ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sheikh Hasina: ಬಾಂಗ್ಲಾದೇಶದ ರಾಜಕೀಯ ಸ್ಥಿರಗೊಳಿಸಲು ಭಾರತದ ಪಾತ್ರ ಮುಖ್ಯ: ಶೇಖ್ ಹಸೀನಾ

ಬಾಂಗ್ಲಾದೇಶದಲ್ಲೂ ಪಾಕಿಸ್ತಾನ ಮಾದರಿಯ ಆಡಳಿತ ಅನುಷ್ಠಾನಗೊಳ್ಳುತ್ತಿದೆ. ಇದನ್ನು ತಡೆಯುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬೇಕಿದೆ. ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಢಾಕಾ ರಾಜಕೀಯ ಅಸ್ಥಿರತೆಯ ಅಪಾಯವನ್ನು ಎದುರಿಸುತ್ತಿದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಎಚ್ಚರಿಸಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಭಾರತ ಬಾಂಗ್ಲಾದೇಶದ ಸ್ಥಿರ ಸ್ನೇಹಿತ ಎಂದು ಹೇಳಿದ್ದಾರೆ.

ಶೇಖ್ ಹಸೀನಾ (ಸಂಗ್ರಹ ಚಿತ್ರ)

ನವದೆಹಲಿ: ಮುಹಮ್ಮದ್ ಯೂನಸ್ (Muhammad Yunus) ನೇತೃತ್ವದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ (Bangladesh) ಸರ್ಕಾರ ಅಸ್ಥಿರವಾಗಿದೆ. ಇದು ದೇಶವನ್ನು ಪಾಕಿಸ್ತಾನ (Pakistan) ಶೈಲಿಯ ಮಿಲಿಟರಿ ಆಡಳಿತದ ಕಡೆಗೆ ದೂಡುತ್ತಿದೆ. ಇದನ್ನು ತಡೆಯುವುದು ಭಾರತದಿಂದ ಮಾತ್ರ ಸಾಧ್ಯ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ (Bangladesh Former Prime Minister) ಶೇಖ್ ಹಸೀನಾ (Sheikh Hasina) ಹೇಳಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಭಾರತ ಬಾಂಗ್ಲಾದೇಶದ ಸ್ಥಿರ ಸ್ನೇಹಿತ ರಾಷ್ಟ್ರವಾಗಿದೆ. ಇಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಭಾರತ ಪ್ರಮುಖ ಪಾತ್ರವಹಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಬಾಂಗ್ಲಾದೇಶಿಗಳು ತಮ್ಮದೇ ಆದ ಪ್ರಜಾಪ್ರಭುತ್ವ ಮಾದರಿಯ ಸರ್ಕಾರವನ್ನು ಆಯ್ಕೆ ಮಾಡುವಲ್ಲಿ ಭಾರತ ಬೆಂಬಲವನ್ನು ನೀಡಬೇಕು ಎಂದು ನಾವು ಕೇಳಿಕೊಳ್ಳುತ್ತೇವೆ ಎಂದಿರುವ ಹಸೀನಾ, ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ಶೈಲಿಯ ಆಡಳಿತ ಜಾರಿಯಾಗದಂತೆ ತಡೆಯಲು ಭಾರತದ ಪಾತ್ರ ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: IPL 2026: ಕೆಕೆಆರ್‌ ತಂಡಕ್ಕೆ ಶೇನ್ ವ್ಯಾಟ್ಸನ್ ಸಹಾಯಕ ಕೋಚ್ ಆಗಿ ಸೇರ್ಪಡೆ

ಬಾಂಗ್ಲಾದೇಶದ ಆಡಳಿತದ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಲೇ ಇರುವ ಅವರು, ಬಾಂಗ್ಲಾದೇಶದಲ್ಲಿ ಈಗ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಬದಲಾಗುತ್ತಿವೆ. ಹಿಂದಿನಿಂದಲೂ ಭಾರತವು ಬಾಂಗ್ಲಾದೇಶದ ಅತ್ಯುತ್ತಮ ಮಿತ್ರ ರಾಷ್ಟ್ರವಾಗಿದೆ. ಇದರಿಂದಾಗಿಯೇ ಬಾಂಗ್ಲಾದೇಶದಲ್ಲಿ ಸ್ಥಿರ, ಪ್ರಜಾಪ್ರಭುತ್ವ ಆಡಳಿತ ಇಂದಿಗೂ ಉಳಿದಿದೆ ಎಂದು ಅವರು ಹೇಳಿದ್ದಾರೆ.

