ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ ನವೆಂಬರ್ 2, 2026: ನೀವು ಆರಾಧಿಸುವ ವ್ಯಕ್ತಿಯಿಂದ ಬರಲಿದೆ ಸಂದೇಶ, ವ್ಯಾಪಾರದಲ್ಲಿ ಉತ್ತಮ ಪ್ರಗತಿ

Horoscope Today November 2: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ ಈ ದಿನ ಬಹುತೇಕ ಎಲ್ಲ ರಾಶಿಯವರಿಗೆ ಶುಭಫಲ ಗೋಚರವಾಗಲಿದೆ. ನಿಮ್ಮ ಭವಿಷ್ಯ ಹೇಗಿರಲಿದೆ ಎನ್ನುವುದರ ವಿವರ ಇಲ್ಲಿದೆ.

ಮೆಟಾ ಎಐ ರಚಿತ ಚಿತ್ರ

ಬೆಂಗಳೂರು: ಸೋಮವಾರ ಶಿವನ ಆರಾಧನೆಗೆ ಅತ್ಯಂತ ಪ್ರಸಸ್ತ ದಿನ ಎನ್ನುವ ನಂಬಿಕೆ ಇದೆ. ಹೀಗಾಗಿ ಇಂದು ಶಿವನಿಗೆ ಬಿಳಿ ಹೂವು ಅರ್ಪಿಸಿ. "ಓಂ ನಮಃ ಶಿವಾಯ" 21 ಬಾರಿ ಹೇಳಿ. ಮಳೆ ನೀರಿನಲ್ಲಿ ನಡೆಯಬೇಡಿ. 12 ರಾಶಿ ಭವಿಷ್ಯ ಇಲ್ಲಿದೆ.

ಮೇಷ ರಾಶಿ: ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಆತುರ ಬೇಡ.

ವೃಷಭ ರಾಶಿ: ಹಣಕಾಸಿನ ವಿಚಾರದಲ್ಲಿ ಉತ್ತಮ ದಿನವಾಗಿರಲಿದೆ. ವ್ಯಾಪಾರದಲ್ಲಿ ಲಾಭದ ನಿರೀಕ್ಷೆಯಿದೆ. ಹೊಸ ಯೋಜನೆ ರೂಪಿಸುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಹಣಕಾಸು ಪರಿಸ್ಥಿತಿ ಚೆನ್ನಾಗಿರಲಿದೆ. ಆದರೆ ಅನಗತ್ಯ ಖರ್ಚು ಬೇಡ.

ಮಿಥುನ ರಾಶಿ: ನಿಮ್ಮ ಮಾತುಗಾರಿಕೆ ಮತ್ತು ಬುದ್ಧಿವಂತಿಕೆಯಿಂದ ಕೆಲಸಗಳು ಸುಲಭವಾಗಿ ನೆರವೇರಲಿವೆ. ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಶುಭ ಸುದ್ದಿಯೊಂದು ಕೇಳುವ ಸಾಧ್ಯತೆಯಿದೆ. ಹೊಸ ಮೀಟಿಂಗ್, ಹೊಸ ಗೆಳೆತನ ಸಾಧ್ಯತೆ.

ಕರ್ಕಾಟಕ ರಾಶಿ: ಕುಟುಂಬದ ವಿಚಾರದಲ್ಲಿ ಸಂತೋಷ ದೊರೆಯಲಿದೆ. ಆರ್ಥಿಕವಾಗಿ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚು ತಪ್ಪಿಸಿ. ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿರಲಿದೆ. ಮನೆಯಲ್ಲಿ ಸಣ್ಣ ಜಗಳ. ಮಾತು ಕಡಿಮೆ, ಕೆಲಸ ಜಾಸ್ತಿ ಮಾಡಿ.

ಸಿಂಹ ರಾಶಿ: ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಬಹುದಿನಗಳ ಪ್ರಯತ್ನಕ್ಕೆ ಫಲ ದೊರೆಯಬಹುದು. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಇಂದು ನಿಮ್ಮ ಅದೃಷ್ಟದ ದಿನ. ಕೆಲಸದಲ್ಲಿ ಪ್ರಶಂಸೆ ಸಿಗಲಿದೆ.

