ಭುವನೇಶ್ವರ: ಒಡಿಶಾದ ಮಾಜಿ ಮುಖ್ಯಮಂತ್ರಿ (Former Odisha CM), ಬಿಜೆಡಿ ವರಿಷ್ಠ (BJD Chief) ನವೀನ್ ಪಟ್ನಾಯಕ್ (Naveen Patnaik) ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಭಾನುವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಡಿಶಾ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ನವೀನ್ ಪಟ್ನಾಯಕ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಶೀಘ್ರದಲ್ಲೇ ವೈದ್ಯರು ಮಾಹಿತಿ ನೀಡಲಿದ್ದಾರೆ. 78 ವರ್ಷದ ಪಾಟ್ನಾಯಕ್ ಅವರ ಆರೋಗ್ಯದಲ್ಲಿ ಶನಿವಾರ ರಾತ್ರಿ ವ್ಯತ್ಯಯವಾಗಿದ್ದು, ಕೆಲವು ವೈದ್ಯರು ಅವರ ನಿವಾಸಕ್ಕೆ ಭೇಟಿ ನೀಡಿದ್ದರು ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಇತ್ತೀಚೆಗೆ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನವೀನ್ ಪಟ್ನಾಯಕ್ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರನ್ನು ಭಾನುವಾರ ಒಡಿಶಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ನಾಯಕ್ ಅವರ ಆರೋಗ್ಯ ಸ್ಥಿತಿಯ ಕುರಿತು ಆಸ್ಪತ್ರೆ ಶೀಘ್ರದಲ್ಲೇಮಾಹಿತಿ ನೀಡಲಿದೆ ಎಂದು ಹಿರಿಯ ಬಿಜೆಡಿ ನಾಯಕರೊಬ್ಬರು ಹೇಳಿದ್ದಾರೆ.
ಜೂನ್ 20 ರಂದು ಮುಂಬೈಗೆ ತೆರಳಿದ್ದ ಪಾಟ್ನಾಯಕ್, ಮುಂಬೈನ ಆಸ್ಪತ್ರೆಯಲ್ಲಿ ಜೂನ್ 22 ರಂದು ಗರ್ಭಕಂಠದ ಸಂಧಿವಾತಕ್ಕೆ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರನ್ನು ಜುಲೈ 7 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ ಪಟ್ನಾಯಕ್ ಅವರು ಜುಲೈ 12 ರಂದು ಒಡಿಶಾಗೆ ಮರಳಿದ್ದರು.
ಆಸ್ಪತ್ರೆಗೆ ಭೇಟಿ ನೀಡಿರುವ ರಾಜ್ಯ ಆರೋಗ್ಯ ಸಚಿವ ಮುಖೇಶ್ ಮಹಾಲಿಂಗ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಪಟ್ನಾಯಕ್ ಆರೋಗ್ಯ ಸ್ಥಿರವಾಗಿದೆ. ಅವರು ವೈದ್ಯರ ನಿಗಾದಲ್ಲಿದ್ದಾರೆ. ಐದು ಬಾರಿ ಮುಖ್ಯಮಂತ್ರಿಯಾಗಿರುವ ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದಾರೆ ಎಂದರು. ಅವರು ನಿರ್ಜಲೀಕರಣಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ವೇಗವಾಗಿ ಸುಧಾರಿಸುತ್ತಿದೆ. ಭಗವಾನ್ ಜಗನ್ನಾಥನ ಕೃಪೆಯಿಂದ ಅವರು ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ ಎಂದು ಎಂದು ಬಿಜು ಜನತಾ ದಳ ಹೇಳಿದೆ.
ಈ ಸುದ್ದಿಯನ್ನೂ ಓದಿ: Mysuru Zoo: ಮೈಸೂರು ಮೃಗಾಲಯದ ಹಿರಿಯಾನೆ ಪದ್ಮಾವತಿ ಇನ್ನಿಲ್ಲ
ಪಾಟ್ನಾಯಕ್ ಅವರು ತಮ್ಮ ಆರೋಗ್ಯದ ಕಾರಣದಿಂದ 2024ರ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಅವರ ವಿಶ್ವಾಸಾರ್ಹ ಸಹಾಯಕ ವಿ. ಕೆ. ಪಾಂಡಿಯನ್ ಬಿಜೆಡಿಯ ಪ್ರಚಾರವನ್ನು ವಹಿಸಿಕೊಂಡಿದ್ದರು. ಇದು ಪಕ್ಷದ ಸೋಲಿಗೆ ಕಾರಣವಾದ ಪ್ರಮುಖ ಅಂಶವಾಗಿದೆ. ಎನ್ನಲಾಗಿದೆ.