ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದ್ಯ ಮಾರಾಟದ ಪ್ರತಿಯೊಂದು ರೂಪಾಯಿ ಖಜಾನೆ ಸೇರಬೇಕು: ಸಿಎಂ ವಿಜಯ್ ಖಡಕ್ ವಾರ್ನಿಂಗ್

ಪಕ್ಷಕ್ಕೆ ಅನಧಿಕೃತವಾಗಿ ನಿಧಿ ಬರುವುದನ್ನು ತಪ್ಪಿಸಲು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕಠಿಣ ನಿಲುವನ್ನು ತೋರಿದ್ದಾರೆ. ಮದ್ಯ ಮಾರಾಟದ ಪ್ರತಿಯೊಂದು ರೂಪಾಯಿ ಖಜಾನೆ ಸೇರಬೇಕು ಎಂದು ಖಡಕ್ ಎಚ್ಚರಿಕೆ ನೀಡಿರುವ ಅವರು, ಅನಧಿಕೃತ ನಗದು ಸಂಗ್ರಹ ವ್ಯವಸ್ಥೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಆದೇಶಿಸಿದ್ದಾರೆ.

ಮುಖ್ಯಮಂತ್ರಿ ಜೋಸೆಫ್ ವಿಜಯ್ (ಸಂಗ್ರಹ ಚಿತ್ರ)

ಚೆನ್ನೈ: ಮದ್ಯ ಮಾರಾಟದ (Liquor sale) ಪ್ರತಿಯೊಂದು ರೂಪಾಯಿ ಕೂಡ ಸರ್ಕಾರದ ಖಜಾನೆ ಸೇರಬೇಕು. ಪಕ್ಷಗಳಿಗೆ ಅನಧಿಕೃತವಾಗಿ ನಿಧಿ ಸಂಗ್ರಹವಾಗುವುದನ್ನು ತಡೆಯಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (tamil nadu CM Vijay) ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಶುಕ್ರವಾರ ಸಚಿವ ಸಂಪುಟ ಸಭೆ ನಡೆಸಿದ ಅವರು, ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ( Tamil Nadu State Marketing Corporation) ನ ಹಣ ಸೋರಿಕೆ ಕುರಿತು ಮಾಹಿತಿ ಪಡೆದ ಅವರು ಅನಧಿಕೃತ ನಗದು ಸಂಗ್ರಹ ವ್ಯವಸ್ಥೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಜನರ ಹಣವನ್ನು ಖಜಾನೆಗೆ ಮರಳಿ ತರಬೇಕು ಎಂದು ಆದೇಶಿಸಿದ್ದಾರೆ.

ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ಗೆ ಸೇರಿರುವ ಹಣ ಸೋರಿಕೆ, ಪಕ್ಷಗಳಿಗೆ ಅನಧಿಕೃತ ನಿಧಿ ಸಂಗ್ರಹದ ಕುರಿತು ಕಠಿಣ ನಿಲುವು ಕೈಗೊಂಡಿರುವ ಅವರು, ಮದ್ಯ ಮಾರಾಟದಿಂದ ಬರುವ ಪ್ರತಿಯೊಂದು ರೂಪಾಯಿ ಕೂಡ ರಾಜ್ಯ ಖಜಾನೆಗೆ ತಲುಪಬೇಕು ಎಂದು ಆದೇಶಿಸಿದ್ದಾರೆ.

ಎಐಎಡಿಎಂಕೆಗೆ ಮತ್ತೆ ಶಾಕ್‌; 4 ಮಾಜಿ ಸಚಿವರು, 6 ಮಾಜಿ ಶಾಸಕರು ಟಿವಿಕೆಗೆ ಸೇರ್ಪಡೆ

ಎಷ್ಟು ಹಣ ಸೋರಿಕೆ?

ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ನ ಸುಮಾರು 102 ಕೋಟಿ ರೂ. ಪ್ರತಿ ತಿಂಗಳು ಪಕ್ಷಗಳ ನಿಧಿಗೆ ಸೇರುತ್ತದೆ. ಇದರಿಂದ ಕಳೆದ ಐದು ವರ್ಷಗಳಲ್ಲಿ ರಾಜ್ಯ ಖಜಾನೆಗೆ ಸುಮಾರು 1,600 ಕೋಟಿ ರೂ. ನಷ್ಟವಾಗಿದೆ. ಇದರಿಂದ ಡಿಎಂಕೆ ಮತ್ತು ಟಿಎಎಸ್ಎಂಎಸಿ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿ ಬಂದಿದೆ.

ಸಗಟು ಮತ್ತು ಚಿಲ್ಲರೆ ವ್ಯಾಪಾರ ಜಾಲವನ್ನು ನಿರ್ವಹಿಸುತ್ತಿರುವ ಟಿಎಎಸ್ಎಂಎಸಿಯ ಅಡಿಯಲ್ಲಿ ಸುಮಾರು 4,048 ನೋಂದಾಯಿತ ಮಳಿಗೆಗಳಿವೆ. ಇದರ ಅನಧಿಕೃತ ನಗದು ಸಂಗ್ರಹ ವ್ಯವಸ್ಥೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಸಿಎಂ ವಿಜಯ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಯಾರಿಗೆ ಈ ಜವಾಬ್ದಾರಿ?

ಇದೇ ಮೊದಲ ಬಾರಿಗೆ ಸಾಮಾನ್ಯ ವರ್ಗದ ಹಿನ್ನೆಲೆಯುಳ್ಳ 37 ವರ್ಷದ ಕೆ. ವಿಘ್ನೇಶ್ ಅವರು ನಿಷೇಧ ಮತ್ತು ಅಬಕಾರಿ ಸಚಿವರಾಗಿದ್ದಾರೆ. ರಾಜಕೀಯಕ್ಕೆ ಬರುವ ಮೊದಲು ಇವರು ಕೇಬಲ್ ವಿತರಣಾ ವ್ಯವಹಾರ ನಡೆಸುತ್ತಿದ್ದು, ಇವರ ಪೋಷಕರು ಚಹಾ ಅಂಗಡಿಯನ್ನು ನಡೆಸುತ್ತಿದ್ದರು. ಕೆ. ವಿಘ್ನೇಶ್ ಅವರ ಅಧಿಕಾರ ವ್ಯಾಪ್ತಿಗೆ ಟಿಎಎಸ್ಎಂಎಸಿ ಬರಲಿದೆ.

ಸಚಿವ ಕೆ. ವಿಘ್ನೇಶ್ ಹೇಳಿದ್ದೇನು?

ಮುಖ್ಯಮಂತ್ರಿ ಆದೇಶದ ಬಳಿಕ ಮಾತನಾಡಿದ ಸಚಿವ ಕೆ. ವಿಘ್ನೇಶ್, ಜನರು ಕಷ್ಟಪಟ್ಟು ದುಡಿದ ಹಣ ಭ್ರಷ್ಟಾಚಾರದ ಮೂಲಕ ಬರುವುದು ತಮ್ಮ ಸರ್ಕಾರಕ್ಕೆ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ. ಅವರ ಸೂಚನೆ ಸರಳವಾಗಿತ್ತು. ಹಣ ಸೋರಿಕೆಗೆ ಕಾರಣವಾದವರನ್ನು ತಕ್ಷಣ ಬಂಧಿಸಬೇಕು. ಜನರ ಹಣವನ್ನು ಖಜಾನೆಗೆ ಮರಳಿ ತರಬೇಕಿದೆ ಎಂದರು.