ನವೆಂಬರ್ 1ರಿಂದ ಅಯೋಧ್ಯೆ ರಾಮಮಂದಿರ ದರ್ಶನದ ಸಮಯ ಬದಲು: ಹೊಸ ವೇಳಾಪಟ್ಟಿ ಇಲ್ಲಿದೆ

ಕನ್ಯಾ ರಾಶಿ: ಇಂದು ಕೆಲವು ಕೆಲಸಗಳಲ್ಲಿ ವಿಳಂಬವಾಗಬಹುದು. ತಾಳ್ಮೆಯಿಂದ ಮುನ್ನಡೆಯಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಆರೋಗ್ಯದ ಕಡೆ ಗಮನ ಕೊಡಿ. ಮಳೆಯಲ್ಲಿ ನೆನೆಯಬೇಡಿ. ಬಿಸಿ ನೀರು ಕುಡಿಯಿರಿ.

ತುಲಾ ರಾಶಿ: ನಿಮ್ಮ ಜೀವನದಲ್ಲಿ ಹೊಸ ಅವಕಾಶ ತೆರೆದುಕೊಳ್ಳಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳ ಚರ್ಚೆ ನಡೆಯಬಹುದು. ಆರ್ಥಿಕವಾಗಿ ಲಾಭದಾಯಕ ದಿನವಾಗಲಿದೆ. ಸ್ನೇಹಿತರಿಂದ ಸಹಾಯ ಸಿಗಲಿದೆ. ಹಳೆ ಸಾಲ ತೀರಲಿದೆ.

ವೃಶ್ಚಿಕ ರಾಶಿ: ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಹೊಸ ಕೆಲಸ ಆರಂಭಿಸಲು ಉತ್ತಮ ಸಮಯ. ಹಿರಿಯರಿಂದ ಮಾರ್ಗದರ್ಶನ ದೊರೆಯಲಿದೆ. ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಲಿದೆ. ಏನು ಅಂದುಕೊಂಡಿದ್ದಿರೋ ಅದಾಗಲಿದೆ.

ಧನು ರಾಶಿ: ವೃತ್ತಿ ಜೀವನದಲ್ಲಿ ಉತ್ತಮ ಬದಲಾವಣೆ ಕಂಡುಬರಲಿದೆ. ದೂರ ಪ್ರಯಾಣದ ಸಾಧ್ಯತೆಯಿದೆ. ಆರ್ಥಿಕವಾಗಿ ಅನುಕೂಲದ ದಿನ. ಸ್ನೇಹಿತರಿಂದ ಸಹಾಯ ದೊರೆಯಲಿದೆ.

ಮಕರ ರಾಶಿ: ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಿ. ಕುಟುಂಬದ ಬೆಂಬಲ ಇರಲಿದೆ. ಪ್ರಮೋಷನ್ ಮಾತು ಕೇಳಿ ಬರಬಹುದು.

ಕುಂಭ ರಾಶಿ: ಇಂದು ಶುಭ ಫಲ ಕಂಡು ಬರಲಿದೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಇರಲಿದೆ. ಹೊಸ ಆದಾಯದ ಮೂಲ ಸೃಷ್ಟಿಯಾಗಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಪ್ರೀತಿ ವಿಷಯದಲ್ಲಿ ಒಳ್ಳೆಯ ದಿನ. ನಿಮ್ಮ ಕ್ರಶ್‌ನಿಂದ ಸಂದೇಶ ಬರಬಹುದು.

ಮೀನ ರಾಶಿ: ನಿಮ್ಮ ಬಹುದಿನಗಳ ಆಸೆ ಈಡೇರುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ ನಡೆಯಲಿವೆ. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರೋಗ್ಯದ ಬಗ್ಗೆ ಗಮನವಿರಲಿ. ಸ್ವಲ್ಪ ಸುಸ್ತು ಎದುರಾಗಲಿದೆ. ಬೇಗ ಮಲಗಿ.

Ramesh Ballamoole

View all posts by this author