ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ಉತ್ತರ ಪಾಲ್ಗುಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದ್ದು, ಸ್ನೇಹ- ಸಂಬಂಧದಲ್ಲಿ ಒಡಕು ಕಾಣಬಹುದು. ಬಾಸ್‌ಗಳಿಂದ ಕಿರಿಕಿರಿ ಉಂಟಾಗಬಹುದು. ಹಾಗಾಗಿ ತಾಳ್ಮೆಯಿಂದ ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕಾಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ವೈಯಕ್ತಿಕವಾಗಿ ಕೆಲವೊಂದು ಟೀಕೆಯನ್ನು ಕೇಳಬೇಕಾಗಿ ಬರಬಹುದು. ಹಾಗಾಗಿ ಸಂಯಮದಿಂದ ವರ್ತಿಸಬೇಕಾಗುತ್ತದೆ.
ಮಿಥುನ ರಾಶಿ: ಇಂದು ಉತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗುತ್ತದೆ. ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ. ಆದರೆ ಸ್ನೇಹ- ಸಂಬಂಧ ಬೆಳೆಸಿಕೊಳ್ಳುವ ಮುನ್ನ ಯೋಚಿಸಿ.
ಕಟಕ ರಾಶಿ: ಇಂದು ಕಷ್ಟದ ದಿನವಾಗಲಿದೆ. ಕುಟುಂಬದಲ್ಲಿ ಒಡಕು ಕಾಣಬಹುದು. ಸಿಟ್ಟು, ಕೋಪವನ್ನು ಇಂದು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.
ಯಾವ ದಿಕ್ಕು ಯಾವ ಅನಾರೋಗ್ಯ ಸಮಸ್ಯೆಗೆ ಕಾರಣ?
ಸಿಂಹ ರಾಶಿ: ಇಂದು ಉತ್ತಮ ದಿನವಾಗಲಿದೆ. ಎರಡು ಮೂರು ದಿನದಲ್ಲಿ ಇದ್ದ ತೊಂದರೆ ಎಲ್ಲವೂ ಮಾಯವಾಗುತ್ತದೆ. ಆದರೆ ಸ್ನೇಹ ಸಂಬಂಧದಲ್ಲಿ ಒಡಕು ಕಾಣಬಹುದು.
ಕನ್ಯಾ ರಾಶಿ: ಇಂದು ಕಷ್ಟದ ದಿನವಾಗಲಿದ್ದು ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ನಿಮ್ಮ ಅಭಿಮಾನಕ್ಕೆ ದಕ್ಕೆ ತರಬಹುದು. ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇರುತ್ತದೆ.
ತುಲಾ ರಾಶಿ: ಇಂದು ಉತ್ತಮ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಉಂಟಾಗಬಹುದು. ಆದರೆ ವೈಯಕ್ತಿಕವಾಗಿ ಜಾಗರೂಕತೆಯಿಂದ ಇರಬೇಕಾಗುತ್ತದೆ.
ವೃಶ್ಚಿಕ ರಾಶಿ: ಇಂದು ಉತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು. ಗೌರವ ಹೆಚ್ಚಾಗಬಹುದು.
ಧನು ರಾಶಿ: ಇಂದು ಉತ್ತಮ ದಿನವಾಗಲಿದೆ. ಆದರೆ ಸ್ನೇಹ ಸಂಬಂಧದಲ್ಲಿ ಎಚ್ಚರ ವಹಿಸಿ. ನಿಮ್ಮ ಅಭಿಮಾನಕ್ಕೆ ಅಡಚಣೆ ಬರದಂತೆ ನೋಡಿಕೊಳ್ಳಿ.
ಮಕರ ರಾಶಿ: ಇಂದು ಕಷ್ಟದ ದಿನವಾಗಲಿದೆ. ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗಬಹುದು. ಟೀಕೆಗಳನ್ನು ಇಂದು ಕೇಳಬೇಕಾಗಿ ಬರಬಹುದು.
ಕುಂಭ ರಾಶಿ: ಇಂದು ಉತ್ತಮ ದಿನವಾಗಲಿದೆ. ಸಂಸಾರದಲ್ಲಿ ನೆಮ್ಮದಿ ಹೆಚ್ಚಾಗುತ್ತದೆ. ಕೆಲಸ ಕಾರ್ಯದಲ್ಲಿ ಹಾಗೂ ಪ್ರೀತಿ ಪಾತ್ರರಿಂದ ನೆಮ್ಮದಿ.
ಮೀನ ರಾಶಿ: ಇಂದು ಉತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು, ಶತ್ರು ನಾಶವಾಗಲಿದೆ.