ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಕೇಂದ್ರ ಬೆಂಬಲ ನೀಡಿದರೆ ಕರ್ನಾಟಕ ಬಲಿಷ್ಠ ರಾಜ್ಯವಾಗಲಿದೆ- ಡಿಕೆ ಶಿವಕುಮಾರ್

DK Shivakumar: ಕೇಂದ್ರ ಸರ್ಕಾರದಿಂದ ಸೀಮಿತ ಬೆಂಬಲ ದೊರಕಿದ್ದರೂ ಸಹ, ಕರ್ನಾಟಕವು ಕೈಗಾರಿಕಾ ಜಾಗತೀಕರಣ, ನವೋದ್ಯಮದ ಹೂಡಿಕೆಗಳು ಮತ್ತು ಆರ್ಥಿಕ ಬೆಳವಣಿಗೆಯ ಪ್ರಮುಖ ತಾಣವಾಗಿ ಉಳಿದಿದೆ ಎಂದು ಟೈಮ್ಸ್ ಗ್ರೂಪ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ರಾಜ್ಯದ ಅಭಿವೃದ್ಧಿಗೆ ಕೈ ಜೋಡಿಸಿ; ಕೇಂದ್ರದ ಬಳಿ ಸಹಾಯಹಸ್ತ ಕೇಳಿದ ಡಿಕೆಶಿ

ಡಿಕೆ ಶಿವಕುಮಾರ್

Profile Sushmitha Jain Apr 1, 2025 11:25 AM

ಬೆಂಗಳೂರು: ಕೇಂದ್ರ ಸರ್ಕಾರ(Central Government)ದಿಂದ ಸೀಮಿತ ಬೆಂಬಲ ದೊರಕಿದ್ದರೂ ಸಹ, ಕರ್ನಾಟಕವು ಕೈಗಾರಿಕಾ ಜಾಗತೀಕರಣ, ನವೋದ್ಯಮದ ಹೂಡಿಕೆಗಳು ಮತ್ತು ಆರ್ಥಿಕ ಬೆಳವಣಿಗೆಯ ಪ್ರಮುಖ ತಾಣವಾಗಿ ಉಳಿದಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಹೇಳಿದ್ದಾರೆ. ಟೈಮ್ಸ್ ಗ್ರೂಪ್(Times Group) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಇನ್ನೂ ಹೆಚ್ಚಿನ ಬೆಂಬಲ ನೀಡುವಂತೆ ಅವರು ಕೇಂದ್ರ ಸರ್ಕಾರಕ್ಕೆ ಕರೆ ನೀಡಿದ್ದಾರೆ. “ಭಾರತ ಮೊದಲು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು, ದೇಶದ ಬೆಳವಣಿಗೆಯಲ್ಲಿ ಕರ್ನಾಟಕವು ಪ್ರಮುಖ ಆಧಾರಸ್ಥಂಬವಾಗಿರುವುದನ್ನು ನಾವು ಮುಂದುವರೆಸುತ್ತೇವೆ. ಹೊಸ ಹೂಡಿಕೆಗಳನ್ನು ಸ್ವಾಗತಿಸಿ, ನಾವಿನ್ಯತೆ ಮತ್ತು ಪ್ರಗತಿಯ ವಾತಾವರಣವನ್ನು ಬೆಳಸುತ್ತೇವೆ” ಎಂದು ಅವರು ಹೇಳಿದರು.

ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಕರ್ನಾಟಕ ಪ್ರಮುಖ ಕೊಡುಗೆ ನೀಡುವಂತೆ ಮಾಡಲು ನಿಮ್ಮ ಯೋಜನೆಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಜ್ಞಾನ ಮತ್ತು ನಾವೀನ್ಯತೆಯನ್ನು ಪ್ರತಿನಿಧಿಸುವ ಸ್ಥಳದಿಂದ ಬಂದಿದ್ದೇನೆ. ಕರ್ನಾಟಕ ದಶಕಗಳಿಂದ ಜ್ಞಾನ ಕೇಂದ್ರವಾಗಿದೆ ಎಂದರು.

“ಸುಮಾರು 20 ವರ್ಷಗಳ ಹಿಂದೆ, ಆಗಿನ ಭಾರತದ ಪ್ರಧಾನಿ ಒಂದು ಪ್ರಮುಖ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಬೆಂಗಳೂರಿಗೆ ಭೇಟಿ ನೀಡಿದಾಗ, ಅವರು ಒಂದು ಪ್ರಮುಖ ವಿಚಾರ ಗಮನಿಸಿದರು. ಈ ಹಿಂದೆ, ಭಾರತಕ್ಕೆ ಭೇಟಿ ನೀಡುವ ವಿಶ್ವ ನಾಯಕರು ಚೆನ್ನೈ, ಮುಂಬೈ ಅಥವಾ ಕೋಲ್ಕತ್ತಾದಂತಹ ನಗರಗಳನ್ನು ಆಯ್ಕೆ ಮಾಡುತ್ತಿದ್ದರು. ಆದರೆ, ಕೇವಲ ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ, ಜಪಾನ್, ಪೋಲೆಂಡ್ ಮತ್ತು ಯುಕೆ ಪ್ರಧಾನ ಮಂತ್ರಿಗಳು ದೆಹಲಿಗೆ ಹೋಗುವ ಮೊದಲು ಬೆಂಗಳೂರಿಗೆ ಭೇಟಿ ನೀಡಲು ಪ್ರಾರಂಭಿಸಿದರು” ಎಂದು ಶಿವಕುಮಾರ್‌ ಉತ್ತರಿಸಿದರು.

ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು:

ಸಂಚಾರ ಸಮಸ್ಯೆಗಳನ್ನು ಪರಿಹರಿಸಲು, ನಾವು ಫ್ಲೈಓವರ್‌ಗಳು, ಮೆಟ್ರೋ ವಿಸ್ತರಣೆ ಮತ್ತು ಭೂಗತ ಸುರಂಗ ಮಾರ್ಗ ನಿರ್ಮಾಣದಂತ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಈ ವರ್ಷ, ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ, ನಾವು ಸುಮಾರು ₹4 ಲಕ್ಷ ಕೋಟಿಯ ಬಜೆಟ್‌ ಮಂಡಿಸಿದ್ದು, ಅದರಲ್ಲಿ ₹1 ಲಕ್ಷ ಕೋಟಿಯನ್ನು ಸಾರ್ವಜನಿಕ ಸಾರಿಗೆ, ಮೆಟ್ರೋ ವಿಸ್ತರಣೆ ಮತ್ತು ಭೂಗತ ಸುರಂಗ ಮಾರ್ಗ ನಿರ್ಮಾಣದಂತಹ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಓದಿ: DK Shivakumar: ಕುಮಾರಸ್ವಾಮಿಗೆ ಹಾಲು ಒಕ್ಕೂಟ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ ಎಂದ ಡಿ.ಕೆ.ಶಿವಕುಮಾರ್

“ದೆಹಲಿ ಮತ್ತು ಇತರ ಮಹಾನಗರಗಳಿಗಿಂತ ಭಿನ್ನವಾಗಿ, ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಯೋಜಿತ ನಗರ ವಿಸ್ತರಣೆ ಯೋಜನೆ ಕಾಣಲು ಸಾಧ್ಯವಿಲ್ಲ. ಆದರೆ 10 ಕಿಮೀ ವ್ಯಾಪ್ತಿಯಲ್ಲಿ, ನೀವು ಫೈವ್‌ ಸ್ಟಾರ್‌ ಹೋಟೆಲ್‌ಗಳು ಮತ್ತು ಮೊದಲ ದರ್ಜೆಯ ವಾಣಿಜ್ಯ ಸಂಸ್ಥೆಗಳು ಸೇರಿದಂತೆ ವಿಶ್ವದರ್ಜೆಯ ಮೂಲಸೌಕರ್ಯವನ್ನು ಕಾಣಬಹುದು” ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿಗೆ ಈಗ ದೊರೆತಿರುವ ಉನ್ನತ ನಗರದ ಸ್ಥಾನಮಾನವು, ಕೇವಲ ಇಲ್ಲಿನ ಹವಾಮಾನದಿಂದ ದೊರೆತದ್ದಲ್ಲ. ಇಲ್ಲಿನ ಅತ್ಯಂತ ಬಲವಾದ ಶೈಕ್ಷಣಿಕ ಮತ್ತು ತಾಂತ್ರಿಕ ಪರಿಸರ ವ್ಯವಸ್ಥೆ ವಿಶ್ವದಲ್ಲಿಯೇ ಜನಪ್ರಿಯವಾಗಿದೆ. ಇಂದು, ರಾಜ್ಯವು 70ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಮತ್ತು 300+ ಎಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿದೆ, ಸುಮಾರು 100 ಸಂಸ್ಥೆಗಳು ಬೆಂಗಳೂರಿನಲ್ಲಿಯೇ ಇವೆ. ನಾವು ದಶಕಗಳ ಹಿಂದೆಯೇ ನವೋದ್ಯಮ ಮತ್ತು ಐಟಿ ನೀತಿಗಳನ್ನು ಜಾರಿಗೆ ತಂದಿದ್ದು, ಕರ್ನಾಟಕ ಜಾಗತಿಕ ತಂತ್ರಜ್ಞಾನ ಕೇಂದ್ರವಾಗಿ ಗುರುತಿಸಿಕೊಳ್ಳುವಂತಾಗಲು ಕಾರಣವಾಯಿತು ಎಂದರು.

ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಅವರು, ವಿವಿಧ ರಾಜಕೀಯ ಸವಾಲುಗಳ ಹೊರತಾಗಿಯೂ, ಕರ್ನಾಟಕದ ಜನತೆ ತಮಗೆ ಬೆಂಬಲ ನೀಡಿದ್ದು, ರಾಜ್ಯವನ್ನು ಬಲಪಡಿಸುವ ನಮ್ಮ ಗುರಿಯನ್ನು ಸಾಧಿಸುವಲ್ಲಿ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.