ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಯಕರು ಕೈಗೆ ಸಿಗುತ್ತಿಲ್ಲ, ಕರೆಗಳಿಗೆ ಉತ್ತರಿಸುತ್ತಿಲ್ಲ: ಅತಂತ್ರದಲ್ಲಿ ಟಿಎಂಸಿ ಕಾರ್ಯಕರ್ತರು

ತೃಣ ಮೂಲ ಕಾಂಗ್ರೆಸ್ ನ ಉನ್ನತ ಮಟ್ಟದಲ್ಲಿ ಆಗಿರುವ ಬಿಕ್ಕಟ್ಟು ಈಗ ತಳ ಮಟ್ಟವನ್ನು ಕೂಡ ತಲುಪಿದೆ. ಕಾರ್ಯಕರ್ತರ ಫೋನ್ ಕರೆಗಳಿಗೆ ನಾಯಕರು ಸಿಗದೇ ಇರುವುದರಿಂದ ಅವರಲ್ಲಿ ಕಳವಳ ಹೆಚ್ಚಾಗಿದೆ. ಏನು ಮಾಡಬೇಕು ಎಂದು ತೋಚದೆ ಅತಂತ್ರರಾಗಿರುವುದಾಗಿ ಅನೇಕರು ಹೇಳಿಕೊಂಡಿದ್ದಾರೆ. ಇನ್ನು ಕೆಲವರು ತಾವು ಮಮತಾ ಬ್ಯಾನರ್ಜಿ ಅವರಿಗೆ ನಿಷ್ಠರಾಗಿ ಇರುವುದಾಗಿ ಹೇಳಿದ್ದಾರೆ.

ಸಂಗ್ರಹ ಚಿತ್ರ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West bengal) ತೃಣ ಮೂಲ ಕಾಂಗ್ರೆಸ್ (Trinamool Congress) ಒಳಗೆ ಉಂಟಾಗಿರುವ ಬಿಕ್ಕಟ್ಟು ಈಗ ತಳ ಮಟ್ಟವನ್ನು ತಲುಪಿದೆ. ಅನೇಕ ನಾಯಕರು (TMC leaders) ಕಾರ್ಯಕರ್ತರ ಫೋನ್ ಕರೆಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಕಾರ್ಯಕರ್ತರಲ್ಲಿ ಕಳವಳ ಹೆಚ್ಚಾಗಿದ್ದು, ಅನೇಕರು ಅತಂತ್ರರಾಗಿದ್ದಾರೆ. ಕೆಲವರು ತಾವು ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ನಿಷ್ಠರಾಗಿ ಇರುವುದಾಗಿ ಹೇಳಿಕೊಂಡಿದ್ದಾರೆ. ತೃಣ ಮೂಲ ಕಾಂಗ್ರೆಸ್ ಒಳಗಿನ ಬಿಕ್ಕಟ್ಟು ಈಗ ತಳ ಮಟ್ಟದಲ್ಲಿ ಸಂಘಟನೆ ಮೇಲೆಯೂ ಪರಿಣಾಮ ಬೀರತೊಡಗಿದ್ದು, ಇದರಿಂದ ಅನೇಕರು ಪಕ್ಷದಿಂದ ದೂರವಾಗುವ ಸಾಧ್ಯತೆಯನ್ನು ಕೂಡ ಅಲ್ಲಗೆಳೆಯುವಂತಿಲ್ಲ. ಹೀಗಾದರೆ ಮತ್ತೊಮ್ಮೆ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬಿದ್ದಂತಾಗುತ್ತದೆ.

