#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Mallikarjun Kharge: ಮೋದಿ ದೋಸ್ತ ಆರಂಭದಲ್ಲೇ ಹೆದರಿಸ್ತಿದಾನೆ; ಟ್ರಂಪ್‌ ಬಗ್ಗೆ ಖರ್ಗೆ ಮಾತು

Mallikarjun Kharge: ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ಬಗ್ಗೆ ಕಲಬುರಗಿ ನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ. ಟ್ರಂಪ್‌ ಈಗಾಗಲೇ ಇಂಪೋರ್ಟ್ ಟ್ಯಾರಿಫ್ ಹೆಚ್ಚಳ ಮಾಡುವ ಬೆದರಿಕೆ ಹಾಕಿದ್ದಾರೆ. ನಮ್ಮ ಎಂಜಿನಿಯರಗಳು, ಡಾಕ್ಟರ್‌ಗಳನ್ನು ಯಾವಾಗ ಬೇಕೋ ಅವಾಗ ತಗೊಳ್ಳೋದು, ನಂತರ ನಿರ್ಬಂಧ ಹಾಕೋದು ಸರಿನಾ? ಟ್ರಂಪ್‌ನಿಂದ ನಮ್ಮ ದೇಶಕ್ಕೆ ಒಳ್ಳೆಯದಾಗುತ್ತೆ ಅಂತ ನಂಬೋದು ಹೇಗೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಮೋದಿ ದೋಸ್ತ ಆರಂಭದಲ್ಲೇ ಹೆದರಿಸ್ತಿದಾನೆ; ಟ್ರಂಪ್‌ ಬಗ್ಗೆ ಖರ್ಗೆ ಮಾತು

Profile Prabhakara R Feb 12, 2025 1:47 PM

ವಿಶ್ವವಾಣಿ ಸುದ್ದಿಮನೆ, ಕಲಬುರಗಿ: ಟ್ರಂಪ್ ಕ್ಲೋಸ್ ಇದ್ದಾನೆ. ಫ್ರೆಂಡ್ ಇದ್ದಾನೆ ಅಂತೆಲ್ಲಾ ಹೇಳಿಕೊಳ್ಳುತ್ತೀರಿ. ಅವರು ನಿಮ್ಮ ಫ್ರೆಂಡ್ ಇರಬಹುದು. ನಮ್ಮ ದೇಶದ ಫ್ರೆಂಡ್ ಇರಬೇಕಲ್ವಾ? ನಿಮ್ಮ ಫ್ರೆಂಡ್ ಇದ್ದವರು ಅದೇ ಕಾಳಜಿ ದೇಶದ ಬಗ್ಗೆ ವಹಿಸ್ತಾರೆ ಅಂತಲ್ಲ. ಮೋದಿ (Narendra Modi) ಯಾವಾಗಲೂ ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಆದ್ದರಿಂದ ಮೋದಿ ಪ್ರವಾಸದಿಂದ ಅಂತಹ ಫಲಿತಾಂಶ ಏನೂ ಬರೋದಿಲ್ಲ. ಇಂಪೋರ್ಟ್ ಟ್ಯಾರಿಫ್ ಹೆಚ್ಚಳ ಮಾಡುವ ಬೆದರಿಕೆ ಈಗಾಗಲೇ ಟ್ರಂಪ್ ಹಾಕಿದ್ದಾರೆ. ಆರಂಭದಲ್ಲೇ ಮೋದಿ ದೋಸ್ತ ಹೆದರಿಸ್ತಿದ್ದಾನೆ. ನಮ್ಮ ಎಂಜಿನಿಯರಗಳು, ಡಾಕ್ಟರ್‌ಗಳನ್ನು ಯಾವಾಗ ಬೇಕೋ ಅವಾಗ ತಗೊಳ್ಳೋದು ನಂತರ ನಿರ್ಬಂಧ ಹಾಕೋದು ಸರಿನಾ? ಟ್ರಂಪ್‌ನಿಂದ ನಮ್ಮ ದೇಶಕ್ಕೆ ಒಳ್ಳೆಯದಾಗುತ್ತೆ ಅಂತ ನಂಬೋದು ಹೇಗೆ ಎಂದು ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ಬಗ್ಗೆ ನಗರದಲ್ಲಿ ಬುಧವಾರ ಮಾತನಾಡಿರುವ ಅವರು, ಅಮೆರಿಕಗೆ ಹೋಗಲು ಪ್ರಧಾನಿ ಮೋದಿಗೆ ಆಹ್ವಾನ ಬಂದಿರಲಿಲ್ಲ. ಮೊದಲು ಜೈಶಂಕರ್ ಇನ್ನಿತರರು ಹೋಗಿದ್ದಾರೆ. ಬಳಿಕ ಆಹ್ವಾನ ಬಂದ ಮೇಲೆ ಮೋದಿ ಹೋಗುತ್ತಿದ್ದಾರೆ. ಮೋದಿ ಮತ್ತು ಟ್ರಂಪ್ ಸ್ನೇಹಿತರಾಗಿದ್ದರೆ, ಫೋನ್‌ನಲ್ಲೇ ಹೇಳಬೇಕಿತ್ತು. ನಮ್ಮ ದೇಶದ ವಲಸಿಗರನ್ನು ಸಾಮಾನ್ಯ ಗೂಡ್ಸ್ ಫ್ಲೈಟ್‌ನಲ್ಲಿ ಕಳುಹಿಸಬೇಡಿ. ನಿಮ್ಮ ಸ್ವಂತ ಪ್ಯಾಸೆಂಜರ್ ಫ್ಲೈಟನಲ್ಲಿ ಕಳ್ಸಿ ಅನ್ನಬಹುದಿತ್ತು ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುಳಿವು

