#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Mahakumbh 2025: ಮಹಾಕುಂಭ ಮೇಳದ ಕಾಲ್ತುಳಿತದ ನಂತರ 15 ಸಾವಿರ ಜನ ಮಿಸ್ಸಿಂಗ್?

ಬಜೆಟ್ ಅಧಿವೇಶನದ ಮೂರನೇ ದಿನ ಮಹಾ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಕುರಿತು ಪ್ರತಿಪಕ್ಷಗಳು ಸದನದಲ್ಲಿ ಭಾರೀ ಗದ್ದಲ ಎಬ್ಬಿಸಿದವು. ಕಾಲ್ತುಳಿತದಿಂದ ಉಂಟಾದ ಸಾವಿನ ಸರಿಯಾದ ಅಂಕಿ ಅಂಶಗಳನ್ನು ರಾಜ್ಯ ಸರ್ಕಾರ ಪ್ರಸ್ತುತಪಡಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಈ ಮಧ್ಯೆ ಕುಂಭಮೇಳದ ಕಾಲ್ತುಳಿತದ ನಂತರ ಸರಿ ಸುಮಾರು 15 ಸಾವಿರ ಜನರು ಕಾಣೆಯಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಗಂಭೀರವಾಗಿ ಆರೋಪಿಸದ್ದಾರೆ.

ಕುಂಭಮೇಳದ ಕಾಲ್ತುಳಿತದ ನಂತರ 15 ಸಾವಿರ ಜನ ಮಿಸ್ಸಿಂಗ್?

Mahakumbh

Profile Deekshith Nair Feb 4, 2025 1:38 PM

ನವದೆಹಲಿ: ಬಜೆಟ್ ಅಧಿವೇಶನದ ಮೂರನೇ ದಿನ ಮಹಾ ಕುಂಭ ಮೇಳದಲ್ಲಿ(Mahakumbh 2025) ನಡೆದ ಕಾಲ್ತುಳಿತ (Stampede) ಪ್ರಕರಣದ ಕುರಿತು ಪ್ರತಿಪಕ್ಷಗಳು ಸದನದಲ್ಲಿ ಭಾರೀ ಗದ್ದಲ ಎಬ್ಬಿಸಿದವು. ಕಾಲ್ತುಳಿತದಿಂದ ಉಂಟಾದ ಸಾವಿನ ಸರಿಯಾದ ಅಂಕಿ ಅಂಶಗಳನ್ನು ರಾಜ್ಯ ಸರ್ಕಾರ ಪ್ರಸ್ತುತಪಡಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಈ ಮಧ್ಯೆ ಕುಂಭಮೇಳದ ಕಾಲ್ತುಳಿತದ ನಂತರ ಸರಿ ಸುಮಾರು 15 ಸಾವಿರ ಜನರು ಕಾಣೆಯಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ(Samajawadi Party) ಸಂಸದ ರಾಮ್ ಗೋಪಾಲ್ ಯಾದವ್(Ram Gopal Yadav) ಗಂಭೀರವಾಗಿ ಆರೋಪಿಸಿದ್ದಾರೆ.

ಈ ಘಟನೆಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಕೆಲವರು ಗಂಗಾ ನದಿಯಲ್ಲಿ ಕೊಚ್ಚಿ ಹೋಗಿದ್ದು ಇತರರು ಸಮಾಧಿಯಾಗುದ್ದಾರೆ ಎಂದು ಸಮಾಜವಾದಿ ಪಕ್ಷದ ಸಂಸದರು ಹೇಳಿದರು. ಮೃತರ ಸಂಬಂಧಿಕರಿಗೆ 15 ರಿಂದ 20 ಸಾವಿರ ರೂಪಾಯಿಗಳನ್ನು ನೀಡಿ ಶವಗಳನ್ನು ತೆಗೆದುಕೊಂಡು ಹೋಗುವಂತೆ ಒತ್ತಡ ಹೇರಲಾಗುತ್ತಿದೆ. ಯಾವುದೇ ಅಧಿಕಾರಿಯ ವಿರುದ್ಧ ಈವರೆಗೂ ಕ್ರಮ ಕೈಗೊಂಡಿಲ್ಲ. ನಾವು ಈ ವಿಷಯದ ಕುರಿತು ನಾವು ಸದನದಲ್ಲಿ ಧ್ವನಿ ಎತ್ತಿದರೆ ಅದನ್ನು ತಿರಸ್ಕರಿಸಲಾಗುತ್ತಿದೆ ಎಂದರು.



