ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Varsha Bhavisya 2026: ಹೊಸ ವರ್ಷದಲ್ಲಿ ವೃಶ್ಚಿಕ ರಾಶಿಯವರಿಗಿದೆ ಶನಿಕಾಟ; ಇದುವೇ ನೋಡಿ ಪರಿಹಾರ

2026ರಲ್ಲಿ ಶನಿಯ ರಾಶಿ ಬದಲಾವಣೆ ಆಗದಿದ್ದರೂ, ಸೂರ್ಯ, ಮಂಗಳ, ಬುಧ ಸೇರಿದಂತೆ ಪ್ರಮುಖ ಗ್ರಹಗಳ ಸಂಚಾರವು ರಾಶಿಚಕ್ರದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ವಿಶೇಷವಾಗಿ ದ್ವಾದಶ ರಾಶಿಗಳಲ್ಲಿ ಎಂಟನೇ ಸ್ಥಾನದಲ್ಲಿರುವ ವೃಶ್ಚಿಕ/ಮಿಥುನ ರಾಶಿಯವರಿಗೆ 2026ರ ಹೊಸ ವರ್ಷದಲ್ಲಿ ಏರಿಳಿತಗಳ ಸಾಧ್ಯತೆ ಇದೆ. ಶನಿ ಉಪಟಳದ ಪ್ರಭಾವ ಇರುವುದೇ? ಜೀವನ, ಉದ್ಯೋಗ, ಆರೋಗ್ಯ ಹಾಗೂ ಹಣಕಾಸಿನ ಮೇಲೆ ಗ್ರಹ ಸಂಚಾರದ ಪರಿಣಾಮ ಹೇಗಿರಲಿದೆ ಎಂಬ ವಿವರ ಇಲ್ಲಿದೆ.

ಭಾರತೀಯ ಜೋತಿಷಿ ಹಾಗೂ ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ

ಬೆಂಗಳೂರು, ಜ. 15: 2026ರಲ್ಲಿ ಶನಿಯು ತನ್ನ ರಾಶಿಯನ್ನು ಬದಲಿಸದೇ ಇದ್ದರೂ ಸೂರ್ಯ, ಮಂಗಳ, ಬುಧ ಸೇರಿದಂತೆ ಪ್ರಮುಖ ಗ್ರಹಗಳ ಸ್ಥಾನ ಪಲ್ಲಟವಾಗಲಿದೆ. ಗ್ರಹಗಳ ಈ ಸಂಚಾರವು ಎಲ್ಲ ರಾಶಿ ಚಕ್ರದ ಜನರ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ದ್ವಾದಶ ರಾಶಿಗಳಲ್ಲಿ 8ನೇ ಸ್ಥಾನದಲ್ಲಿರುವ ವೃಶ್ಚಿಕ ಮಿಥುನ ರಾಶಿಯವರಿಗೆ 2026ರ ಹೊಸ ವರ್ಷ ಹೇಗಿರಲಿದೆ? ಶನಿ ಉಪಟಳವಿದೆಯಾ? ಎಂಬುವುದನ್ನು ತಿಳಿಯೋಣ ಬನ್ನಿ.

ಭಾರತೀಯ ಜೋತಿಷಿ ಹಾಗೂ ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ 'ವಿಶ್ವವಾಣಿ'ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಈ ರಾಶಿಯವರಿಗೆ ಹೊಸ ವರ್ಷದಲ್ಲಿ ರಾಹು ನಾಲ್ಕನೇ ಮನೆಯಲ್ಲಿ ಮತ್ತು ಕೇತು ಹತ್ತನೇ ಮನೆಯಲ್ಲಿ ಸಾಗುತ್ತಾರೆ. ಶನಿಯು ವರ್ಷವಿಡೀ ಐದನೇ ಮನೆಯಲ್ಲಿ ಇರಲಿದ್ದು, ವರ್ಷದ ಆರಂಭದಲ್ಲಿ ರಾಹುವಿನ ಅಧಿಪತಿ ಮಂಗಳನು ತನ್ನ ಉತ್ತುಂಗದಲ್ಲಿರುತ್ತಾನೆ.

ವಿಡಿಯೊ ಇಲ್ಲಿದೆ:



ಶನಿ ಕಾಟ ತಪ್ಪಿದ್ದಲ್ಲ

ವೃಶ್ಚಿಕ ರಾಶಿಯವರಿಗೆ ಈಗಾಗಲೇ ಪಂಚಮ ಶನಿ ಕಾಟ ನಡೆಯುತ್ತಿದ್ದು, 2026ರ ವರ್ಷವಿಡೀ ಶನೈಶ್ಚರನ ಕಾಟ ಇರಲಿದೆ. ಅಲ್ಲದೇ ಈ ರಾಶಿಯವರಿಗೆ 2028ರ ಮಾರ್ಚ್‌ವರೆಗೂ ತೊಂದರೆ ತಪ್ಪಿದ್ದಲ್ಲ. ಚಂದ್ರ ಹಾಗೂ ಶನೈಶ್ಚರ ಈ ಸಮಸ್ಯೆಗಳಿಗೆ ಮೂಲ ಕಾರಣವಾಗಲಿದ್ದಾರೆ. ಚಂದ್ರ ಇವರಿಗೆ ಭಾಗ್ಯದ ಮನೆಯ ಯಜಮಾನನೇ ಆಗಿದ್ದರೂ, ಶನೈಶ್ಚರ ಕಾಟದಿಂದ ಭಾಗ್ಯಕ್ಕೆ ತಲ್ಲಣಗಳು ಶುರವಾಗುತ್ತವೆ.

