ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sheikh Hasina: ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ಮರಳುತ್ತಾರಾ ಶೇಖ್ ಹಸೀನಾ?

ದೇವರು ನನ್ನನ್ನು ಒಂದು ಕಾರಣಕ್ಕಾಗಿ ಜೀವಂತವಾಗಿಟ್ಟಿದ್ದಾನೆ ಮತ್ತು ನ್ಯಾಯ ಸಿಗುವ ದಿನ ಬಂದೇಬರುತ್ತದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಹೇಳಿದ್ದಾರೆ. ಈ ಮೂಲಕ ಅವರು ತಮ್ಮ ಬೆಂಬಲಿಗರಿಗೆ ತಾವು ದೇಶಕ್ಕೆ ಮರಳಿ ಬರುವುದಾಗಿ ಸ್ಪಷ್ಟ ಸಂದೇಶ ನೀಡಿದ್ದು, ತಮ್ಮ ಪಕ್ಷದ ಅವಾಮಿ ಲೀಗ್ ಸದಸ್ಯರನ್ನು ಗುರಿಯಾಗಿಸಿಕೊಂಡು ಶಿಕ್ಷೆ ನೀಡುತ್ತಿರುವವರನ್ನು ನ್ಯಾಯಲಯದ ಕಟಕಟೆಗೆ ತರುವುದಾಗಿ ತಿಳಿಸಿದ್ದಾರೆ.

ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ಮರಳುತ್ತಾರಾ ಶೇಖ್ ಹಸೀನಾ?

ನವದೆಹಲಿ: ದೇವರು ನನ್ನನ್ನು ಒಂದು ಕಾರಣಕ್ಕಾಗಿ ಜೀವಂತವಾಗಿಟ್ಟಿದ್ದಾನೆ ಮತ್ತು ನ್ಯಾಯ ಸಿಗುವ ದಿನ ಬಂದೇಬರುತ್ತದೆ ಎಂದು ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ (Former PM ) ಶೇಖ್ ಹಸೀನಾ (Sheikh Hasina) ಹೇಳಿದ್ದಾರೆ. ಈ ಮೂಲಕ ಅವರು ತಮ್ಮ ಬೆಂಬಲಿಗರಿಗೆ ತಾವು ದೇಶಕ್ಕೆ ಮರಳಿ ಬರುವುದಾಗಿ ಸ್ಪಷ್ಟ ಸಂದೇಶ ನೀಡಿದ್ದು, ತಮ್ಮ ಪಕ್ಷದ ಅವಾಮಿ ಲೀಗ್ (Awami League ) ಸದಸ್ಯರನ್ನು ಗುರಿಯಾಗಿಸಿಕೊಂಡು ಶಿಕ್ಷೆ ನೀಡುತ್ತಿರುವವರನ್ನು ನ್ಯಾಯಲಯದ ಕಟಕಟೆಗೆ ತರುವುದಾಗಿ ತಿಳಿಸಿದ್ದಾರೆ. ದೇಶಾದ್ಯಂತ ವಿರೋಧ ಎದುರಾದ ಬಳಿಕ ಅಧಿಕಾರ ತ್ಯಜಿಸಿ ಭಾರತಕ್ಕೆ ಪಲಾಯನ ಮಾಡಿ ಬಂದಿರುವ ಅವಾಮಿ ಲೀಗ್ ಅಧ್ಯಕ್ಷೆ ಸಾಮಾಜಿಕ ಮಾಧ್ಯಮ ಸಂವಾದದಲ್ಲಿ ತಮ್ಮ ಪಕ್ಷದ ನಾಯಕರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಿದರು.