ದೇಶದ ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದರು.



ಈಗಾಗಲೇ ಒಡಿಶಾದಲ್ಲಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೇನೆ. ಅಲ್ಲಿ ಹಿಂದುಳಿದ ವರ್ಗದವರು ಅಧ್ಯಕ್ಷರಾಗಿ ಮಾಡಲಾಗಿದೆ. ಇತರೆ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಬದಲಾವಣೆ ಆಗುತ್ತವೆ. ಇದರ ಬಗ್ಗೆ ಸ್ಪಷ್ಟವಾಗಿ ಹಿಂಗೆ ಎಂದು ಹೇಳಲು ಆಗದು, ಒಂದೊಂದು ರಾಜ್ಯಗಳಲ್ಲಿ ಬದಲಾವಣೆ ಮಾಡುತ್ತಿದ್ದೇವೆ. ಒಂದೆರೆಡು ದಿನದಲ್ಲಿ ಮತ್ತೆ ಒಂದೆರಡು ರಾಜ್ಯಗಳಲ್ಲಿ ಅಧ್ಯಕ್ಷರ ಬದಲಾವಣೆ ಮಾಡುತ್ತೇವೆ. ಇನ್ನು, ಎಂಟು ದಿನದಲ್ಲಿ ಎಲ್ಲಾ ಬದಲಾವಣೆ ಮುಗಿಯುತ್ತದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ಸುಳಿವನ್ನು ಎಐಸಿಸಿ ಅಧ್ಯಕ್ಷರು ಬಿಟ್ಟುಕೊಟ್ಟರು.

ಈ ಸುದ್ದಿಯನ್ನೂ ಓದಿ | Acharya Satyendra Das: ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ವಿಧಿವಶ

ಇನ್ನು ಸಚಿವ ಸತೀಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ನಾನು ಎಐಸಿಸಿ ಅಧ್ಯಕ್ಷ ಎಲ್ಲರೂ ಬಂದು ಭೇಟಿ ಮಾಡುತ್ತಾರೆ. ಅದೇನು ದೊಡ್ಡ ಮಾತಾ? ನನ್ನನ್ನು ಭೇಟಿ ಮಾಡಲು ಬರುವ ನಮ್ಮ‌ ರಾಜ್ಯದವರಿಗೆ ಬೇಗ ಅಪಾಯಿಂಟ್‌ಮೆಂಟ್ ಸಿಗುತ್ತೆ. ಬಂದವರಿಗೆ ಬೇಡ ಅನ್ನಲು ಆಗುತ್ತಾ? ಎಂದು ಪ್ರಶ್ನಿಸಿದ ಅವರು, ಎಲ್ಲರೂ ಬಂದು ಭೇಟಿ ಆಗ್ತಾರೆ, ಪರಮೇಶ್ವರ ಬರುತ್ತಾರೆ. ಡಿ.ಕೆ ಶಿವಕುಮಾರ ಬರುತ್ತಾರೆ. ಸಿದ್ದರಾಮಯ್ಯ ಫೋನ್ ಮಾಡುತ್ತಾರೆ. ಇದರಲ್ಲಿ ವಿಶೇಷ ಏನಿಲ್ಲ. ಇದರಿಂದ ನಮ್ಮ ನಾಯಕರೂ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಇದರಲ್ಲಿ ಊಹಾಪೋಹ ಸೃಷ್ಟಿಸಿ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಹೇಳಿದರು.