ನವದೆಹಲಿ, ಅ. 28: "ದೇಶದ ಶ್ರೇಷ್ಠ ಸಂವಿಧಾನ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಇವಿಎಂ ಇರಲಿ, ಬ್ಯಾಲೆಟ್ ಪೇಪರೇ ಬರಲಿ ಗೆಲುವು ಮಾತ್ರ ನಮ್ದೇʼʼ-ಕಾಂಗ್ರೆಸ್ನ ವೋಟ್ ಚೋರಿ, SIR ಆರೋಪದ ನಡುವೆಯೂ ದೇಶದೆಲ್ಲೆಡೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದರ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ (Pralhad Joshi) ಹೀಗೆ ಘೋಷ ವಾಕ್ಯ ಮೊಳಗಿಸಿದ್ದಾರೆ. ದೇಶದ ಎಲ್ಲೇ ಆಗಲಿ ಚುನಾವಣಾ ವ್ಯವಸ್ಥೆಯಲ್ಲಿ ಮತದಾನಕ್ಕೆ ಇವಿಎಂ ಬಳಸಲಿ ಅಥವಾ ಬ್ಯಾಲೆಟ್ ಪೇಪರ್ ಅನ್ನೇ ಬಳಸಲಿ ಫಲಿತಾಂಶ ಮಾತ್ರ ಒಂದೇ ಆಗಿರುತ್ತದೆ. ಅದು ಬಿಜೆಪಿ ನೇತೃತ್ವದ NDA ಗೆಲುವು! ಎಂದು ವಿರೋಧಿಗಳಿಗೆ ಚಾಟಿ ಬೀಸಿದ್ದಾರೆ.
ʼʼಈ ಬಾರಿ ದೇಶಾದ್ಯಂತ ನಡೆದ 28 ಎಂಎಲ್ಸಿ ಕ್ಷೇತ್ರಗಳ ಪೈಕಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗದೆ ಕಾಂಗ್ರೆಸ್ ಸಂಪೂರ್ಣ ಧೂಳಿಪಟವಾಗಿದೆ. ಇದಕ್ಕೆ ಆ ಪಕ್ಷದ ನೇತಾರರ ನಡವಳಿಕೆಗಳೇ ಕಾರಣʼʼ ಎಂದು ಟೀಕಿಸಿದ್ದಾರೆ.
ಪ್ರಲ್ಹಾದ ಜೋಶಿ ಅವರ ಎಕ್ಸ್ ಪೋಸ್ಟ್:
ʼʼಕಾಂಗ್ರೆಸ್ ಸದಾ 'ವೋಟ್ ಚೋರಿ' ಎಂಬ ಸುಳ್ಳು ಕಥೆ ಸೃಷ್ಟಿಸುತ್ತ ತನ್ನ ಅವನತಿ ತಾನೇ ತಂದುಕೊಳ್ಳುತ್ತಿದೆ. ಸಾಂವಿಧಾನಿಕ ಹುದ್ದೆಗಳ ಮೇಲೆ ಅಪಂಬಿಕೆ, ಅಗೌರವ ತೋರಿದ್ದಲ್ದದೇ, ಚುನಾವಣಾ ಆಯೋಗವನ್ನೇ ದೂರುತ್ತಿತ್ತು. ಶ್ರೇಷ್ಠ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಲ್ಲಗಳೆಯುವ ರೀತಿ ವಿರೋಧಾಭಾಸ ವ್ಯಕ್ತಪಡಿಸುತ್ತಿತ್ತು. ಇದಕ್ಕೆಲ್ಲ ಈಗ ಸ್ಪಷ್ಟ ಉತ್ತರ ಸಿಕ್ಕಿದೆʼʼ ಎಂದು ಹೇಳಿದ್ದಾರೆ.