ತಳಮಟ್ಟದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಸಂಘಟನೆಯಲ್ಲಿನ ಕುಸಿತ ಮತ್ತು ನಾಯಕರನ್ನು ತಲುಪುವಲ್ಲಿ ತೊಂದರೆಯ ಬಗ್ಗೆ ದೂರಿದ್ದಾರೆ. ಇದು ಪದಾಧಿಕಾರಿಗಳಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಬಹುದು ಮತ್ತು ಪಕ್ಷಾಂತರದ ಸಾಧ್ಯತೆಯನ್ನು ಕೂಡ ಹೆಚ್ಚಿಸುತ್ತದೆ ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಡಾ‌. ಪ್ರದೀಪ್‌ ಕೆಂಚನೂರುಗೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆ ಸೋಲಿನ ಬಳಿಕ ತೃಣಮೂಲ ಕಾಂಗ್ರೆಸ್ ನೊಳಗೆ ಉದ್ವಿಗ್ನತೆ ಹೆಚ್ಚಾಗಿದೆ. ಅನೇಕ ಶಾಸಕರು, ಸಂಸದರು ಪಕ್ಷವನ್ನು ತೊರೆದು ಅದರ ಚಿಹ್ನೆಗಾಗಿ ಹೋರಾಟದ ಬಗ್ಗೆ ಯೋಚನೆ ಮಾಡುತ್ತಿದ್ದರೆ ತಳಮಟ್ಟದ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ.

ತೃಣಮೂಲ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರಲ್ಲಿ ಹಲವಾರು ಮಂದಿ ತಮ್ಮ ನಾಯಕರು ಇನ್ನು ಮುಂದೆ ತಮ್ಮ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ತಾವು ಮಮತಾ ಬ್ಯಾನರ್ಜಿ ಅವರಿಗೆ ನಿಷ್ಠರಾಗಿದ್ದೇವೆ ಎಂದು ತಿಳಿಸಿದ್ದಾರೆ.

ನಾಡಿಯಾದಲ್ಲಿ, ತೃಣಮೂಲದ ಹಿರಿಯ ನಾಯಕರೊಬ್ಬರು ಪಕ್ಷದ ಸಂಘಟನಾತ್ಮಕ ಅವ್ಯವಸ್ಥೆ ಈಗಾಗಲೇ ಚುನಾವಣಾ ಫಲಿತಾಂಶಗಳಲ್ಲಿ ಗೋಚರಿಸಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲೆಯಾದ್ಯಂತ ಬೆದರಿಕೆಯ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಕ್ಯಾಮಕ್ ಸ್ಟ್ರೀಟ್ ನಲ್ಲಿರುವ ಟಿಎಂಸಿ ಕಚೇರಿಯಿಂದ ಮಾಜಿ ರಾಜ್ಯ ಸಚಿವ ಮಾನಸ್ ಭುನಿಯಾ ಮತ್ತು ಪ್ರತಾಪ್ ನಾಯಕ್ ಅವರಿಗೆ ಹಣ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿತ್ತು. ಟಿಎಂಸಿಯ ಹಿರಿಯ ನಾಯಕರಾದ ಶಂಕರ್ ಸಿಂಗ್ ಮತ್ತು ಜಿಶು ಸಿಂಘಾ ಅವರು ನಾಪತ್ತೆಯಾಗಿದ್ದು, ಈಗ ಜಿಲ್ಲೆಯಲ್ಲಿ ಯಾರೂ ಸಂಘಟನಾತ್ಮಕ ಕೆಲಸ ಮಾಡುತ್ತಿಲ್ಲ. ಇದರಿಂದ ಕಾರ್ಯಕರ್ತರಿಗೆ ದಿಕ್ಕಿಲ್ಲದಂತಾಗಿದೆ ಎಂದು ಕೆಲವರು ತಿಳಿಸಿದ್ದಾರೆ.