ಟಿಎಎಸ್ಎಂಎಸಿ ಕಾರ್ಯಾಚರಣೆಗಳಿಗೆ ಸಂಬಂಧಿಸಿ ಎಲ್ಲಾ ಅನೌಪಚಾರಿಕ ಸಂಗ್ರಹ ವ್ಯವಸ್ಥೆಗಳನ್ನು ರದ್ದುಗೊಳಿಸಲು ಸರ್ಕಾರ ಉದ್ದೇಶಿಸಿದೆ. ಈ ಕುರಿತು ಅಧಿಕಾರಿಗಳು ಮತ್ತು ಡಿಸ್ಟಿಲರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಟಿಎಎಸ್ಎಂಎಸಿಯ ಪ್ರತಿಯೊಂದು ಕಾರ್ಯವಿಧಾನವನ್ನು ಕೂಲಂಕುಷವಾಗಿ ಪರೀಕ್ಷಿಸಲಾಗುವುದು. ಇದು ಆರಂಭ. ಮದ್ಯ ಮಾರಾಟದಿಂದ ಬರುವ ಎಲ್ಲಾ ಆದಾಯವು ನೇರವಾಗಿ ರಾಜ್ಯ ಖಜಾನೆಗೆ ತಲುಪಲು ಸರ್ಕಾರ ಪಾರದರ್ಶಕ ಕಾರ್ಯವಿಧಾನದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಏನು ಕ್ರಮ ?

ಟಿಎಎಸ್ಎಂಎಸಿಯ ಆದಾಯದಲ್ಲಿ 102 ಕೋಟಿ ರೂ. ತಿಂಗಳಿಗೆ ಪಕ್ಷದ ನಿಧಿಗೆ ಬರುತ್ತಿತ್ತು. ಇದು ಗೋದಾಮುಗಳು, ಸಾರಿಗೆ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ನಡೆಯುತ್ತಿತ್ತು ಎನ್ನಲಾಗಿದೆ. ಇದರೊಂದಿಗೆ ಪ್ರತಿ ಇಲಾಖೆಯಲ್ಲಿನ ಆದಾಯ ಸೋರಿಕೆಗಳನ್ನು ಪತ್ತೆ ಹಚ್ಚಲು ಹಿಂದಿನ ಸರ್ಕಾರಆದಾಯವನ್ನು ಸಂಪೂರ್ಣವಾಗಿ ಲೆಕ್ಕಹಾಕಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಲ್ಲಿ ಮೊದಲಿಗೆ ಟಿಎಎಸ್ಎಂಎಸಿ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ಲಂಬರ್ ಖಾತೆಗೆ ಏಕಾಏಕಿ 294 ಕೋಟಿ ರುಪಾಯಿ ಜಮೆ; ಬ್ಯಾಂಕ್‌ ಬ್ಯಾಲೆನ್ಸ್ ನೋಡಿ ಬೆಚ್ಚಿಬಿದ್ದ ಯುವಕ: ಹಣ ಬಂದಿದೆಲ್ಲಿಂದ?

ಮುಖ್ಯಮಂತ್ರಿಯಾಗಿ ವಿಜಯ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯಾದ್ಯಂತ 717 ಟಿಎಎಸ್ಎಂಎಸಿ ಚಿಲ್ಲರೆ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಇದರಿಂದ ವಾರ್ಷಿಕ ಮದ್ಯದ ಆದಾಯವು ಸುಮಾರು 8,000 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಈ ನಷ್ಟವನ್ನು ಭರಿಸಲು ಸರ್ಕಾರ ಮದ್ಯದ ಬೆಲೆಗಳನ್ನು ಹೆಚ್ಚಿಸುವುದಿಲ್ಲ ಎಂದು ಹೇಳಿದೆ.

ಮದ್ಯ ಮಾರಾಟವನ್ನು ಕೇವಲ ಆದಾಯ ಗಳಿಕೆಯ ಭಾಗವಾಗಿ ನೋಡಲಾಗುವುದಿಲ್ಲ ಎಂದು ಸಚಿವ ಸಂಪುಟ ಸಭೆಯಲ್ಲಿ ವಿಜಯ್ ಅವರು ಸ್ಪಷ್ಟಪಡಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author