ಭಾಗ್ಯಕ್ಕೆ ಗುರು ಪ್ರವೇಶ

ಈ ರಾಶಿವರಿಗೆ ಜೂನ್ 2ರ ನಂತರ ಭಾಗ್ಯಕ್ಕೆ ಅಂದರೆ ಕರ್ಕಾಟಕ ರಾಶಿಗೆ ಗುರು ಪ್ರವೇಶ ಮಾಡಲಿದ್ದು, ಅಕ್ಟೋಬರ್ 30ರವರೆಗೆ ಅದೇ ಸ್ಥಾನದಲ್ಲಿ ಮುಂದುವರೆಯಲಿದ್ದಾನೆ. ಮತ್ತೆ 2027ರ ಜನವರಿಯಿಂದ ಮೇ ತಿಂಗಳ ಕೊನೆಯವರೆಗೂ ಮತ್ತೆ ಗುರು ಕರ್ಕಾಟಕ ರಾಶಿಗೆ ಬರಲಿದ್ದಾನೆ. ಈ ಅವಧಿಯು ವೃಶ್ಚಿಕ ರಾಶಿಯವರಿಗೆ ಅನುಕೂಲಕರವಾಗಿರಲಿದೆ.

ಬಂಧನ ಯೋಗದಿಂದ ಎಚ್ಚರವಾಗಿರಿ

ಶನೇಶ್ಚರನ ಕಾಟದಿಂದ ಬಂಧನ ಯೋಗ ಬರುವ ಸಾಧ್ಯಗಳಿದ್ದು, ವಿಶೇಷವಾಗಿ ವೃಶ್ಚಿಕ ರಾಶಿಯವರು ಈ ಬಂಧನ ಯೋಗದಿಂದ ಎಚ್ಚರವಾಗಿರಬೇಕು. ನಾವು ಮಾಡಿದ ತಪ್ಪುಗಳು ಅಥವಾ ಸುಳ್ಳು ಆರೋಪಗಳಿಂದ ಬಂಧನ ಆಗುವಂತಹ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಐಶಾರಾಮಿ ವಸ್ತು, ಜೀವನವೇ ಈ ರಾಶಿಯವರಿಗೆ ಬಂಧನದಲ್ಲಿರುವಂತೆ ಮಾಡಿಬಿಡುತ್ತವೆ.

2026: ತುಲಾ ರಾಶಿಯವರಿಗೆ ದುಸ್ವಪ್ನಗಳ ಕಾಟ! ಮಕ್ಕಳ ಬಗ್ಗೆ ಎಚ್ಚರವಹಿಸಿ

ಮಕ್ಕಳ ಬಗ್ಗೆ ಗಮನಹರಿಸಿ

ವೃಶ್ಚಿಕ ರಾಶಿಯವರಿಗೆ ಪಂಚಮ ಶನಿ ಕಾಟ ಇರುವುದರಿಂದ ಮಕ್ಕಳ ಬಗ್ಗೆ ಇವರು ಹೆಚ್ಚಿನ ಗಮನ ಹರಿಸಬೇಕು. ನಾವು ಪೂರ್ವದಲ್ಲಿ ಮಾಡಿದ ಪುಣ್ಯ ಕರ್ಮಗಳ ಫಲದದಿಂದ ಹೊಂದಬೇಕಾದ ಸುಹಾಸಕರತೆಗೆ ಭಂಗ ಬಂದು ಪ್ರಾರಬ್ಧ ಎದುರಿಸಬೇಕಾಗುತ್ತದೆ.

ಆರ್ಥಿಕ ವಿಚಾರದಲ್ಲೂ ಬೇಕು ಶಿಸ್ತು

ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಈ ರಾಶಿಯವರಿಗೆ ಹೊಸ ವರ್ಷದಲ್ಲಿ 6 ತಿಂಗಳು ಗುರುಬಲ ಇದ್ದು, ಈ ಅವಧಿಯಲ್ಲಿಯೇ ಶಿಸ್ತಿನಿಂದ ವರ್ತಿಸಿದ್ದಲ್ಲಿ ಲಾಭ-ಯಶಸ್ಸು ಸಿಗುವ ನಿರೀಕ್ಷೆ ಇದೆ. ಅಲ್ಲದೇ ಹಣಕಾಸಿನ ವ್ಯವಹಾರದಲ್ಲೂ ಕೆಲವು ಸಂದರ್ಭಗಳಲ್ಲಿ ಸಮಸ್ಯೆಗಳುಂಟಾಗುವ ಸಾಧ್ಯತೆ ಇದೆ.

ಮಾರುತಿಯನ್ನು ಆರಾಧಿಸಿ

ವೃಶ್ಚಿಕ ರಾಶಿಯವರು ವಿಶೇಷವಾಗಿ ಮಾರುತಿಯನ್ನು ಆರಾಧಿಸುವುದರಿಂದ ಹಾಗೂ ಮಾರುತಿ ಸಂಯುಕ್ತವಾದ ಸ್ವರ್ಣಾಕರ್ಷಣೆ ಯಂತ್ರವನ್ನು ಧರಿಸುವುದರಿಂದ ಕಷ್ಟ ಪರಿಹಾರವಾಗುತ್ತದೆ.