ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶದ ಹಿತದೃಷ್ಟಿಯಿಂದ ಪಿಎಂ ಸಲಹೆ; ವಿರೋಧ ಮಾಡುವುದನ್ನು ಕೈಬಿಡಿ ಎಂದ ಎನ್. ರವಿಕುಮಾರ್

N Ravikumar: ಪ್ರಧಾನಿಯವರ ಕರೆಗೆ ಜನರು, ಸರ್ಕಾರಗಳೂ ಸ್ಪಂದಿಸುತ್ತಿವೆ. ಕೇಂದ್ರವನ್ನು ಟೀಕಿಸಬೇಕು, ವಿರೋಧಿಸಬೇಕೆಂಬ ಚಾಳಿ ಇರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದವರು ಇದನ್ನು ವಿರೋಧಿಸುವ ಮನಸ್ಥಿತಿ ಹೊಂದಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಟೀಕಿಸಿದ್ದಾರೆ.

ದೇಶದ ಹಿತದೃಷ್ಟಿಯಿಂದ ಪಿಎಂ ಸಲಹೆ: ಎನ್. ರವಿಕುಮಾರ್

ವಿಧಾನ ಪರಿಷತ್ತಿನ ವಿರೋಧಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ (ಸಂಗ್ರಹ ಚಿತ್ರ) -

Profile
Siddalinga Swamy May 13, 2026 7:59 PM

ಬೆಂಗಳೂರು, ಮೇ 13: ಪ್ರಧಾನಿಯವರು ದೇಶದ ಹಿತದೃಷ್ಟಿಯಿಂದ ಕೆಲವು ಸಲಹೆಗಳನ್ನು ನೀಡಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ವಿರೋಧ ಮಾಡುವುದನ್ನು ಕೈಬಿಡಬೇಕು ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ (N Ravikumar) ಆಗ್ರಹಿಸಿದ್ದಾರೆ. ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದರು. ಪ್ರಧಾನಿಯವರ ಹೇಳಿಕೆ ಗಮನಿಸಿ ಅನೇಕ ಕಂಪೆನಿಗಳು ವಾರದಲ್ಲಿ 3 ದಿನ ಮನೆಯಿಂದಲೇ ಕೆಲಸ ಮಾಡಿಸುವುದಾಗಿ ಮುಂದೆ ಬರುತ್ತಿವೆ ಎಂದರು.

ಅನುಭವಿ ರಾಜಕಾರಣಿ ಬಿ.ಕೆ. ಹರಿಪ್ರಸಾದ್, ಅಪ್ರಬುದ್ಧ ಹಾಗೂ ಅತ್ಯಂತ ಹಗುರವಾದ ಹೇಳಿಕೆ ಕೊಡುತ್ತಾರೆ. ಅವರ ಬಗ್ಗೆ ಹೇಳಿಕೆ ಕೊಡುವುದರಲ್ಲಿ ಏನೇನೂ ಅರ್ಥ ಇಲ್ಲ ಎಂದು ಹೇಳಿದರು. ಪ್ರಧಾನಿಯವರ ಕರೆಗೆ ಜನರು, ಸರ್ಕಾರಗಳೂ ಸ್ಪಂದಿಸುತ್ತಿವೆ. ಕೇಂದ್ರವನ್ನು ಟೀಕಿಸಬೇಕು, ವಿರೋಧಿಸಬೇಕೆಂಬ ಚಾಳಿ ಇರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದವರು ಇದನ್ನು ವಿರೋಧಿಸುವ ಮನಸ್ಥಿತಿ ಹೊಂದಿದ್ದಾರೆ ಎಂದು ಟೀಕಿಸಿದರು. ನಮ್ಮ ದೇಶದ ಅರ್ಥವ್ಯವಸ್ಥೆ, ಜನರ ಉದ್ಯೋಗ ಮತ್ತು ವಿದೇಶಿ ವಿನಿಮಯವನ್ನು ಕಾಪಾಡಲು ಪ್ರಧಾನಿಯವರ ಕರೆ ಸ್ವಾಗತಾರ್ಹ. ಜನರು ಇದನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರದಿಂದ ಎಸ್‍ಟಿ ಸಮುದಾಯಕ್ಕೆ ದೊಡ್ಡ ಅನ್ಯಾಯ: ಆರ್. ಅಶೋಕ್ ಆರೋಪ

ಅಂಕೋಲಾದಲ್ಲಿ ನಮ್ಮ ಕಾರ್ಯಕರ್ತ ನಾಗರಾಜ್ ನಾಯಕ್ ಮೇಲೆ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ನಾಗರಾಜ್ ನಾಯಕ್ ಅವರ ಮೇಲೆ ಹಲ್ಲೆ ಮಾಡಲು ಮುಂದಾದ ಗೋಪಾಲಕೃಷ್ಣ ನಾಯಕ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಾಗರಾಜ್ ನಾಯಕ್ ಅವರು ಒಂದು ವಾರದಿಂದ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ನಾಗರಾಜ್ ನಾಯಕ್ ಅವರಿಗೆ ರಕ್ಷಣೆ ಕೊಡಬೇಕು ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಒತ್ತಾಯಿಸಿದರು.