Shatrughan Sinha: ದೇಶದಲ್ಲಿ ಮಾಂಸಾಹಾರ ಬ್ಯಾನ್ ಮಾಡ್ಬೇಕು- ವಿವಾದ ಮೈ ಮೇಲೆ ಎಳೆದುಕೊಂಡ ಶತ್ರುಘ್ನ ಸಿನ್ಹಾ!
ದೇಶಾದ್ಯಂತ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ನಿಷೇಧಿಸಬೇಕು ಎಂದು ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಮಂಗಳವಾರ(ಫೆ.4) ಹೇಳಿದ್ದಾರೆ. ಅವರ ಹೇಳಿಕೆಯಿಂದಾಗಿ ವಿವಾದ ಭುಗಿಲೆದ್ದಿದೆ. ಭಾರತದಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿರುವುದರಿಂದ ಅಂತಹ ನಿಯಮವನ್ನು ಜಾರಿಗೆ ತರುವುದು ನಿಜಕ್ಕೂ ಸವಾಲಿನ ವಿಷಯವಾಗಿದೆ ಎಂದಿರುವ ಸಿನ್ಹಾ ತಮ್ಮ ವಿವಾದಾತ್ಮಕ ಹೇಳಿಕೆಯಿಂದ ನುಣುಚಿಕೊಂಡಿದ್ದಾರೆ.
ನವದೆಹಲಿ: ದೇಶಾದ್ಯಂತ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ನಿಷೇಧಿಸಬೇಕು(Demanding Ban On Non-Veg) ಎಂದು ಟಿಎಂಸಿ(TMC) ಸಂಸದ ಶತ್ರುಘ್ನ ಸಿನ್ಹಾ(Shatrughan Sinha) ಮಂಗಳವಾರ(ಫೆ.4) ಹೇಳಿದ್ದಾರೆ. ಅವರ ಹೇಳಿಕೆಯಿಂದಾಗಿ ಭಾರೀ ವಿವಾದ ಭುಗಿಲೆದ್ದಿದೆ. ಭಾರತದಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿರುವುದರಿಂದ ಅಂತಹ ನಿಯಮವನ್ನು ಜಾರಿಗೆ ತರುವುದು ನಿಜಕ್ಕೂ ಸವಾಲಿನ ವಿಷಯವಾಗಿದೆ ಎಂದಿರುವ ಸಿನ್ಹಾ ತಮ್ಮ ವಿವಾದಾತ್ಮಕ ಹೇಳಿಕೆಯಿಂದ ನುಣುಚಿಕೊಂಡಿದ್ದಾರೆ.
ಬಾಲಿವುಡ್‌ನ ಹಿರಿಯ ನಟ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸಂಸದ ಶತ್ರುಘ್ನ ಸಿನ್ಹಾ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತದಲ್ಲಿ ಮಾಂಸಾಹಾರವನ್ನು ನಿಷೇಧಿಸಬೇಕೆಂದು ಹೇಳಿದ್ದಾರೆ. ಈ ಮಧ್ಯೆ ಅವರು ಉತ್ತರಖಾಂಡದಲ್ಲಿ ಜಾರಿಯಾದ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನವನ್ನು ಶ್ಲಾಘಿಸಿದ್ದಾರೆ. ಇಡೀ ದೇಶದಲ್ಲಿ ಈ ರೀತಿಯ ಕಾನೂನು ಜಾರಿಯಾಗಬೇಕು ಎಂದರು.
#WATCH | On Gujarat Government to introduce Uniform Civil Code after Uttarakhand Government, TMC MP Shatrughan Sinha says, "Implementation of UCC in Uttarakhand, is prima facie, commendable. UCC must be there in the country and I am sure everyone will agree with me. But there are… pic.twitter.com/9jWW0VhQkU
— ANI (@ANI) February 4, 2025
ಮುಂದುವರೆದು ಮಾತನಾಡಿರುವ ಅವರು ದೇಶದ ಅನೇಕ ಭಾಗಗಳಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿದೆ. ಗೋಮಾಂಸ ಮಾತ್ರವಲ್ಲ, ಮಾಂಸಾಹಾರವನ್ನು ದೇಶದಲ್ಲಿ ನಿಷೇಧಿಸಬೇಕು ಎಂದು ನಾನು ಭಾವಿಸುತ್ತೇನೆ. ಆದರೆ ಈಶಾನ್ಯ ಸೇರಿದಂತೆ ಕೆಲವು ಸ್ಥಳಗಳಲ್ಲಿ ಗೋಮಾಂಸ ಸೇವಿಸುವುದು ಇನ್ನೂ ಕಾನೂನುಬದ್ಧವಾಗಿದೆ. ಇದನ್ನು ಈಶಾನ್ಯದಲ್ಲಿ ತಿನ್ನುವುದು ಸರಿ, ಆದರೆ ಉತ್ತರ ಭಾರತದಲ್ಲಿ ಅಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Hema Malini: ಕುಂಭಮೇಳ ಕಾಲ್ತುಳಿತ ಪ್ರಕರಣ ದೊಡ್ಡ ಸಂಗತಿಯೇನಲ್ಲ; ಮಾತಿನ ಭರದಲ್ಲಿ ಹೇಮಾ ಮಾಲಿನಿ ಎಡವಟ್ಟು!
ದೆಹಲಿ ಚುನಾವಣೆ ಹಿನ್ನೆಲೆ ಆಮ್ ಆದ್ಮಿ ಪರ ಶತ್ರುಘ್ನ ಸಿನ್ಹಾ ಕಳೆದ ವಾರ ಮತ ಪ್ರಚಾರ ಮಾಡಿದ್ದರು.