ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi visit Manipur: ಸೆಪ್ಟೆಂಬರ್‌ನಲ್ಲಿ ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ

ಮೋದಿ, ಹಿಂಸಾಚಾರ ಪೀಡಿತ ರಾಜ್ಯದ ಇಂಫಾಲ್ ಮತ್ತು ಚುರಚಂದ್‌ಪುರ ಜಿಲ್ಲೆಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಅಲ್ಲಿ ಜನಾಂಗೀಯ ಸಂಘರ್ಷದಿಂದಾಗಿ ತಮ್ಮ ಮನೆಗಳಿಂದ ಸ್ಥಳಾಂತರಗೊಂಡ ಜನರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಮೈಟೈ ಮತ್ತು ಕುಕಿ ಪ್ರಾಬಲ್ಯವಿರುವ ಎರಡೂ ಪ್ರದೇಶಗಳಿಗೆ ಪ್ರವಾಸ ಮಾಡುವ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ.

28 ತಿಂಗಳ ಬಳಿಕ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ!

-

Abhilash BC Abhilash BC Aug 31, 2025 1:02 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಸೆಪ್ಟೆಂಬರ್ ಎರಡನೇ ವಾರದಲ್ಲಿ ಮಣಿಪುರಕ್ಕೆ((PM Modi visit Manipur) ) ಭೇಟಿ ನೀಡುವ ಸಾಧ್ಯತೆಯಿದೆ. ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ(Manipur violence) ಭುಗಿಲೆದ್ದ ನಂತರ ಇದೇ ಮೊದಲ ಬಾರಿಗೆ ಭೇಟಿ ನೀಡಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮೇ 2023 ರಲ್ಲಿ ಅಶಾಂತಿ ಭುಗಿಲೆದ್ದ ನಂತರ ಪ್ರಧಾನಿಯವರು ಮಣಿಪುರಕ್ಕೆ ಭೇಟಿ ನೀಡಿಲ್ಲವಾದ್ದರಿಂದ, ಆ ಭೇಟಿಯು ಪ್ರಮುಖ ರಾಜಕೀಯ ಮತ್ತು ಸಾಂಕೇತಿಕ ಮಹತ್ವವನ್ನು ಹೊಂದಿದೆ.

ಮೋದಿ, ಹಿಂಸಾಚಾರ ಪೀಡಿತ ರಾಜ್ಯದ ಇಂಫಾಲ್ ಮತ್ತು ಚುರಚಂದ್‌ಪುರ ಜಿಲ್ಲೆಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಅಲ್ಲಿ ಜನಾಂಗೀಯ ಸಂಘರ್ಷದಿಂದಾಗಿ ತಮ್ಮ ಮನೆಗಳಿಂದ ಸ್ಥಳಾಂತರಗೊಂಡ ಜನರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಅವರ ಭೇಟಿಯ ಸಮಯದಲ್ಲಿ, ಅವರು ಈ ಪ್ರದೇಶಕ್ಕೆ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಘೋಷಿಸುವ ಮತ್ತು ಕೆಲವು ಯೋಜನೆಗಳನ್ನು ಉದ್ಘಾಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮಣಿಪುರ ಪ್ರವಾಸ ದೃಢಪಟ್ಟರೆ, ಪ್ರಧಾನಿಯವರ ಭೇಟಿ ಸುಮಾರು ನಾಲ್ಕು ಗಂಟೆಗಳ ಕಾಲ ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಅವರು ಮೈಟೈ ಮತ್ತು ಕುಕಿ ಪ್ರಾಬಲ್ಯವಿರುವ ಎರಡೂ ಪ್ರದೇಶಗಳಿಗೆ ಪ್ರವಾಸ ಮಾಡುವ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ. ಫೆಬ್ರುವರಿ 13ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಇನ್ನೊಂದೆಡೆ ಪ್ರಧಾನಿ ಭೇಟಿ ನೀಡದೇ ಇರುವುದನ್ನು ವಿಪಕ್ಷಗಳು ನಿರಂತರವಾಗಿ ಟೀಕೆ ಮಾಡುತ್ತಲೇ ಬಂದಿದೆ. ಇದೀಗ ಮೋದಿ ಮಣಿಪುರಕ್ಕೆ ಭೇಟಿ ನೀಡಲು ನಿರ್ಧರಿಸಿದಂತಿದೆ.

ಇದನ್ನೂ ಓದಿ Trump dropped India visit : ಮೋದಿ ಜತೆಗಿನ ಉದ್ವಿಗ್ನತೆ: ಭಾರತ ಭೇಟಿ ಕೈಬಿಟ್ಟ ಟ್ರಂಪ್‌!