ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಾನು ರಾಮನಗರಕ್ಕೆ ಫಿಕ್ಸ್ ಆಗಿದ್ದೇನೆ, ಯಾವುದೇ ಅನುಮಾನ ಬೇಡ ಎಂದ ನಿಖಿಲ್ ಕುಮಾರಸ್ವಾಮಿ

Nikhil Kumaraswamy: ನಾನು ರಾಮನಗರಕ್ಕೆ ಫಿಕ್ಸ್ ಆಗಿದ್ದೇನೆ, ಯಾವುದೇ ಅನುಮಾನ ಬೇಡ. ನಾನು ಪಲಾಯನವಾದಿ ರಾಜಕಾರಣ‌ ಮಾಡಲ್ಲ, ನಮ್ಮ ಕಾರ್ಯಕರ್ತರ ಆದೇಶವೇ ಅಂತಿಮ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ನಾನು ರಾಮನಗರಕ್ಕೆ ಫಿಕ್ಸ್ ಆಗಿದ್ದೇನೆ ಎಂದ ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ (ಸಂಗ್ರಹ ಚಿತ್ರ) -

Profile
Siddalinga Swamy Feb 24, 2026 9:57 PM

ರಾಮನಗರ, ಫೆ.24: ನಾನು ರಾಮನಗರಕ್ಕೆ ಫಿಕ್ಸ್ ಆಗಿದ್ದೇನೆ, ಯಾವುದೇ ಅನುಮಾನ ಬೇಡ. ನಾನು ಪಲಾಯನವಾದಿ ರಾಜಕಾರಣ‌ ಮಾಡಲ್ಲ, ನಮ್ಮ ಕಾರ್ಯಕರ್ತರ ಆದೇಶವೇ ಅಂತಿಮ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವನ್ನು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೀಡಿದ್ದಾರೆ. ರಾಮನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ವಿಚಾರಕ್ಕೆ ಕುರಿತಂತೆ ಪ್ರತಿಕ್ರಿಯೆ ನೀಡಿ, ಪದೇ ಪದೇ ಈ ಬಗ್ಗೆ ಪ್ರಶ್ನೆ ಕೇಳಬೇಡಿ. ಅಷ್ಟೊಂದು ಅನುಮಾನ ಬೇಡ. ನಾನು ರಾಮನಗರಕ್ಕೆ ಫಿಕ್ಸ್ ಆಗಿದ್ದೇನೆ. ನನ್ನನ್ನ ಎಲ್ಲಾ ಕಡೆಯಿಂದ ವಿರೋಧಿಗಳು ರೌಂಡಪ್ ಆಗ್ತಾರೆ. ಮುಂದೆಯೂ ಕೂಡಾ ರೌಂಡಪ್ ಮಾಡ್ತಾರೆ. ಆದರೆ ಜನ ನಮ್ಮನ್ನ ಕಾಪಾಡುವ ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದರು.

ನಂತರ ರಾಮನಗರದ ಕೈಲಾಂಚ ಹೋಬಳಿಯ ತೆಂಗಿನಕಲ್ಲು ಮತ್ತು ಕಡ್ಲೆಸುಬ್ಬಯ್ಯನದೊಡ್ಡಿ ಗ್ರಾಮದ ಕೋಟೆಮಾರಮ್ಮ ದೇವಿಯ ನೂತನ ಶಿಲಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಉದ್ಘಾಟನೆ ಹಾಗೂ ನೂತನ ವಿಮಾನ ಗೋಪುರ ಕುಂಭಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿ, ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಾಳೆಯೇ ಚುನಾವಣೆ ನಡೆದರೂ ರಾಜ್ಯದ ಜನ ಕಾಂಗ್ರೆಸ್‌ ತಿರಸ್ಕರಿಸಲಿದ್ದಾರೆ

