ ಪ್ರಸಾದ್‌ ಸ್ಪಷ್ಟನೆ ಕೊಟ್ಟಿದ್ದು, ಈ ಮಸೂದಯಿಂದ ದೇಶದ ಯಾವುದೇ ಮಸೀದಿಗೆ ಹಾನಿಯಾಗಲ್ಲ ಎಂದಿದ್ದಾರೆ.

ಯಾವುದೇ ಮಸೀದಿ ಟಚ್‌ ಮಾಡಲ್ಲ...ರವಿ ಶಂಕರ್‌ ಪ್ರಸಾದ್‌ ಸ್ಪಷ್ಟನೆ

Profile Rakshita Karkera Apr 5, 2025 12:44 PM

ನವದೆಹಲಿ: ಸುದೀರ್ಘ ಚರ್ಚೆಗಳ ನಂತರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ವಕ್ಫ್ (ತಿದ್ದುಪಡಿ) ಮಸೂದೆಯ(Waqf Amendment Bill) ಬಗ್ಗೆ ಸಂಸದ ರವಿ ಶಂಕರ ಪ್ರಸಾದ್‌(Ravi Shankar Prasad) ಸ್ಪಷ್ಟನೆ ಕೊಟ್ಟಿದ್ದಾರೆ. ವಕ್ಫ್‌ ಮಸೂದೆ ಯಾವುದೇ ಮಸೀದಿ, ಪೂಜಾ ಸ್ಥಳ ಅಥವಾ 'ಕಬ್ರಸ್ತಾನ್' (ಸ್ಮಶಾನ) ಅನ್ನು ಮುಟ್ಟುವುದಿಲ್ಲ. ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.

ವಿಚಾರ ಬಹಳ ಸರಳವಾಗಿದೆ. ಈ ವಕ್ಫ್‌ ಮಸೂದೆ ತಿದ್ದುಪಡಿ ಮಾಡಿರುವುದು ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವ ಉದ್ದೇಶದಿಂದಲ್ಲ. ಈ ಮಸೂದೆ ಮಹಿಳೆಯರು, ವಿಧವೆಯರು ಮತ್ತು ಮುಸ್ಲಿಂ ಸಮುದಾಯದಲ್ಲಿ ಅವಕಾಶ ವಂಚಿತರಿಗೆ ಸಹಾಯ ಮಾಡುತ್ತದೆ ಎಂದರು. ಇನ್ನು ತಾವು ಹುಟ್ಟಿದ ನಗರವಾದ ಪಾಟ್ನಾದ ಡಾಕ್ ಬಂಗಲೋ ಪ್ರದೇಶದ ಬಳಿಯ ಪ್ರದೇಶಗಳಲ್ಲಿ ಸಾಕಷ್ಟು ವಕ್ಫ್ ಭೂಮಿ ಇದೆ. ಆದರೆ ಅಲ್ಲಿ ಪಂಚತಾರಾ ಹೋಟೆಲ್‌ಗಳು ಮತ್ತು ಶೋ ರೂಂಗಳು ತಲೆ ಎತ್ತಿವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಕ್ಫ್ ಆಸ್ತಿಗಳನ್ನು ಹೊಂದಿದೆ. ಆದರೆ ಅಲ್ಲಿ ಎಷ್ಟು ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ತರಬೇತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Waqf Amendment Bill: ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧವೇಕೆ? ವಕ್ಫ್ ಹೊಂದಿರುವ ಭೂಮಿ ಎಷ್ಟು ಗೊತ್ತೇ?

ವ್ಯವಸ್ಥಾಪಕರು ಆಸ್ತಿಯನ್ನು ದಾನ ಮಾಡಿದ ವ್ಯಕ್ತಿಯ ಉದ್ದೇಶದ ರೀತಿಯಲ್ಲಿ ಬಳಸುತ್ತಿದ್ದಾರೆಯೇ ಅಥವಾ ಅವರು ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆಯೇ? ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಇಡೀ ದೇಶದ ಜನರು ಈ ಮಸೂದೆಯನ್ನು ಒಪ್ಪಿಕೊಂಡಿದ್ದಾರೆ. ಇಷ್ಟೊಂದು ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿದು ಜನ ಬೇಸರಗೊಂಡಿದ್ದಾರೆ. ಆದರೆ ಕೆಲವು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಇದರ ಬಗ್ಗೆ ತಪ್ಪು ಮಾಹಿತಿ ಪಸರಿಸಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದರು.

ಇನ್ನು ಮುಂದೆ ಎಲ್ಲವೂ ಪಾರದರ್ಶಕವಾಗಿಯೇ ನಡೆಯುತ್ತದೆ. ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಡಿಜಿಟಲೀಕರಣ ನಡೆಯಲಿದೆ, ಯಾವ ಆಸ್ತಿ ಎಲ್ಲಿದೆ, ಮುತ್ತವಲಿ ಯಾರು, 'ವಕೀಫ್' (ಆಸ್ತಿಯನ್ನು ಅರ್ಪಿಸುವ ವ್ಯಕ್ತಿ) ಉದ್ದೇಶದಂತೆಯೇ ಆಸ್ತಿ ಬಳಕೆಯಾಗುತ್ತಿವೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ. ಒಟ್ಟಿನಲ್ಲಿ ಎಲ್ಲಾ ವಿಚಾರಗಳು ಯಾವುದೇ ಮುಚ್ಚುಮರೆ ಇಲ್ಲದೆ ನಡೆಯುತ್ತದೆ.