ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಲಸಿಗರಿಗೆ ಬೆಣ್ಣೆ, ಕನ್ನಡಿಗರಿಗೆ ಸುಣ್ಣ; ಇದು ಕಾಂಗ್ರೆಸ್‌ ಸರ್ಕಾರದ ಹೊಸ ಗ್ಯಾರಂಟಿ ಎಂದ ನಿಖಿಲ್

Nikhil Kumaraswamy: ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳನ್ನು ಸರ್ಕಾರವೇ ತೆರವುಗೊಳಿಸಿ, ಸರ್ಕಾರವೇ ಮುಂದೆ ನಿಂತು 11.20 ಲಕ್ಷ ರೂ.ಗಳ ಮನೆಗಳನ್ನು ಹಂಚಿಕೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಈ ಸಂಪೂರ್ಣ ಘಟನೆಯ ಹಿಂದೆ ಕೇರಳ ಕಾಂಗ್ರೆಸ್ ಹಸ್ತಕ್ಷೇಪ ಇದೆ ಎಂಬುದು ರಾಜ್ಯದ ಜನತೆಯ ಅರಿವಿಗೆ ಬಂದಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೂರಿದ್ದಾರೆ.

ವಲಸಿಗರಿಗೆ ಬೆಣ್ಣೆ, ಕನ್ನಡಿಗರಿಗೆ ಸುಣ್ಣ; ನಿಖಿಲ್ ಕಿಡಿ

ನಿಖಿಲ್ ಕುಮಾರಸ್ವಾಮಿ (ಸಂಗ್ರಹ ಚಿತ್ರ) -

Profile
Siddalinga Swamy Dec 30, 2025 9:45 PM

ಬೆಂಗಳೂರು, ಡಿ.30: ಕೋಗಿಲು ಲೇಔಟ್‌ನ ವಲಸಿಗ ನಿರಾಶ್ರಿತರಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಜನತೆಗೆ ಸುಣ್ಣ, ಹೊರ ರಾಜ್ಯದವರಿಗೆ ಬೆಣ್ಣೆ. ಇದು ಕಾಂಗ್ರೆಸ್ ಸರ್ಕಾರದ ಹೊಸ ವರ್ಷದ ಗ್ಯಾರಂಟಿ! ಎಂದು ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಉತ್ತರ ಕರ್ನಾಟಕದ ಕಲಬುರಗಿ, ಬೀದರ್‌, ವಿಜಯಪುರ, ಯಾದಗಿರಿ ಮೊದಲಾದ ಜಿಲ್ಲೆಗಳಲ್ಲಿ 117ಕ್ಕೂ ಅಧಿಕ ಹಳ್ಳಿಗಳು ಜಲಾವೃತವಾಗಿ, 20,000ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 14.58 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರು ಹಾಗೂ ನಿರಾಶ್ರಿತರ ಕಣ್ಣೀರು ಒರೆಸಲು ಹೋಗದ ಸರ್ಕಾರ, ಇಂದು ಬೆಂಗಳೂರಿನ ಕೋಗಿಲು ಬಡಾವಣೆಯ ನಿರಾಶ್ರಿತರ ಕಣ್ಣೀರು ಒರೆಸುತ್ತಿರುವುದು ಯಾವ ಕಾರಣಕ್ಕೆ? ಪ್ರಶ್ನಿಸಿದ್ದಾರೆ.

ಕೆ.ಜಿ ಹಳ್ಳಿಯಲ್ಲಿ 29 ದಲಿತರ ಮನೆಗಳನ್ನು ತೆರವು ಮಾಡಿದಾಗ ಈ ಸರ್ಕಾರಕ್ಕೆ ಕಣ್ಣು, ಕಿವಿ ಇರಲಿಲ್ಲವೇ? ಎಂದು ಕೇಳಿದರು. ಕೋಗಿಲೆ ಬಡಾವಣೆಯಲ್ಲಿ ಅಕ್ರಮ ಮನೆಗಳನ್ನು ಸರ್ಕಾರವೇ ತೆರವುಗೊಳಿಸಿ, ಸರ್ಕಾರವೇ ಮುಂದೆ ನಿಂತು 11.20 ಲಕ್ಷ ರೂ.ಗಳ ಮನೆಗಳನ್ನು ಹಂಚಿಕೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಈ ಸಂಪೂರ್ಣ ಘಟನೆಯ ಹಿಂದೆ ಕೇರಳ ಕಾಂಗ್ರೆಸ್ ಹಸ್ತಕ್ಷೇಪ ಇದೆ ಎಂಬುದು ರಾಜ್ಯದ ಜನತೆಯ ಅರಿವಿಗೆ ಬಂದಿದೆ ಎಂದು ಹೇಳಿದ್ದಾರೆ.



ಕೋಗಿಲು ಬಡಾವಣೆಯಲ್ಲಿ ಕಾಂಗ್ರೆಸ್ ನಾಯಕ ವಾಸಿಂ ಎಂಬುವರು ಅಕ್ರಮ ವಲಸಿಗರಿಂದ 4-5 ಲಕ್ಷ ರೂ. ಪಡೆದು ಅಗ್ರಿಮೆಂಟ್ ಮಾಡಿಕೊಂಡ ಬಗ್ಗೆ ಮಾಹಿತಿ ಇದ್ದು, ಈ ಕುರಿತು ಸರ್ಕಾರ ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Green gram procurement: ಹೆಸರು ಖರೀದಿ ಅವಧಿ ವಿಸ್ತರಣೆ; ಜೋಶಿ ಮನವಿಗೆ ಕೇಂದ್ರ ಸ್ಪಂದನೆ

ಈ ಕೂಡಲೇ ರಾಜ್ಯದ ಜನತೆಯ ಆಶೋತ್ತರಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುವ ಮೂಲಕ ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸೂರು, ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.