ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಫ್ರಾನ್ಸ್ ಶಿಕ್ಷಣ ಸಚಿವರಿಗೆ 'ಬಿದ್ರಿವೇರ್' ಉಡುಗೊರೆ; ಬೀದರ್‌ನ ಐತಿಹಾಸಿಕ ಕಲೆಯ ಹಿರಿಮೆ ಹೆಚ್ಚಿಸಿದ ಸಚಿವ ಜೋಶಿ

Pralhad Joshi: ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ, ಫ್ರಾನ್ಸ್‌ ದೇಶದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಚಿವ ಫಿಲಿಪ್ ಬ್ಯಾಪ್ಟಿಸ್ಟ್ ಅವರಿಗೆ ಕರ್ನಾಟಕದ ವಿಶಿಷ್ಟ 'ಬಿದ್ರಿವೇರ್' ಅನ್ನು ನೆನಪಿನ ಕಾಣಿಕೆಯಾಗಿ ನೀಡಿ ಕರುನಾಡಿನ ಬಿದ್ರಿ ಕಲೆಯ ಹಿರಿಮೆ ಹೆಚ್ಚಿಸಿದ್ದಾರೆ.

ನವದೆಹಲಿ, ಸೆ.28: ಫ್ರಾನ್ಸ್ ಶಿಕ್ಷಣ ಸಚಿವರಿಗೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ ಅವರು (Pralhad Joshi) ಕರ್ನಾಟಕದ ವಿಶಿಷ್ಟ 'ಬಿದ್ರಿವೇರ್' ಅನ್ನು ನೆನಪಿನ ಕಾಣಿಕೆಯಾಗಿ ನೀಡಿ ಕರುನಾಡಿನ ಬಿದ್ರಿ ಕಲೆಯ ಹಿರಿಮೆ ಹೆಚ್ಚಿಸಿದ್ದಾರೆ. ದೆಹಲಿಯಲ್ಲಿ ಸೋಮವಾರ ತಮ್ಮನ್ನು ಭೇಟಿ ಮಾಡಿದ ಫ್ರಾನ್ಸ್‌ ದೇಶದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಚಿವ ಫಿಲಿಪ್ ಬ್ಯಾಪ್ಟಿಸ್ಟ್ ಅವರನ್ನು ಆದರದಿಂದ ಸ್ವಾಗತಿಸಿದ ಜೋಶಿ, ಕೊನೆಗೆ ನೆನಪಿನ ಕಾಣಿಕೆಯಾಗಿ 'ಬಿದ್ರಿ ವೇರ್' ಕಲಾಕೃತಿ ನೀಡಿ ಶುಭ ಕೋರಿದರು.

ಫ್ರಾನ್ಸ್‌ ದೇಶದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಚಿವ ಫಿಲಿಪ್ ಬ್ಯಾಪ್ಟಿಸ್ಟ್ ಅವರಿಗೆ ಕರ್ನಾಟಕದ ಸಂಪ್ರದಾಯಿಕ ಈ 'ಬಿದ್ರಿವೇರ್' ಕಲೆ, ಕಲಾಕೃತಿ ವೈಶಿಷ್ಟ್ಯತೆ ಕುರಿತು ವಿಶ್ಲೇಷಣೆ ನೀಡಿ ಗಮನ ಸೆಳೆದರು.‌

ದೇಶದಲ್ಲಿ ಆರೋಗ್ಯ-ಉನ್ನತ ಶಿಕ್ಷಣ ಸೇವೆಗಳ ವಿಸ್ತರಣೆಗೆ ಒತ್ತು: ಸಚಿವ ಪ್ರಲ್ಹಾದ್‌ ಜೋಶಿ

'ಬಿದ್ರಿ ವೇರ್' ಗೆ 500 ವರ್ಷಗಳ ಸುದೀರ್ಘ ಇತಿಹಾಸವಿದ್ದು, ವಿಶಿಷ್ಠ ಕಲೆ, ಸಂಸ್ಕೃತಿಗೆ ಹೆಸರಾದ ನಮ್ಮ ಕರ್ನಾಟಕದ ಬೀದರ್‌ನ ಅಪರೂಪದ ಕಲಾಕೃತಿಯಾಗಿದೆ ಎನ್ನುತ್ತಲೇ ಫ್ರಾನ್ಸ್ ಶಿಕ್ಷಣ ಸಚಿವರು ಅಭಿಮಾನ ತೋರಿದರು.