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರನ್ನು ಗುರಿಯಾಗಿಸಿಕೊಂಡ ಅವರು, ಯೂನಸ್ ಜನರನ್ನು ಎಂದಿಗೂ ಪ್ರೀತಿಸದ ವ್ಯಕ್ತಿ ಎಂದು ಕರೆದರು. ಯೂನಸ್ ಹೆಚ್ಚಿನ ಬಡ್ಡಿದರಗಳಿಗೆ ಸಣ್ಣ ಮೊತ್ತವನ್ನು ಸಾಲವಾಗಿ ನೀಡಿದರು ಮತ್ತು ಆ ಹಣವನ್ನು ವಿದೇಶದಲ್ಲಿ ಐಷಾರಾಮಿಯಾಗಿ ಬದುಕಲು ಬಳಸಿಕೊಂಡರು ಎಂದು ಆರೋಪಿಸಿದ ಹಸೀನಾ, ಆಗ ನಮಗೆ ಅವರ ಯೋಜನೆ ಅರ್ಥವಾಗಿರಲಿಲ್ಲ. ಹೀಗಾಗಿ ಅವರಿಗೆ ನಾವು ತುಂಬಾ ಸಹಾಯ ಮಾಡಿದ್ದೇವೆ. ಆದರೆ ಅದನ್ನು ಅವರು ಜನರ ಪ್ರಯೋಜನಕ್ಕೆ ಬಳಸಲಿಲ್ಲ. ತಮಗೆ ಒಳ್ಳೆಯದನ್ನು ಮಾಡಿಕೊಂಡರು. ಅನಂತರ ಅಧಿಕಾರಕ್ಕಾಗಿ ಆಸೆ ಪಟ್ಟು ಮರಳಿ ಬಂದರು. ಅದು ಈಗ ಬಾಂಗ್ಲಾದೇಶವನ್ನು ಸುಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Tahavur Rana: 26/11 ಮುಂಬೈ ದಾಳಿಯ ಸಂಚು- ತಹವ್ವೂರ್ ರಾಣಾ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ

ಭಯೋತ್ಪಾದಕ ರಾಷ್ಟ್ರವಾಗಿರುವ ಬಾಂಗ್ಲಾದಲ್ಲಿ ನಮ್ಮ ನಾಯಕರು ಮತ್ತು ಕಾರ್ಯಕರ್ತರನ್ನು ಹಿಂಸಾತ್ಮಕವಾಗಿ ಕೊಲ್ಲಲಾಗುತ್ತಿದೆ. ಅವಾಮಿ ಲೀಗ್, ಪೊಲೀಸರು, ವಕೀಲರು, ಪತ್ರಕರ್ತರು, ಕಲಾವಿದರು ಹೀಗೆ ಎಲ್ಲರನ್ನೂ ಗುರಿ ಮಾಡಲಾಗಿದೆ ಎಂದರು. ಮಾಧ್ಯಮಗಳ ಮೇಲೂ ನಿರ್ಬಂಧ ಹೇರಲಾಗಿದೆ. ನಾನು ನನ್ನ ತಂದೆ, ತಾಯಿ, ಸಹೋದರ ಎಲ್ಲರನ್ನೂ ಒಂದೇ ದಿನದಲ್ಲಿ ಕಳೆದುಕೊಂಡೆ. ಬಳಿಕ ಅವರು ನಮ್ಮನ್ನು ದೇಶಕ್ಕೆ ಮರಳಿ ಬರಲು ಬಿಡಲಿಲ್ಲ. ನಮ್ಮವರನ್ನು ಕಳೆದುಕೊಳ್ಳುವ ನೋವು ಏನೆಂದು ನನಗೆ ತಿಳಿದಿದೆ. ಅಲ್ಲಾಹ್ ನನ್ನನ್ನು ರಕ್ಷಿಸಿದ್ದಾನೆ. ಬಹುಶಃ ಅವನು ನನ್ನ ಮೂಲಕ ಏನಾದರೂ ಒಳ್ಳೆಯದನ್ನು ಮಾಡಲು ಬಯಸುತ್ತಾನೆ. ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಇದುವೇ ನನ್ನ ಗುರಿ ಎಂದು ಹಸೀನಾ ತಿಳಿಸಿದರು.