ಅಪಾಯದ ಕ್ಷಣದಲ್ಲಿ ಭಾರತ ನನ್ನನ್ನು ಸ್ವಾಗತಿಸಿದೆ. ಇದಕ್ಕಾಗಿ ನಾನು ಭಾರತೀಯರಿಗೆ ಕೃತಜ್ಞಳಾಗಿದ್ದೇನೆ ಎಂದಿರುವ ಅವರು, ಭಾರತದೊಂದಿಗೆ ಸಂಬಂಧ ಸ್ಥಾಪನೆಯಲ್ಲಿ ಯೂನಸ್ ಅವರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಅವರ ಸ್ವಂತ ನೀತಿಗಳು ಕಾರಣ. ಅವರ ಉಗ್ರಗಾಮಿ ಯೋಜನೆಗಳು, ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ಅವರ ವೈಫಲ್ಯ, ಭಾರತ ವಿರೋಧಿ ಹೇಳಿಕೆಗಳು ಇದಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.

ತಾವು ಬಾಂಗ್ಲಾದೇಶದಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಭಾರತವು ರಾಜತಾಂತ್ರಿಕ ಬೆಂಬಲವನ್ನು ನೀಡಿದೆ. ಹೊಸ ಸರ್ಕಾರದ ಆಡಳಿತಾವಧಿಯಲ್ಲಿ ಅಲ್ಲಿ ಅಲ್ಪಸಂಖ್ಯಾತರ ಮೇಲಾಗುತ್ತಿರುವ ಕಿರುಕುಳವನ್ನು ಎತ್ತಿ ತೋರಿಸಿದೆ ಎಂದ ಅವರು, ಅವಾಮಿ ಲೀಗ್ ಪಕ್ಷವು ಬಾಂಗ್ಲಾದೇಶ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಇದನ್ನು ಅಲ್ಲಿ ಮತ್ತೆ ಕಟ್ಟುವ ಅಗತ್ಯವಿಲ್ಲ. ಈ ಪಕ್ಷಕ್ಕೆ ಲಕ್ಷಾಂತರ ಸಾಮಾನ್ಯ ಬಾಂಗ್ಲಾದೇಶಿಗರ ಬೆಂಬಲವಿದೆ. ಇದುವೇ ಭಾರತ ಮತ್ತು ಬಾಂಗ್ಲಾದೇಶವನ್ನು ಬೆಸೆಯುವ ಸಂಬಂಧವಾಗಿದೆ. ಇದು ಎಂದಿಗೂ ಬದಲಾಗುವುದಿಲ್ಲ ಎಂದು ಹೇಳಿದರು.

ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಮಾದರಿಯ ಆಡಳಿತವನ್ನು ಮರು ಸ್ಥಾಪನೆ ಮಾಡದೇ ಇದ್ದಾರೆ ಬಾಂಗ್ಲಾದೇಶವು ಉಗ್ರಗಾಮಿ ಪ್ರಭಾವಕ್ಕೆ ಒಳಗಾಗುತ್ತದೆ. ಇದರಿಂದ ಭಾರಿ ಅಪಾಯವಿದೆ ಎಂದ ಅವರು, ಯೂನಸ್ ವಾಸ್ತವವಾಗಿ ಹಿಜ್ಬ್-ಉತ್ ತಹ್ರೀರ್ ಉಗ್ರಗಾಮಿಗಳು ನಡೆಸುವ ಆಡಳಿತದ ನಾಯಕನಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: MB Patil: 4 ರೈಲು ನಿಲ್ದಾಣಗಳಿಗೆ ಸಂತರ ಹೆಸರು- ಕೇಂದ್ರಕ್ಕೆ ಪತ್ರ ಬರೆದ ಎಂ.ಬಿ. ಪಾಟೀಲ್‌

ಭಾರತ ಸೇರಿದಂತೆ ಇತರ ಪ್ರಜಾಪ್ರಭುತ್ವ ರಾಷ್ಟ್ರಗಳು ಬಾಂಗ್ಲಾದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಒತ್ತಡ ಹೇರವುದನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದ ಅವರು, ಬಾಂಗ್ಲಾದೇಶದ ರಾಜಕೀಯ ವ್ಯವಸ್ಥೆಯನ್ನು ಸರಿಯಾದ ದಾರಿಗೆ ತರಲು ಏಕೈಕ ಮಾರ್ಗವೆಂದರೆ ಸರ್ಕಾರವನ್ನು ಆಯ್ಕೆ ಮಾಡಲು ಜನರ ಒಪ್ಪಿಗೆ ಕೇಳುವುದಾಗಿದೆ ಎಂದರು.

ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಭಾರತದ ಬೆಂಬಲ ದೇಶದ ಭವಿಷ್ಯವನ್ನು ಮಾತ್ರ ಸದೃಢಗೊಳಿಸುವುದಲ್ಲದೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯನ್ನು ಖಚಿತಪಡಿಸಿಕೊಳ್ಳಲು ಕೂಡ ಸಹಾಯವಾಗುವುದು ಎಂದು ಅವರು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author