ಬೆಂಗಳೂರು: ಇಂದು ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ ಶರದೃತು, ಫಾಲ್ಗುಣ ಮಾಸೆ, ವಿಶಾಖ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ವಿಶಾಖ ನಕ್ಷತ್ರ ಇದ್ದು ಇದರ ಅಧಿಪತಿ ವಕ್ರಿ ಗುರು ಆಗಿದ್ದಾನೆ. ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಎಲ್ಲ ರೀತಿಯ ಸಹಕಾರ ಸಿಗುತ್ತದೆ. ದಾಂಪತ್ಯದಲ್ಲೂ ನೆಮ್ಮದಿ ಇರುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಶತ್ರುಗಳನ್ನು ಹಿಮ್ಮೆಟ್ಟಲಿದ್ದು ಎಲ್ಲ ಕೆಲಸ ಕಾರ್ಯದಲ್ಲಿ ಜಯ ಪ್ರಾಪ್ತಿಯಾಗುತ್ತದೆ.
ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ದಿನ ಭವಿಷ್ಯ:
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಕಷ್ಟಕರವಾದ ಗೋಚರ ಇರಲಿದೆ. ಪ್ರೀತಿ, ಪ್ರೇಮ ವಿಚಾರದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ನಿಮಗೆ ಆಪಾದನೆಗಳು ಬರುವ ಸಾಧ್ಯತೆಗಳು ಕೂಡ ಹೆಚ್ಚಾಗಿ ಇರುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ತಾಯಿಯ ಆರೋಗ್ಯ, ಮನೆಯ ಜವಾಬ್ದಾರಿ, ಕೋರ್ಟ್, ವ್ಯವಹಾರದಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಯಾವುದೇ ಮುಖ್ಯ ನಿರ್ಧಾರ ಮಾಡುವಾಗ ಜಾಗೃತರಾಗಿ ಇರಬೇಕಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಬಂಧು ಮಿತ್ರರು ಸ್ನೇಹಿತರಿಂದ ನಿಮಗೆ ಒಳಿತು ಆಗಲಿದೆ. ಎಲ್ಲರಿಂದ ಸಹಕಾರ ಪ್ರಾಪ್ತಿಯಾಗುತ್ತದೆ.
Vastu Tips: ಮನೆಯ ಸಮೃದ್ಧಿಗೆ ಬೆಸ್ಟ್ ಈ ದಿಕ್ಕು; ಆದ್ರೆ ಅಲ್ಲಿ ಮಲಗುವ ಕೋಣೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ.. ಇಂದು ನಿಮಗೆ ಸಂಸಾರದಲ್ಲಿ ನೆಮ್ಮದಿ ಸಿಗುತ್ತದೆ. ಧನ ಆಗಮನದ ಸೂಚನೆಗಳು ಕೂಡ ನಿಮಗೆ ಇರಬಹುದು.
ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನದಲ್ಲಿ ಮನಸ್ಸಿನ ನೋವೆಲ್ಲ ಇಂದು ಮಯವಾಗುತ್ತದೆ. ಮುಂದೇನು ಮಾಡಬೇಕು ಎನ್ನುವ ಮಾರ್ಗದರ್ಶನ ನಿಮಗೆ ಸಿಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕ್ಲಿಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರ ಬೇಡ. ಮೀಟಿಂಗ್, ವ್ಯವಹಾರ ಯಾವುದೇ ಮಾಡಲು ಹೋಗಬೇಡಿ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಖುಷಿಯಾದ ದಿನವನ್ನು ಕಳೆಯಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ನೆಮ್ಮದಿ ಇದ್ದು ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ನಿಮಗೆ ಸಿಗುತ್ತದೆ.
ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಇಂದು ಭಾಗ್ಯೋದಯವಾದ ದಿನವಾಗಿದ್ದು ಹಿಂದಿನ ಎರಡು ಮೂರು ದಿನದ ನೋವೆಲ್ಲ ಮಾಯವಾಗಲಿದೆ.
ಮೀನ ರಾಶಿ: ಮೀನ ರಾಶಿಗೆ ಕಷ್ಟಕರವಾದ ದಿನವಾಗಿದೆ. ಯಾವುದೇ ಮುಖ್ಯ ನಿರ್ಧಾರ ಮಾಡಲು ಹೋಗಬೇಡಿ. ಆಧ್ಯಾತ್ಮಿಕತೆಯಿಂದ ನೀವು ದಿನವನ್ನು ಕಳೆಯಬೇಕಾಗುತ್ತದೆ