ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ,ಅಕ್ಟೋಬರ್ 25, 2026: ಕೆಲಸದಲ್ಲಿ ಹೆಚ್ಚಿನ ಪ್ರಗತಿ ಕಾಣುವ ದಿನ!

Horoscope Today October 25th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ತ್ರಯೋದಶಿ ತಿಥಿ, ರೇವತಿ ನಕ್ಷತ್ರದ ಅಕ್ಟೋಬರ್‌ 25ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ರೇವತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಕೆಲಸ ಕಾರ್ಯದಲ್ಲಿ ಯಶಸ್ಸು ಉಂಟಾಗುತ್ತದೆ. ಹಿಂದಿನ ದಿನದಲ್ಲಿ ಇದ್ದ ತೊಂದರೆಗಳೆಲ್ಲವೂ ಮಾಯವಾಗುತ್ತದೆ.

ವೃಷಭ ರಾಶಿ: ಈ ರಾಶಿಗೆ ಇಂದು ಅತೀ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಧನ ಲಾಭ ಮುಂದುವರಿಯುತ್ತಿದೆ.

ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ.  ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿಯೂ ಹೆಚ್ಚಿನ ಪ್ರಗತಿಯನ್ನು ನೀವು ಕಾಣುತ್ತೀರಿ.

ಕಟಕರಾಶಿ: ಇಂದು ಭಾಗ್ಯೋದಯವಾದ ದಿನವಾಗಿದೆ.‌ ಹಿರಿಯರ ಆಶೀರ್ವಾದದಿಂದ ಕೆಲಸ ಕಾರ್ಯದಲ್ಲಿ ಜಯ ಉಂಟಾಗಬಹುದು.

‌ಸಿಂಹ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಮನಸ್ಸಿನಲ್ಲಿ ನಾನಾ ರೀತಿಯ ಆಲೋಚನೆ ಉಂಟಾಗಬಹುದು. ಕೆಲಸ ಕಾರ್ಯದಲ್ಲೂ ಹೆಚ್ಚು ಅಡಚಣೆ ಉಂಟಾಗಬಹುದು.

ಕನ್ಯಾರಾಶಿ: ಈ ದಿನ ಅತ್ಯುತ್ತವಾದ ದಿನವಾಗಿದೆ. ಎಲ್ಲರ ಸಹಕಾರ ಹಾಗೂ ನೆಮ್ಮದಿ ಪ್ರಾಪ್ತಿಯಾಗುತ್ತದೆ.‌ ವೈಯಕ್ತಿಕವಾದ ವಿಚಾರದಲ್ಲೂ ಒಳ್ಳೆದಾಯದಾಗುತ್ತದೆ.

Vastu Tips: ದಾಸವಾಳದಲ್ಲಿದೆ ವೈವಾಹಿಕ ಜೀವನದ ಖುಷಿಯನ್ನು ಹೆಚ್ಚಿಸುವ ಶಕ್ತಿ; ವಾಸ್ತು ಪ್ರಕಾರ ಹೀಗೆ ಬಳಸಿ

ತುಲಾ ರಾಶಿ: ಇಂದು ಉತ್ತಮವಾದ ದುನವಾಗಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಉಂಟಾಗಬಹುದು. ಶತ್ರುಗಳನ್ನು ಹಿಮ್ಮೆಟ್ಟಲಿದ್ದು ಹೆಚ್ಚಿನ ಅಭಿವೃದ್ಧಿಯನ್ನು ಕಾಣುತ್ತೀರಿ‌.

ವೃಶ್ಚಿಕ ರಾಶಿ: ಇಂದು ಉತ್ತಮವಾದ ದಿನವಾಗಿದೆ.ಆದರೆ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗೃತಿಯನ್ನು ವಹಿಸಬೇಕಾಗುತ್ತದೆ‌. ಹಣ ಕಳೆದುಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ‌

ಧನು ರಾಶಿ: ಇಂದು ಉತ್ತಮವಾದ ದಿನವಾಗಿದೆ. ಬಂಧು- ಬಾಂಧವರ ಜೊತೆ ಖುಷಿಯಾದ ದಿನವನ್ನು ಕಳೆಯಲಿದ್ದೀರಿ. ಮನೆಯಲ್ಲೂ ಸಂತೋಷ ನೆಮ್ಮದಿ ಸಿಗುತ್ತದೆ.

ಮಕರ ರಾಶಿ: ಇಂದು ಉತ್ತಮವಾದ ದಿನ ವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಉಂಟಾಗಬಹುದು. ಪ್ರೀತಿ ಪಾತ್ರರಿಂದಲೂ ಖುಷಿ ಸಿಗಬಹುದು‌.

ಕುಂಭ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ. ಯಾರ ಸಹಕಾರ ಕೂಡ ನಿಮಗೆ ಸಿಗುವುದಿಲ್ಲ.

ಮೀನ ರಾಶಿ: ಇಂದು ಉತ್ತಮವಾದ ದಿನವಾಗಿದೆ.ಹಿಂದಿನ ಎರಡು ಮೂರು ದಿನಗಳ ತೊಂದರೆ ಮಾಯವಾಗುತ್ತದೆ. ಮುಂದಿನ ಕೆಲಸಕ್ಕೆ ಸರಿಯಾದ ಮಾರ್ಗದರ್ಶನ ಕೂಡ ಸಿಗುತ್ತದೆ.