ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಶ್ಚಿಮ ಬಂಗಾಳ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಕೆಲವೇ ಗಂಟೆಗಳಲ್ಲಿ ಮತ್ತೆ ಸ್ಪರ್ಧೆಗಿಳಿದ ಮಮತಾ ಬ್ಯಾನರ್ಜಿ ಪಕ್ಷದ ಅಭ್ಯರ್ಥಿ

ಪಶ್ಚಿಮ ಬಂಗಾಳ ಉಪಚುನಾವಣೆ ಕಣವೀಗ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಒಮ್ಮೆ ಚುನಾವಣಾ ಕಣದಿಂದ ಹಿಂದೆ ಸರಿದ ಕೆಲವೇ ಗಂಟೆಗಳಲ್ಲಿ ಮತ್ತೆ ಸ್ಪರ್ಧೆ ನಡೆಸುವುದಾಗಿ ಘೋಷಿಸಿದರು. ಅವರು ಚುನಾವಣೆ ಕಣದಿಂದ ಹಿಂದಕ್ಕೆ ಸರಿಯುವ ಮೊದಲು ನಂದಿಗ್ರಾಮ ಕ್ಷೇತ್ರದ ಅಭ್ಯರ್ಥಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.

ಸಂಗ್ರಹ ಚಿತ್ರ

ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ (Mamata Banerjee) ಬಣದ ನಂದಿಗ್ರಾಮ ಕ್ಷೇತ್ರದ ಅಭ್ಯರ್ಥಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Chief Minister Suvendu Adhikari) ಅವರನ್ನು ಭೇಟಿ ಮಾಡಿದ ಬಳಿಕ ರೇಜಿನಗರದ (Rejinagar) ಅಭ್ಯರ್ಥಿ (bypoll) ಉಪಚುನಾವಣೆ (west bengal by poll election) ಕಣದಿಂದ ಹಿಂದಕ್ಕೆ ಸರಿದು ಕೆಲವು ಗಂಟೆಗಳ ಬಳಿಕ ತಮ್ಮ ನಿರ್ಧಾರವನ್ನು ಬದಲಾಯಿಸಿ ತಾವು ಸ್ಪರ್ಧೆಯಲ್ಲಿ ಮುಂದುವರಿಯುವುದಾಗಿ ಘೋಷಿಸಿ ಘಟನೆ ನಡೆದಿದೆ. ನಂದಿಗ್ರಾಮ ಕ್ಷೇತ್ರದ ಮಮತಾ ಬ್ಯಾನರ್ಜಿ ಪರ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ಅವರು ಶುಕ್ರವಾರ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ಬಳಿಕ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರು. ಇದರ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ ಅವರು ಉಪಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸಿದರು.

ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಆಡಳಿತವು ಮಮತಾ ಬ್ಯಾನರ್ಜಿ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಶನಿವಾರ ಬೆಳಗ್ಗೆ ರಬಿಯುಲ್ ಆಲಂ ಚೌಧರಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಾಗಿ ಘೋಷಿಸಿದ್ದರು.

ಕೇಂದ್ರ ಯುಪಿಐ ಶುಲ್ಕ ಪರಿಚಯಿಸುತ್ತಿದ್ದಂತೆ ಪೆಟ್ರೋಲ್‌ ಬಂಕ್‌ ಮಾಲಕರಿಂದ ಕಿರಿಕ್‌; 2 ಸಾವಿರ ರೂಪಾಯಿಗಿಂತ ಅಧಿಕ ಮೊತ್ತ ನಗದಾಗಿ ನೀಡುವಂತೆ ಗ್ರಾಹಕರ ಮೇಲೆ ಒತ್ತಡ

ಪಕ್ಷಕ್ಕೆ ಸಧ್ಯ ಅಧಿಕೃತ ಚಿಹ್ನೆ ಇಲ್ಲ. ಪಕ್ಷದ ಕಾರ್ಯಕರ್ತರಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ ಹೆಚ್ಚಿನವರು ಆ ಪ್ರದೇಶವನ್ನು ತೊರೆದಿದ್ದಾರೆ. ಒತ್ತಡದಿಂದಾಗಿ ತಾವು ಚುನಾವಣಾ ಕಣದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಪಕ್ಷದ ಹಿರಿಯ ನಾಯಕರು ಭೇಟಿಯಾದ ಬಳಿಕ ಮಧ್ಯಾಹ್ನದ ವೇಳೆಗೆ ಅವರು ತಾವು ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಘೋಷಿಸಿದರು.

ಮಮತಾ ಬ್ಯಾನರ್ಜಿ ಅವರ ಒತ್ತಾಯದ ಕಾರಣದಿಂದ ತಾವು ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾಗಿ ಹೇಳಿದ ಅವರು, ಮಮತಾ ಬ್ಯಾನರ್ಜಿ ಅವರು ನನ್ನೊಂದಿಗೆ ಮಾತನಾಡಿದ ಅನಂತರ ನಾನು ನನ್ನ ನಿರ್ಧಾರವನ್ನು ಮರುಪರಿಶೀಲಿಸಿದೆ ಎಂದು ತಿಳಿಸಿದರು.

ಮಮತಾ ಬ್ಯಾನರ್ಜಿ ಅವರಿಗೆ ಭಾರಿ ಹಿನ್ನಡೆ

ನಂದಿಗ್ರಾಮ ಮತ್ತು ರೆಜಿನಗರ ಎರಡೂ ಕ್ಷೇತ್ರಗಳ ಉಪ ಚುನಾವಣೆ ಅಕ್ಟೋಬರ್ 6 ರಂದು ನಡೆಯಲಿದೆ. ನಂದಿಗ್ರಾಮ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ಅವರು ಶುಕ್ರವಾರ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ಬಳಿಕ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರು. ಇದರ ಬಳಿಕ ಮಮತಾ ಬ್ಯಾನರ್ಜಿ ಅವರು ತಾವು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು 2007ರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ ಬಂಧಿಸಲಾಯಿತು.

ಚಿಕಾಗೋ ನ್ಯೂಮ್ಯಾಟಿಕ್‌ನಿಂದ ‘ಸಿಪಿಎಸ್ 950-300’ ವಾಯು ಸಂಕುಚಕ ಬಿಡುಗಡೆ: ಬೋರ್‌ವೆಲ್, ಗಣಿಗಾರಿಕೆ ಮತ್ತು ಸೌರ ಅಡಿಪಾಯ ತೋಡಿಕೆಗಳಿಗೆ ಹೊಸ ಯಂತ್ರ

ಚುನಾವಣಾ ಆಯೋಗವು ಗುರುವಾರ 'ತೃಣಮೂಲ' ಎಂಬ ಹೆಸರು ಮತ್ತು ಚಿಹ್ನೆಯ ಬಳಕೆಯನ್ನು ತಡೆ ಹಿಡಿದಿದೆ. ಹೀಗಾಗಿ ಮಮತಾ ಬ್ಯಾನರ್ಜಿ ಬಣ ಅಥವಾ ರಿತಬ್ರತ ಬ್ಯಾನರ್ಜಿ ಅವರ ಬಣ ಈ ಬಾರಿಯ ಉಪಚುನಾವಣೆಗಳಲ್ಲಿ ಅವುಗಳನ್ನು ಬಳಸುವಂತಿರಲಿಲ್ಲ.

ಮಧ್ಯಂತರ ವ್ಯವಸ್ಥೆಯಾಗಿ ಚುನಾವಣಾ ಆಯೋಗವು ಎರಡೂ ಬಣಗಳಿಗೆ ಹೊಸ ಹೆಸರು ಮತ್ತು ಚಿಹ್ನೆಗಳನ್ನು ನೀಡಿದೆ. ಮಮತಾ ಬ್ಯಾನರ್ಜಿ ಅವರ ಬಣವನ್ನು ಈಗ 'ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' ಹೆಸರು ನೀಡಿ "ಫುಟ್‌ಬಾಲ್ ಆಟಗಾರ"ನ ಚಿಹ್ನೆಯನ್ನು ನೀಡಿದರೆ ಅರೂಪ್ ರಾಯ್ ಮತ್ತು ರಿತಬ್ರತ ಬ್ಯಾನರ್ಜಿ ನೇತೃತ್ವದ ಗುಂಪಿಗೆ "ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್" ಎಂಬ ಹೆಸರು ಮತ್ತು "ಲಕೋಟೆ" (ಎನ್ವಲಪ್) ಚಿಹ್ನೆಯನ್ನು ನೀಡಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author