ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಜುಲೈ 31, 2026: ಇಂದು ವೃತ್ತಿ ಜೀವನದಲ್ಲಿ ಹೊಸ ಬದಲಾವಣೆ ಸಾಧ್ಯ!

Horoscope Today July 31st: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷದ, ತೃತೀಯ ತಿಥಿ, ಶತಭಿಷಾ ನಕ್ಷತ್ರದ, ಜುಲೈ 31ನೇ ತಾರೀಖಿನ ಈ ದಿ‌ನ ಶ್ರವಣ ಶುಕ್ರವಾರವಾಗಿದೆ. ಇಂದು ಹೊಸ ಯೋಜನೆಗಳನ್ನು ಆರಂಭಿಸಲು ಹಾಗೂ ವೃತ್ತಿ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪೂರಕವಾಗಿದೆ.

ಇಂಟರ್ ನೆಟ್ ಚಿತ್ರ

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಶತಭಿಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದ್ದು ಹೊಸ ಅವಕಾಶಗಳು ಒದಗಿ ಬರಬಹುದು. ದಾಂಪತ್ಯದಲ್ಲಿ ನೆಮ್ಮದಿ ಇದ್ದು ಸಂಗಾತಿಯಿಂದ ಖುಷಿ ಸಿಗುತ್ತದೆ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಕೆಲಸದ ಒತ್ತಡ ಹೆಚ್ಚಾಗಿರುತ್ತದೆ.ಆದರೆ ಶ್ರಮ ಪಟ್ಟಿದ್ದಕ್ಕೆ ಸರಿಯಾದ ಪ್ರತಿಫಲ ಸಿಗುತ್ತದೆ. ಹಿಂದೆ ಇದ್ದ ಸಾಲದ ಸಮಸ್ಯೆ ಇಂದು ನಿವಾರಣೆಯಾಗುತ್ತದೆ.

ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ. ಹೊಸ ಯೋಜನೆಗಳಿಗೆ ಹೂಡಿಕೆ ಮಾಡಲು ಇಂದು ಸರಿಯಾದ ದಿನವಾಗಿದೆ. ಅದೇ ರೀತಿ ಸಂಗಾತಿಯೊಂದಿಗೂ ಇಂದು ನೆಮ್ಮದಿಯನ್ನು ಕಾಣುತ್ತೀರಿ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದೆ. ಮನೆ,ವಾಹನ ಹಾಗೂ ಆಸ್ತಿ ವಿಚಾರದಲ್ಲಿ ಲಾಭದಾಯಕವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಒದಗಿ ಬರಬಹುದು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮವಾದ ದಿನ ವಾಗಿದೆ. ಇಂದು ಉದ್ಯೋಗದಲ್ಲಿ ನಿಮಗೆ ಪ್ರಗತಿ ಹೆಚ್ಚಲಿದೆ. ಆದರೆ ಹಿರಿಯರ ಆಶೀರ್ವಾದವೂ ಬಹಳಷ್ಟು ಪ್ರಮುಖವಾಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಹಣಕಾಸಿನ ನಿಯಂತ್ರಣ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಆನ್ ಲೈನ್ ಕೆಲಸದಲ್ಲಿ ನೀವು ಇಂದು ಲಾಭ ಪಡೆಯುತ್ತೀರಿ‌.

Vastu Tips: ಮನೆಯಲ್ಲಿ ನೀರಿನ ಟ್ಯಾಂಕ್ ಅನ್ನು ಯಾವ ದಿಕ್ಕಿನಲ್ಲಿಡಬೇಕು? ಈ ಕುರಿತು ಪಾಲಿಸಬೇಕಾದ ವಾಸ್ತು ನಿಯಮಗಳು ಇವು

ತುಲಾ ರಾಶಿ: ತುಲಾ ರಾಶಿ ಅವರಿಗೆ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಬರಬಹುದು. ಆದರೆ ಹಣಕಾಸಿನ ವ್ಯವಹಾರದಲ್ಲಿ ನಿಯಂತ್ರಣ ಕಂಡುಕೊಳ್ಳಬೇಕಾಗುತ್ತದೆ.

ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಆರ್ಥಿಕವಾಗಿ ಇಂದು ಯಶಸ್ಸು ಪಡೆಯುತ್ತೀರಿ. ಅದೇ ರೀತಿ ಆಧ್ಯಾತ್ಮಿಕವಾಗಿಯೂ ನೆಮ್ಮದಿ ಸಿಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಉತ್ತಮ ದಿನವಾಗಿದೆ. ಆದರೆ ಅನಗತ್ಯ ಒತ್ತಡದಿಂದ ದೂರವಿದ್ದರೆ ಒಳಿತು, ತಾಳ್ಮೆಯಿಂದ ಯಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಹೂಡಿಕೆ ಮಾಡಲು ಇಂದು ಸರಿಯಾದ ಸಮಯವಾಗಿದೆ. ಇದರಿಂದ ಭವಿಷ್ಯಕ್ಕೂ ಒಳಿತಾಗಲಿದೆ.

ಕುಂಭ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಹಾಗೂ ಹೊಸ ಆಲೋಚನೆಗಳು ಅಭಿವೃದ್ಧಿಯಾಗಲು ಸಹಾಯ ಮಾಡಬಹುದು‌.

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಸೃಜನಾತ್ಮಕ ಕೆಲಸದಲ್ಲಿ ಯಶಸ್ಸು, ನೆಮ್ಮದಿ ಸಿಗುತ್ತದೆ.ಹಣಕಾಸಿನ ವಿಚಾರದಲ್ಲಿ ಜಾಗೃತಿ ಅಗತ್ಯ.