ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ,ಉತ್ತರ ಭದ್ರಾ ಪರ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಉಂಟಾಗುವ ದಿನ ನಿಮ್ಮದಾಗುತ್ತದೆ. ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ಯಶಸ್ಸು ಸಿಗುವ ದಿನ ನಿಮ್ಮದಾಗುತ್ತದೆ.
ವೃಷಭ ರಾಶಿ: ಈ ರಾಶಿಗೆ ಇಂದು ಅತೀ ಹೆಚ್ಚಿನ ಯಶಸ್ಸಿನ ದಿನವಾಗಿದೆ. ಶತ್ರುನಾಶ ಹಾಗೂ ಧ್ವಂಸವಾಗಲಿದೆ. ಹಿಂದಿನ ದಿನದಲ್ಲಿ ಉಂಟಾದ ಸಮಸ್ಯೆಗೆ ಪರಿಹಾರ ಸಿಗುತ್ತದೆ
ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದ್ದು ಮನೆಯಲ್ಲಿ ಹಾಗೂ ಸಂಸಾರದಲ್ಲಿ ನೆಮ್ಮದಿ ಸಿಗುತ್ತದೆ. ಕೋರ್ಟ್, ಕಛೇರಿ ವ್ಯವಹಾರದಲ್ಲೂ ತೊಂದರೆ ಎದುರಿಸಬೇಕಾಗುತ್ತದೆ.
ಕಟಕರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಅಣ್ಣ- ತಮ್ಮಂದಿರಿಂದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಯಾವುದೇ ಮುಖ್ಯ ನಿರ್ಧಾರಗಳು ಬೇಡ.
Vastu Tips: ಈ ವಸ್ತುಗಳನ್ನು ಉಡುಗೊರೆಗಳನ್ನು ನೀಡಬೇಡಿ ಎನ್ನುತ್ತದೆ ವಾಸ್ತು ಶಾಸ್ತ್ರ!
ಸಿಂಹ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಮನೆಯಲ್ಲಿ ನೆಮ್ಮದಿ ಹಾಗೂ ಸಂಸಾರದಲ್ಲಿ ನೆಮ್ಮದಿ ಸಿಗುತ್ತದೆ. ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ಯಶಸ್ಸುಗಳಿಸುವ ದಿನ ನಿಮ್ಮದಾಗುತ್ತದೆ.
ಕನ್ಯಾರಾಶಿ: ಈ ದಿನ ಕಷ್ಟಕರವಾದ ದಿನವಾಗಿದೆ. ದಾಂಪತ್ಯ ಹಾಗೂ ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲೂ ತೊಂದರೆ ಉಂಟಾಗಬಹುದು. ವೈಯಕ್ತಿಕವಾದ ವಿಚಾರದಲ್ಲೂ ತೊಡಕುಗಳು ಉಂಟಾಗಬಹುದು.
ತುಲಾ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗಬಹುದು. ಒಡೆದು ಹೋದ ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲೂ ತೊಂದರೆ
ವೃಶ್ಚಿಕ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಜಗಳ ಮಾಡಿ ಹೋದ ನಿಮ್ಮ ಮಿತ್ರರು ವಾಪಸ್ಸು ಬರಬಹುದು. ಹಣ ತಪ್ಪಿ ಹೋಗಿದ್ದರೆ ಕೈಗೆ ಬರುವ ಸಾಧ್ಯತೆ ಇದೆ.
ಧನು ರಾಶಿ: ಇಂದು ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಆರ್ಥಿಕವಾಗಿಯೂ ಪ್ರಗತಿ ಇರುತ್ತದೆ.
ಮಕರ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ತೊಂದರೆ ಉಂಟಾಗಬಹುದು. ಪ್ರೀತಿ ಪಾತ್ರರಿಂದಲೂ ಬೇಸರ ಉಂಟಾಗಬಹುದು.
ಕುಂಭ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ. ಯಾವುದೇ ಮುಖ್ಯ ನಿರ್ಧಾರಗಳು ಇಂದು ಬೆಡ
ಮೀನ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಬೇರೆಯವರಿಂದ ಖುಷಿ ನೆಮ್ಮದಿ ಸಿಗುತ್ತದೆ.ಬಿಸಿನೆಸ್ ವ್ಯವಹಾರದಲ್ಲೂ ಯಶಸ್ಸು