ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶದಲ್ಲಿ ಆರೋಗ್ಯ-ಉನ್ನತ ಶಿಕ್ಷಣ ಸೇವೆಗಳ ವಿಸ್ತರಣೆಗೆ ಒತ್ತು: ಸಚಿವ ಪ್ರಲ್ಹಾದ್‌ ಜೋಶಿ

Pralhad Joshi: ಇಂದು ಭಾರತದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ದಾಖಲಿಸುತ್ತಿದೆ. ದೇಶ, ಸಮಾಜದಲ್ಲಿ ಶಾಂತಿ ಮತ್ತು ಸುಸ್ಥಿರತೆ ಇದ್ದಾಗ ಮಾತ್ರ ಸಮೃದ್ಧಿ ಕಾಣಲು ಸಾಧ್ಯ. ಅದರಂತೆ ಮೋದಿ ಅವರ ಸರ್ಕಾರ ಆರೋಗ್ಯ, ಶಿಕ್ಷಣ, ರಕ್ಷಣೆ, ಶಾಂತಿ-ಸುವ್ಯವಸ್ಥೆಗೆ ಆದ್ಯತೆ ನೀಡಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದ್ದಾರೆ.

ದೇಶದಲ್ಲಿ ಆರೋಗ್ಯ-ಉನ್ನತ ಶಿಕ್ಷಣ ಸೇವೆಗಳ ವಿಸ್ತರಣೆಗೆ ಒತ್ತು: ಜೋಶಿ

-

Profile
Siddalinga Swamy Sep 19, 2026 10:30 PM

ಹುಬ್ಬಳ್ಳಿ, ಸೆ.19: 2047ರ ವಿಕಸಿತ ಭಾರತ ನಿರ್ಮಾಣಕ್ಕೆ ಆರೋಗ್ಯವಂತ ಮತ್ತು ಉನ್ನತ ಶಿಕ್ಷಣ ಸಮುದಾಯದ ಅಗತ್ಯವಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಆರೋಗ್ಯ ಸೇವೆ, ಉನ್ನತ ಶಿಕ್ಷಣ ಸೇವೆಗಳ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು. ಹುಬ್ಬಳ್ಳಿಯಲ್ಲಿ ಶನಿವಾರ, ಕೆಎಲ್ಇ ಸಂಸ್ಥೆ ಆರಂಭಿಸಿದ JGMMM ಕಾಲೇಜ್ ಹಾಗೂ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಉದ್ಘಾಟನೆ ನೆರವೇರಿಸಿ, ಅವರು ಮಾತನಾಡಿದರು.

ಇಂದು ಭಾರತದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ದಾಖಲಿಸುತ್ತಿದೆ. ದೇಶ, ಸಮಾಜದಲ್ಲಿ ಶಾಂತಿ ಮತ್ತು ಸುಸ್ಥಿರತೆ ಇದ್ದಾಗ ಮಾತ್ರ ಸಮೃದ್ಧಿ ಕಾಣಲು ಸಾಧ್ಯ. ಅದರಂತೆ ಮೋದಿ ಅವರ ಸರ್ಕಾರ ಆರೋಗ್ಯ, ಶಿಕ್ಷಣ, ರಕ್ಷಣೆ, ಶಾಂತಿ-ಸುವ್ಯವಸ್ಥೆಗೆ ಆದ್ಯತೆ ನೀಡಿದೆ ಎಂದು ಪ್ರತಿಪಾದಿಸಿದರು.

2047ರ ವೇಳೆಗೆ ಭಾರತವನ್ನು ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಗೆ ಬೆಂಬಲವಾಗಿ ಆರೋಗ್ಯವಂತ ಜನಸಮುದಾಯ ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ದೇಶದಲ್ಲಿ ಮೆಡಿಕಲ್, ಸಂಶೋಧನೆ ಮತ್ತು ಆರೋಗ್ಯ ಸೇವೆಗಳ ವಿಸ್ತರಣೆಗೆ ಪ್ರಾಮುಖ್ಯತೆ ನೀಡಿದ್ದಾರೆ ಎಂದರು.

ದೆಹಲಿ ವಿವಿ ಚುನಾವಣೆ ಗೆದ್ದ ABVP ಅಭ್ಯರ್ಥಿಗಳಿಗೆ ಸಚಿವ ಪ್ರಲ್ಹಾದ್‌ ಜೋಶಿ ಅಭಿನಂದನೆ

ಪರಿಣಿತ ವೈದ್ಯರ ಅಗತ್ಯ ವಿಶ್ವಕ್ಕಿದೆ: ಪ್ರಸ್ತುತದಲ್ಲಿ ಇಡೀ ವಿಶ್ವಕ್ಕೇ ಪರಿಣಿತ ವೈದ್ಯರ, ತಂತ್ರಜ್ಞರ ಅಗತ್ಯತೆಯಿದೆ. ಭಾರತೀಯ ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರದ ಮೇಲೆ ಜಾಗತಿಕ ಮಟ್ಟದ ವಿಶ್ವಾಸವಿದೆ. ಹೀಗಾಗಿ ದೇಶದ ಯುವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಂಡು ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ ಅಗತ್ಯವಿತ್ತು. ಕೆಎಲ್‌ಇ ಸಂಸ್ಥೆ ಮೂಲಕ ಇದನ್ನು ಒದಗಿಸಲಾಗುತ್ತಿದೆ. ಪ್ರಭಾಕರ ಕೋರೆ ಅವರ ಸಾರಥ್ಯದಲ್ಲಿ ಪ್ರತಿಷ್ಠಿತ ಕೆಎಲ್ಇ ಸಂಸ್ಥೆ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಲ್ಲದೆ, ಜನಸಾಮಾನ್ಯರ ಸೇವೆಯಲ್ಲಿ ಸದಾ ನಿರತವಾಗಿದೆ ಎಂದು ಶ್ಲಾಘಿಸಿದರು.

ನಕ್ಸಲ್ ಮುಕ್ತ ದೇಶವಾಗಿದೆ ಭಾರತ: ಮೂಲ ಸೌಕರ್ಯಗಳ ಅಭಿವೃದ್ಧಿಯೊಂದಿಗೆ ಗುರುತರ ಹೆಜ್ಜೆ ಇರಿಸಿರುವ ಭಾರತ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ದಕ್ಷ ಆಡಳಿತದಲ್ಲಿ ಇಂದು ನಕ್ಸಲ್‌ ಮುಕ್ತವಾಗಿದ್ದು, ದೇಶದ ಕಾನೂನು ಸುವ್ಯವಸ್ಥೆ ಸುಧಾರಿಸಿದೆ. ಫಾರ್ಮಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಗತ್ತಿನಲ್ಲೇ ಮುನ್ನಡೆ ಸಾಧಿಸುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಹ ಅಷ್ಟೇ ವೇಗವಾಗಿ ಬೆಳೆಯುತ್ತ ಆತ್ಮನಿರ್ಭರತೆಯನ್ನು ಸಾಧಿಸುತ್ತಿದೆ ಎಂದು ಪ್ರತಿಪಾದಿಸಿದರು.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸ್ವಯಂ ರಕ್ತದಾನ; ಯುವ ಸಮುದಾಯಕ್ಕೆ ಪ್ರೇರಣೆಯಾದ ಶಿಕ್ಷಣ ಸಚಿವ

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸಮಸ್ಯೆ ಪರಿಹಾರಕ್ಕೆ ಕ್ರಮ

ಈ ವೇಳೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಬಗ್ಗೆ ಪ್ರಸ್ತಾಪಿಸಿದ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ, ಇದರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.