ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಸೆಪ್ಟೆಂಬರ್ 30, 2026: ಇಂದು ಮುಖ್ಯವಾದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ

Horoscope Today September 30th: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ, ಭರಣಿ ನಕ್ಷತ್ರದ, ಸೆಪ್ಟೆಂಬರ್ 30ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಭರಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮಾತಿನಲ್ಲಿ ನಿಗಾ ಇರಿಸಿ. ಸ್ತ್ರೀಯರ ಜತೆ ಬಹಳಷ್ಟು ತಾಳ್ಮೆಯಿಂದ ಮಾತನಾಡಬೇಕಾಗುತ್ತದೆ.

ವೃಷಭ ರಾಶಿ: ಇಂದು ಈ ರಾಶಿಯವರಿಗೆ ಕ್ಷೇಶ ಉಂಟಾಗುವ ದಿನವಾಗಲಿದೆ. ಯಾವುದೇ ಮುಖ್ಯ ನಿರ್ಧಾರ ಇಂದು  ಕೈಗೊಳ್ಳಲು ಹೋಗಬೇಡಿ. ಮಿತ್ರತ್ವದಲ್ಲಿ ಒಡಕು ಉಂಟಾಗುವ ಸಾಧ್ಯತೆ ಇದೆ.

ಮಿಥುನ ರಾಶಿ: ಇಂದು ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು, ಮನಸ್ಸಿಗೆ ಹೆಚ್ಚಿನ ತೃಪ್ತಿ ಸಿಗುತ್ತದೆ. ಧನ ಲಾಭದ ಸೂಚನೆ ಕೂಡ ಇದೆ.

ಕಟಕ ರಾಶಿ: ಇಂದು ಉತ್ತಮ ದಿನವಾಗಲಿದೆ. ಅದೃಷ್ಟದ ದಿನವಾಗಲಿದ್ದು, ಹೆಚ್ಚಿನ ನೆಮ್ಮದಿ ಸಿಗುತ್ತದೆ. ಕಾರ್ಯ ಕ್ಷೇತ್ರದಲ್ಲಿ ಮುನ್ನಡೆ ಕಾಣುತ್ತೀರಿ‌.

ಸಿಂಹ ರಾಶಿ: ಇಂದು ಉತ್ತಮವಾದ ದಿನವಾಗಲಿದೆ. ಆದರೆ ಕೆಲವೊಂದು ವಿಚಾರದಲ್ಲಿ ಬೇಸರ ಉಂಟಾಗಬಹುದು‌. ಇದಕ್ಕಾಗಿ ದೇವಿಯ ಆರಾಧನೆ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಕನ್ಯಾ ರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಪ್ರೀತಿ ಪಾತ್ರರ ಸಹಕಾರ ಸಿಗದೇ ಇರಬಹುದು. ಧ್ಯಾನಾದಿಗಳನ್ನು ಮಾಡಿ ಇಂದು ಸಮಯ ಕಳೆಯಬೇಕಾಗುತ್ತದೆ.

ತುಲಾ ರಾಶಿ: ಇಂದು ಉತ್ತಮ ದಿನವಾಗಲಿದೆ. ಆದರೆ ಮಾತುಕತೆಯಲ್ಲಿ ಎಚ್ಚರಿಕೆಯಿಂದ ಇರಿ. ಬೇರೆಯವರ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ.

ಈ ವಸ್ತುಗಳನ್ನು ಉಡುಗೊರೆಗಳನ್ನು ನೀಡಬೇಡಿ ಎನ್ನುತ್ತದೆ ವಾಸ್ತು ಶಾಸ್ತ್ರ!

ವೃಶ್ಚಿಕ ರಾಶಿ: ಇಂದು ಉತ್ತಮ ದಿನವಾಗಲಿದೆ. ಶತ್ರು ನಾಶವಾಗಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಯಶಸ್ಸು ಸಿಗಲಿದೆ.

ಧನು ರಾಶಿ: ಇಂದು ಕಷ್ಟದ ದಿನವಾಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿಕೊಳ್ಳುವುದು ಅಗತ್ಯ‌. ಬ್ಯಾಂಕ್ ವ್ಯವಹಾರದಲ್ಲೂ ಜಾಗರೂಕರಾಗಿರಿ.

ಮಕರ ರಾಶಿ: ಇಂದು ಕಷ್ಟಕದ ದಿನವಾಗಲಿದೆ. ಮನೆಯ ಬಗ್ಗೆ ಹೆಚ್ಚು ಯೋಚನೆ ಮಾಡಬೇಕಾಗುತ್ತದೆ. ಯೋಚಿಸಿ ನಿರ್ಧಾರ ಕೈಗೊಳ್ಳುವುದು ಒಳಿತು.

ಕುಂಭ ರಾಶಿ: ಇಂದು ಉತ್ತಮ ದಿನವಾಗಲಿದ್ದು, ನೆಮ್ಮದಿ ಕಾಣುತ್ತೀರಿ. ಕೆಲಸ ಕಾರ್ಯದಲ್ಲೂ ಹೆಚ್ಚಿನ ಯಶಸ್ಸು, ಸಹೋದರ- ಸಹೋದರಿಯರಿಂದ ನೆಮ್ಮದಿ.

ಮೀನ ರಾಶಿ: ಇಂದು ಉತ್ತಮ ದಿನವಾಗಲಿದೆ.‌ ಸಂಸಾರದಲ್ಲಿ ಹೆಚ್ಚಿನ ನೆಮ್ಮದಿ, ಖುಷಿ ಸಿಗುತ್ತದೆ. ಅಂದುಕೊಂಡ ಕೆಲಸಗಳು ಯಶಸ್ವಿಯಾಗಿ ನಡೆಯುತ್ತವೆ.