ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್ ಭರ್ಜರಿ ಗೆಲುವು ಸಾಧಿಸಿದ್ದು ಹೇಗೆ ಗೊತ್ತೇ? ಡಿಎಂಕೆ ಹೇಳಿದ್ದೇನು?

ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಮತ್ತು ಅವರ ಪಕ್ಷ ತಮಿಳಗ ವೆಟ್ರಿ ಕಳಗಂನ ಅಭೂತಪೂರ್ವ ಗೆಲುವಿಗೆ ಕಾರಣವಾಗಿದ್ದು ಎರಡು ಅಂಶಗಳು. ಅವುಗಳೆಂದರೆ ಇನ್‌ಸ್ಟಾಗ್ರಾಮ್ ಮತ್ತು ಮಕ್ಕಳು. ಇದನ್ನು ಹೇಳಿರುವುದು ಮಾಜಿ ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂಕೆ ಸ್ಟಾಲಿನ್.

ಸಂಗ್ರಹ ಚಿತ್ರ

ಚೆನ್ನೈ: ತಮಿಳುನಾಡು (tamil nadu) ವಿಧಾನಸಭಾ ಚುನಾವಣೆಯಲ್ಲಿ (assembly election) ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರಣವಾಗಿದ್ದು ಸಾಮಾಜಿಕ ಮಾಧ್ಯಮ ಮತ್ತು ಮಕ್ಕಳು ಎಂದು ಮಾಜಿ ಮುಖ್ಯಮಂತ್ರಿ, ಡಿಎಂಕೆ ನಾಯಕ (Former Chief Minister and DMK leader) ಎಂಕೆ ಸ್ಟಾಲಿನ್ (MK Stalin) ಹೇಳಿದ್ದಾರೆ. ಈ ಕುರಿತು ಸೋಮವಾರ ಮಾತನಾಡಿದ ಅವರು, ನಟ ವಿಜಯ್ (actor vijay) ಮತ್ತು ಅವರ ಪಕ್ಷ ಟಿವಿಕೆಯು ಮತದಾರರ ಮೇಲೆ ಹೇಗೆ ಪ್ರಭಾವ ಬೀರಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಡಿಎಂಕೆ ವಿಫಲವಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಡಿಎಂಕೆ ಪಕ್ಷ ಕೂಡ ಈ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುತ್ತಿದೆ. ಅದರ ನೀತಿಗಳು ಇನ್ನೂ ತಮಿಳುನಾಡಿನಲ್ಲಿ ಆಡಳಿತವನ್ನು ರೂಪಿಸುತ್ತವೆ. ಸಾಮಾಜಿಕ ಮಾಧ್ಯಮ, ಇನ್‌ಸ್ಟಾಗ್ರಾಮ್ ಮತ್ತು ಮಕ್ಕಳು ತಮ್ಮ ತಾಯಂದಿರು, ಅಜ್ಜಿಯರು ಮತ್ತು ಹಿರಿಯರ ಮೇಲೆ ಪ್ರಭಾವ ಬೀರುವಂತೆ ಟಿವಿಕೆ ಪ್ರಚಾರ ಮಾಡಿತ್ತು. ಅವರು ಲೆಕ್ಕಾಚಾರದ ಪ್ರಕಾರ ಅದನ್ನು ಮಾಡಿದರು. ನಾವು ಅದನ್ನು ನೋಡಲು ವಿಫಲರಾಗಿದ್ದೇವೆ ಎಂದರು.

NEET UG Paper Leak: ಪರೀಕ್ಷೆಗೂ 10 ದಿನ ಮುನ್ನವೇ ಮಹಾರಾಷ್ಟ್ರದ 'ಎಂ ಸರ್' ಕೈ ಸೇರಿತ್ತೆ ನೀಟ್ ಪ್ರಶ್ನೆ ಪತ್ರಿಕೆ? ಸಿಬಿಐ ಶಂಕೆ

ಟಿವಿಕೆ ಈ ಬಾರಿ ಮಾಡಿರುವ ತಂತ್ರ ಮುಂದೆ ನಡೆಯುವುದಿಲ್ಲ.ಯಾಕೆಂದರೆ ಅದನ್ನು ಸೋಲಿಸಲು ಪಕ್ಷವು ಈಗಾಗಲೇ ತಂತ್ರಗಳನ್ನು ರೂಪಿಸುತ್ತಿದೆ. ಅಧಿಕಾರವನ್ನು ಕಳೆದುಕೊಂಡರೂ ಕೂಡ ಡಿಎಂಕೆ ರಾಜಕೀಯವಾಗಿ ಪ್ರಸ್ತುತವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಡಿಎಂಕೆ ಆಡಳಿತಾವಧಿಯಲ್ಲಿ ಅನೇಕ ಕಲ್ಯಾಣ ಯೋಜನೆಗಳನ್ನು ರೂಪಿಸಿತು. ಹೊಸ ಸರ್ಕಾರವು ಅದನ್ನು ಮುಂದುವರಿಸುತ್ತಿದೆ. ಪಕ್ಷದ ನೀತಿಗಳು ರಾಜ್ಯದಲ್ಲಿ ಇನ್ನೂ ಆಡಳಿತವನ್ನು ರೂಪಿಸುತ್ತಿವೆ ಎಂಬುದಕ್ಕೆ ಇದು ಪುರಾವೆಯಾಗಿದೆ ಎಂದ ಸ್ಟಾಲಿನ್, ನಾವು ಹಲವಾರು ಗೆಲುವು ಮತ್ತು ಸೋಲುಗಳನ್ನು ಕಂಡಿದ್ದೇವೆ. ಮತ್ತೆ ಎದ್ದು ಬರುವುದು ನಮಗೆ ಗೊತ್ತಿದೆ. ಚುನಾವಣಾ ಸೋಲಿನಿಂದ ನಾವು ಮುರಿದುಹೋಗಿಲ್ಲ ಎಂದು ತಿಳಿಸಿದರು.

ʼʼವಿಜಯ್ ನೇತೃತ್ವದ ಟಿವಿಕೆ ಸರ್ಕಾರ 6 ತಿಂಗಳು ಉಳಿಯುವುದಿಲ್ಲʼʼ: ಅಧಿಕಾರಕ್ಕೆ ಬಂದ ವಾರದೊಳಗೆ ಪತನದ ಭವಿಷ್ಯ ನುಡಿದ ಡಿಎಂಕೆ ನಾಯಕಿ

ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೆ ತಕ್ಷಣ ನಾವು ಸೋಲಿನ ಬಗ್ಗೆ ವಿಶ್ಲೇಷಣೆ ನಡೆಸಲು ಪ್ರಾರಂಭಿಸಿದೆವು ಎಂದು ಹೇಳಿದ ಅವರು, ಸಂಸತ್ತಿನ ಚುನಾವಣೆಯ ಬಳಿಕ ನಾವು ನಮ್ಮ ಚುನಾವಣಾ ಕೆಲಸವನ್ನು ತಕ್ಷಣ ಪ್ರಾರಂಭಿಸಿದ್ದೇವೆ. ಮುಂದೆ ಜಾಗರೂಕರಾಗಿರಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author