ನಾಳೆಯೇ ಚುನಾವಣೆ ನಡೆದರೂ ರಾಜ್ಯದ ಜನ ಕಾಂಗ್ರೆಸ್‌ ಸರ್ಕಾರವನ್ನು ತಿರಸ್ಕರಿಸಲಿದ್ದಾರೆ ಎಂದು ಜೆಡಿಎಸ್‌ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರದಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರ ಬದಲಾವಣೆ ಬಗ್ಗೆ 31 ಶಾಸಕರ ಪತ್ರ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಕೇವಲ ಸಚಿವರ ಬದಲಾವಣೆ ಅಲ್ಲ. ಇಡೀ ಸರ್ಕಾರ ಬದಲಾವಣೆ ಮಾಡುವ ದಿನ ದೂರವಿಲ್ಲ. 7 ಕೋಟಿ ಕನ್ನಡಿಗರು ಅದನ್ನು ಮಾತನಾಡುತ್ತಿದ್ದಾರೆ. ರಾಜ್ಯಾದ್ಯಂತ ನಾನು ಪ್ರವಾಸ ಮಾಡಿದ್ದೇನೆ. ರಾಜ್ಯದಲ್ಲಿ ಟ್ರೆಂಡ್‌ ಬದಲಾವಣೆ ಆಗಿದೆ. ಈಗ ಚುನಾವಣೆ ನಡೆದರೂ ಕಾಂಗ್ರೆಸ್‌ ಸರ್ಕಾರವನ್ನು ಜನರು ತಿರಸ್ಕಾರ ಮಾಡ್ತಾರೆ. ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಬೀದಿಗೆ ಬರುತ್ತೆ. ಯಾವ ಸಚಿವರ ಚೇಂಜ್‌ ಮಾಡಿದರೂ ಆಡಳಿತದಲ್ಲಿ ಯಾವುದೇ ಬದಲಾವಣೆ ಆಗಲ್ಲ. ಇವರ ಮನಸ್ಥಿತಿ ಲೂಟಿ ಮಾಡುವುದೇ ಆಗಿದೆ ಎಂದರು.

Dharwad Protest: ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ತುರ್ತು ಕ್ರಮ ವಹಿಸಲಿ: ಎಚ್‌.ಡಿ.ಕುಮಾರಸ್ವಾಮಿ ಒತ್ತಾಯ

ಧಾರವಾಡ ಪ್ರತಿಭಟನೆ ಬಗ್ಗೆ ಮಾತನಾಡಿ, ಡಿಸಿಎಂ ಅವರ ಹೇಳಿಕೆಯನ್ನೂ ನೋಡಿದ್ದೇನೆ. 3 ಸಾವಿರ ಯುವನಿಧಿ ಕೊಟ್ಟಿದ್ದೇವೆ ಅಂತ ಉಡಾಫೆ ಉತ್ತರ ಕೊಡ್ತಾರೆ. ಇವರ ಎರಡು ಸಾವಿರ, ಮೂರು ಸಾವಿರ ನಂಬಿಕೊಂಡು ಬದುಕುತ್ತಿರೋರು ಯಾರು ಇಲ್ಲ. ಸ್ವಾಭಿಮಾನದ ಬದುಕು ನಡೆಸಲು ಉದ್ಯೋಗ ಸೃಷ್ಟಿ ಮಾಡಬೇಕು. ಸಿಎಂ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಮಾತು ತಪ್ಪಿದ್ದಾರೆ. ಹಾಗಾಗಿ ಯುವಕರು ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ. ಶೀಘ್ರ ಎಚ್ಚೆತ್ತು ಉದ್ಯೋಗ ಭರ್ತಿ ಮಾಡದಿದ್ದರೆ ಯುವಕರ ಕಿಚ್ಚು ರಾಜ್ಯಾದ್ಯಂತ ಹೊತ್ತಿ ಉರಿಯುವುದರಲ್ಲಿ ಅನುಮಾನ ಇಲ್ಲಎಂದರು.