ಉತ್ತರ 24 ಪರಗಣದಲ್ಲಿ ಜಿಲ್ಲಾ ತೃಣಮೂಲ ಮಾಜಿ ಅಧ್ಯಕ್ಷ ನಿರ್ಮಲ್ ಘೋಷ್ ಅವರು ಕಾರ್ಯಕರ್ತರೊಂದಿಗೆ ಉಳಿದುಕೊಂಡಿದ್ದಾರೆ ಮತ್ತು ಪಕ್ಷದ ಪ್ರಾಮಾಣಿಕ ಕಾರ್ಯಕರ್ತರನ್ನು ಮುಂದಕ್ಕೆ ತರುವುದು ಅವರ ಮುಖ್ಯ ಜವಾಬ್ದಾರಿ. ತೃಣಮೂಲ ಕಾಂಗ್ರೆಸ್ ಎಂದರೆ ಮಮತಾ ಬ್ಯಾನರ್ಜಿ. ಎಲ್ಲರೂ ಅವರಿಗೆ ನಿಷ್ಠರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಪುರ್ಬಾ ಬರ್ಧಮಾನ್‌ ಜಿಲ್ಲಾ ತೃಣಮೂಲ ಮಾಜಿ ಅಧ್ಯಕ್ಷ ಸದ್ದಾಂ ಹೊಸೈನ್ ಅವರು ಕಾರ್ಯಕರ್ತರಲ್ಲಿ ಒತ್ತಡ ಹೆಚ್ಚಾಗಿದೆ. ಹಿರಿಯ ನಾಯಕರಿಗೆ ಅದಕ್ಕಿಂತ ಹೆಚ್ಚಿನ ಒತ್ತಡವಿದೆ. ನಾವು ಮಮತಾ ಬ್ಯಾನರ್ಜಿ ಅವರಿಂದ ದೂರವಾಗಿಲ್ಲ. ಕೆಲವೆಡೆ ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ತನಗಾಗಲಿ ಅಥವಾ ಕಾರ್ಯಕರ್ತರಿಗಾಗಲಿ ಋತಬ್ರತಾ ಅವರ ಪರಿಚಯವಿಲ್ಲ. ಮಮತಾ ಬ್ಯಾನರ್ಜಿ ಅವರಿಗೆ ಹತ್ತಿರವಿರುವ ನಾಯಕರನ್ನು ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು.

ಕೂಚ್ ಬೆಹಾರ್‌ನಲ್ಲಿ ಹೆಚ್ಚಿನ ನಾಯಕರು ನಾಪತ್ತೆಯಾಗಿದ್ದಾರೆ. ಕರೆಗಳಿಗೆ ಉತ್ತರಿಸುತ್ತಿಲ್ಲ. ಇದರಿಂದ ಬ್ಲಾಕ್, ಗ್ರಾಮ ಮತ್ತು ಪಂಚಾಯತ್ ಮಟ್ಟದ ನಾಯಕರು ಕೂಡ ಕಾರ್ಯಕರ್ತರಿಗೆ ಸ್ಪಂದಿಸುತ್ತಿಲ್ಲ ಎನ್ನಲಾಗುತ್ತಿದೆ.

ದಕ್ಷಿಣ 24 ಪರಗಣಗಳ. ಜಿಲ್ಲೆಯಲ್ಲಿ ಎಲ್ಲಾ ಸಮಿತಿಗಳನ್ನು ವಿಸರ್ಜಿಸಲಾಗಿದೆ ಮತ್ತು ಇನ್ನು ಮುಂದೆ ಯಾರು ಯಾವ ಹುದ್ದೆಯನ್ನು ಹೊಂದಿದ್ದಾರೆಂದು ಯಾರಿಗೂ ತಿಳಿದಿಲ್ಲ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

16 ಪಾಸ್‌ಪೋರ್ಟ್, 245 ದೇಶಕ್ಕೆ ಪ್ರಯಾಣ: ಬೆಂಗಳೂರಿನ ಸಂಗೀತಗಾರನ ಅಪರೂಪದ ಸಾಧನೆಗೆ ನೆಟ್ಟಿಗರು ಫಿದಾ!

ಒಟ್ಟಿನಲ್ಲಿ ಈಗ ತೃಣಮೂಲ ಕಾಂಗ್ರೆಸ್ ಪಕ್ಷವು ತಳ ಮಟ್ಟದಲ್ಲೇ ಒಡೆದು ಹಲವು ಭಾಗಗಳಾಗುತ್ತಿರುವುದು ಕಂಡು ಬರುತ್ತಿದೆ. ಇದನ್ನು ಹೇಗೆ ಎದುರಿಸಬೇಕೆಂದು ತೋಚದ ಕಾರ್ಯಕರ್ತರು ಮೌನವಾಗಿ ಕುಳಿತು ಮಮತಾ ಬ್ಯಾನರ್ಜಿ ಅವರ ಮುಂದಿನ ನಡೆ, ಆದೇಶಕ್ಕಾಗಿ ಕಾಯುತ್ತಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author