ಮೌನಿ ಅಮವಾಸ್ಯೆಯಂದು ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಪಟ್ಟಿಯನ್ನು ಬಿಡುಗಡೆ ಮಾಡದಿದ್ದಕ್ಕಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದ ಸರ್ಕಾರವನ್ನು ನಿನ್ನೆ ತೀವ್ರವಾಗಿ ಖಂಡಿಸಿದ್ದರು.

ಈ ಸುದ್ದಿಯನ್ನೂ ಓದಿ:Mahakumbh 2025: ಇಂದು ಕುಂಭಮೇಳದ ಕೊನೆಯ ಅಮೃತಸ್ನಾನ; ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಲಕ್ಷಾಂತರ ಜನ

ಕಾಲ್ತುಳಿತದಲ್ಲಿ ಸತ್ತವರ ಶವಗಳನ್ನು ನದಿಗೆ ಎಸೆಯಲಾಗಿದೆ; ಜಯಾ ಬಚ್ಚನ್‌ ಕಿಡಿ!

ಕುಂಭಮೇಳದ ಕಾಲ್ತುಳಿತ ಘಟನೆಯ ಬಗ್ಗೆ ಅಷ್ಟಾಗಿ ಯುಪಿ ಸರ್ಕಾರವು ತಲೆಕೆಡಿಸಿಕೊಂಡಿಲ್ಲ. ಕಣ್ಣೊರೆಸುವ ಕೆಲಸವನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಮಾಡುತ್ತಿದೆ. ಸತ್ಯಾಂಶವನ್ನು ಮರೆಮಾಚಲಾಗುತ್ತಿದೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಶವಗಳನ್ನು ನದಿಗೆ ಎಸೆಯಲಾಗಿದೆ. ಹೀಗಾಗಿ ಮಹಾ ಕುಂಭಮೇಳದ ನದಿ ಅತಿ ಹೆಚ್ಚು ಕಲುಷಿತವಾಗಿದೆ ಎಂದು ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ನಿನ್ನೆ(ಫೆ.3) ಕಿಡಿಕಾರಿದ್ದರು.

ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದ ಅವರು, ಜಲ ಶಕ್ತಿ ಯೋಜನೆ ಬಗ್ಗೆ ಬಿಜೆಪಿ ಉದ್ದುದ್ದ ಭಾಷಣ ಮಾಡುತ್ತಿದೆ. ಆದರೆ ಕುಂಭಮೇಳದಲ್ಲಿ ಅತಿ ಗರಿಷ್ಠ ಪ್ರಮಾಣದಲ್ಲಿ ನೀರು ಕಲುಷಿತ ಆಗಿದೆ ಎಂದು ಅವರು ಹೇಳಿದರು. ಪ್ರಯಾಗ್‌ರಾಜ್‌ನಲ್ಲಿ ನಡೆದ ಕಾಲ್ತುಳಿತದಿಂದ ದುರಂತವಾಗಿ ಮೃತಪಟ್ಟವರ ಹೆಣಗಳನ್ನು ನದಿಗೆ ಎಸೆಯಲಾಗಿದೆ ಎಂದು ಜಯಾ ಬಚ್ಚನ್‌ ಆರೋಪ ಮಾಡಿದರು. ಉತ್ತರ ಪ್ರದೇಶದ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಮುಚ್ಚಿಹಾಕುತ್ತಿದೆ ಮತ್ತು ಸ್ಪಷ್ಟ ಉತ್ತರವನ್ನು ನೀಡುತ್ತಿಲ್ಲ ಎಂದು ಹೇಳಿದರು.