ʼʼಡಾ.ಅಂಬೇಡ್ಕರ್ ಅವರ ಸಂವಿಧಾನವನ್ನೇ ಪ್ರಶ್ನಿಸುವ ರೀತಿ ವರ್ತಿಸುತ್ತಿದ್ದ ಕಾಂಗ್ರೆಸ್ ಇದೀಗ ದೇಶದೆಲ್ಲೆಡೆ 28 ಕ್ಷೇತ್ರಗಳಲ್ಲಿ ಒಂದೇ ಒಂದು ಸೀಟನ್ನೂ ಗೆಲ್ಲಲು ಶಕ್ತವಾಗಿದೆ ಸೋಲಿಗೆ ಶರಣಾಗಿದೆʼʼ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಆರ್ಎಸ್ಎಸ್ ಬೃಹತ್ ಪಥ ಸಂಚಲನ; 10 ಸಾವಿರ ಸ್ವಯಂಸೇವಕರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ಭಾಗಿ
ಆಡಳಿತಾರೂಢ ಕರ್ನಾಟಕದಲ್ಲೂ ನೆಲಕಚ್ಚಿದೆ
ʼʼಸದ್ಯ ಆಡಳಿತದಲ್ಲಿರುವ ಕರ್ನಾಟಕದಲ್ಲೂ ಅಷ್ಟೇ ಕಥೆ. ಹಾಲಿ ಸದಸ್ಯರಿದ್ದ ಸ್ಥಾನವನ್ನೇ ಕಳೆದುಕೊಂಡಿದೆ. ಕಾಂಗ್ರೆಸ್ ಪದೇ ಪದೆ ಇವಿಎಂ ಬಗ್ಗೆ ಅಪಸ್ವರ ಎತ್ತುತ್ತಿತ್ತು. ಕೊನೆಗೆ ಆ ಪಕ್ಷದ ನಾಯಕರ ಒತ್ತಾಸೆಯಂತೆ ಬ್ಯಾಲೆಟ್ ಪೇಪರ್ ಅನ್ನೇ ಬಳಸಿ ಚುನಾವಣೆ ನಡೆಸಿದರೂ ಫಲಿತಾಂಶ ಮಾತ್ರ ಬದಲಾಗಿಲ್ಲ. ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಬಿಜೆಪಿ ನಿರಾಯಾಸವಾಗಿ ಭರ್ಜರಿ ಜಯ ಸಾಧಿಸಿದೆʼʼ ಎಂದು ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ ಅನ್ನು ಕುಟುಕಿದ್ದಾರೆ.
ದೂಷಿಸುವುದೇ ಕಾಂಗ್ರೆಸ್ ಚಟ
ʼʼಚುನಾವಣಾ ಫಲಿತಾಂಶ ಬಂದಾಗಲೆಲ್ಲ ವ್ಯವಸ್ಥೆಯನ್ನು ಪದೇ ಪದೆ ದೂಷಿಸುವುದು ಕಾಂಗ್ರೆಸ್ಗೆ ಒಂದು ಚಟವಾಗಿಬಿಟ್ಟಿದೆ. ಈಗಲೂ ನಾಯಕರು ಅದನ್ನೇ ಮಾಡುತ್ತಿದ್ದಾರೆ. ಆದರೆ ಜನಾದೇಶ ಮಾತ್ರ ಸ್ಪಷ್ಟವಾಗಿದೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಗಾಂಧಿ ಸಂಪ್ರೀತಗೊಳಿಸಲು, ಸಿಎಂ ಕುರ್ಚಿ ಉಳಿಸಿಕೊಳ್ಳಲು ಧರಣಿ ಪ್ರಹಸನ: ಪ್ರಲ್ಹಾದ್ ಜೋಶಿ ವಾಗ್ದಾಳಿ
ವೃಥಾ ಆರೋಪ ಬಿಟ್ಟು ಆತ್ಮಾವಲೋಕನ ಮಾಡಿಕೊಳ್ಳಲಿ
ʼʼವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಟೀಂ ಇನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ವೃಥಾ ಆರೋಪ ಮಾಡುವುದನ್ನು ಬಿಟ್ಟು, ತಮ್ಮ ಸಾಲು ಸಾಲು ಸೋಲುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿʼʼ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿವಿಮಾತು ಹೇಳಿದ್ದಾರೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.